ಹೊಸ ಪವರ್‌ಫುಲ್ ಹೀರೊ ಹಂಕ್ ಬಿಡುಗಡೆ
ದೇಶದ ಅತಿ ದೊಡ್ಡ ದ್ವಿಚಕ್ರ ಪ್ರಯಾಣಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ತನ್ನ ಜನಪ್ರಿಯ ಹಂಕ್ ಪರಿಷ್ಕೃತ ಮಾದರಿಯನ್ನು ಬಿಡುಗಡೆಗೊಳಿಸಿದೆ. ನೂತನ 2016 ಹೀರೊ ಹಂಕ್ ಅನೇಕ ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.
ನೂತನ ಹೀರೊ ಹಂಕ್ ಸಿಂಗಲ್ ಹಾಗೂ ಡಬಲ್ ಡಿಸ್ಕ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಇದರ ದೆಹಲಿ ಪ್ರಾರಂಭಿಕ ಬೆಲೆ 69.795 ರು.ಗಳಾಗಿರಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಹೀರೊ ಹಂಕ್ ಸಿಂಗಲ್ ಡಿಸ್ಕ್: 69,795 ರು.
- ಹೀರೊ ಹಂಕ್ ಡಬಲ್ ಡಿಸ್ಕ್: 72,825 ರು.

ನೂತನ ಹೀರೊ ಹಂಕ್ 149.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಮಾದರಿಯಲ್ಲಿರುವುದಕ್ಕೆ ಸಮಾನವಾಗಿದೆ. ಇದರ ಎಂಜಿನ್ 13.5 ಎನ್ ಎಂ ತಿರುಗುಬಲದಲ್ಲಿ 15.6 ಅಶ್ವಶಕ್ತಿ ಉತ್ಪಾದಿಸಲಿದ್ದು, ಐದು ಸ್ಪೀಡ್ ಗೇರ್ ಬಾಕ್ಸ್ ಇರಲಿದೆ. ಹಿಂದಿನ ಎಂಜಿನ್ 12.8 ಎನ್ಎಂ ತಿರುಗುಬಲದಲ್ಲಿ 14.2 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು.

ಎಂಜಿನ್ ಶಕ್ತಿ ಬದಲಾವಣೆ ಹೊರತಾಗಿ 2016 ಹಂಕ್ ನಲ್ಲಿ ನೂತನ ಗ್ರಾಫಿಕ್ಸ್, ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಮತ್ತು ಇನ್ವರ್ಟಡ್ ಜಿಆರ್‌ಎಸ್ ಸಸ್ಪೆನ್ಷನ್ ವ್ಯವಸ್ಥೆಯಿರಲಿದೆ.

ಆರು ಆಕರ್ಷಕ ಬಣ್ಣಗಳು
ಬೋಲ್ಡ್ ಬ್ರೌನ್,
ಪ್ಯಾಂಥರ್ ಬ್ಲ್ಯಾಕ್,
ಮ್ಯಾಟ್ ಬ್ಲ್ಯಾಕ್,
ಎಬೊನಿ ಗ್ರೇ,
ಫೋರ್ಸ್ ಸಿಲ್ವರ್,
ಬ್ಲೇಝಿಂಗ್ ರೆಡ್.

ಆಯಾಮ
ಉದ್ದ: 2080 ಎಂಎಂ
ಅಗಲ: 765 ಎಂಎಂ
ಎತ್ತರ: 1095 ಎಂಎಂ
ಚಕ್ರಾಂತರ: 13254 ಎಂಎಂ
ಭಾರ: 130 ಕೆ.ಜಿ
ಗ್ರೌಂಡ್ ಕ್ಲಿಯರನ್ಸ್: 163 ಎಂಎಂ

ಸಸ್ಪೆನ್ಷನ್
ಮುಂದುಗಡೆ ಟೆಲಿಸ್ಕಾಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್,
ಹಿಂದುಗಡೆ ಸ್ವಿಂಗ್ ಆರ್ಮ್ ಜೊತೆ ಐದು ವಿಧಗಳಲ್ಲಿ ಹೊಂದಾಣಿಸಬಹುದಾದ ಇನ್ವರ್ಟಡ್ ಗ್ಯಾಸ್ ರಿಸರ್ವೈರ್ ಸಸ್ಪೆನ್ಷನ್.

ಬ್ರೇಕ್
ಮುಂದುಗಡೆ ಸ್ಟ್ಯಾಂಡರ್ಡ್ 240 ಎಂಎಂ ಡಿಸ್ಕ್
ಹಿಂದುಗಡೆ 220 ಎಂಎಂ ಡಿಸ್ಕ್ (ಐಚ್ಛಿಕ)

ಪ್ರತಿಸ್ಪರ್ಧಿಗಳು
ಹೋಂಡಾ ಸಿಬಿ ಯೂನಿಕಾರ್ನ್ 160,
ಮುಂಬರುವ ಸಿಬಿ ಹಾರ್ನೆಟ್,
ಸುಜುಕಿ ಜಿಕ್ಸರ್,
ಯಮಹಾ ಎಫ್‌ಝಡ್ ಶ್ರೇಣಿ.


Click it and Unblock the Notifications








