ಮಗದೊಂದು ಐಕಾನಿಕ್ ಸ್ಕೂಟರ್ ಬ್ರಾಂಡ್ ಭಾರತಕ್ಕೆ

By Nagaraja

ಸನ್ನಿವೇಶ ಬದಲಾಗಿದೆ. ಭಾರತೀಯ ವಾಹನ ಮಾರುಕಟ್ಟೆಯೂ ಬದಲಾಗುತ್ತಿದೆ. ಇದರ ಪರಿಣಾಮವೆಂಬಂತೆ ಇಡೀ ವಾಹನ ಜಗತ್ತೇ ದೇಶದತ್ತ ಕಣ್ಣೆತ್ತಿ ನೋಡುತ್ತಿದೆ. ಇಲ್ಲಿನ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇನ್ಯಾಕೆ ತಂಡ ಎಂಬಂತೆ ದೇಶದ ಮಾರುಕಟ್ಟೆಯಲ್ಲಿ ಲಾಭ ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ಬ್ರಾಂಡ್ ಗಳ ಪರಚಯವಾಗುತ್ತಲೇ ಇದೆ.

ಕೆಲವು ವರ್ಷಗಳ ಹಿಂದೆ ವೆಸ್ಪಾ ಪ್ರೀಮಿಯಂ ಸ್ಕೂಟರ್ ಬ್ರಾಂಡ್ ಅನ್ನು ಪರಿಚಯಿಸಿದ್ದ ಇಟಲಿಯ ಮೂಲದ ಐಕಾನಿಕ್ ಸಂಸ್ಥೆ ಪಿಯಾಜಿಯೊ ಇಂಡಿಯಾ, ಮಗದೊಂದು ಪ್ರಖ್ಯಾತ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಅದು ಯಾವುದು ಅಂತೀರಾ? ಈ ಆಸಕ್ತಿದಾಯಕ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಭೇಟಿ ಕೊಡಿರಿ...

ಭಾರತಕ್ಕೆ ಬರುತ್ತಿದೆ ಐಕಾನಿಕ್ ಎಪ್ರಿಲಿಯಾ ಸ್ಕೂಟರ್

ಹೌದು, ಪಿಯಾಜಿಯೊ ಇಂಡಿಯಾ ಸಂಸ್ಥೆಯು ಭಾರತದಲ್ಲಿ ಎಪ್ರಿಲಿಯಾ ಬ್ರಾಂಡ್ ಪರಿಚಯಿಸುವ ಯೋಜನೆ ಹೊಂದಿದ್ದು, ಇದರಂತೆ ಜನಪ್ರಿಯ ಎಸ್ ಆರ್ ಮೋಟಾರ್ಡ್ 125 ಸ್ಕೂಟರ್ ದೇಶದಲ್ಲಿ ಬಿಡುಗಡೆಯಾಗಲಿದೆ.

ಭಾರತಕ್ಕೆ ಬರುತ್ತಿದೆ ಐಕಾನಿಕ್ ಎಪ್ರಿಲಿಯಾ ಸ್ಕೂಟರ್

ವೆಸ್ಪಾ ತರಹನೇ ಅಷ್ಟೇ ಮಹತ್ವ ಹಾಗೂ ಬ್ರಾಂಡ್ ಮೌಲ್ಯ ಕಾಪಾಡಿಕೊಂಡಿರುವ ಎಪ್ರಿಲಿಯಾ, ಪ್ರೀಮಿಯಂ ಸ್ಕೂಟರ್ ಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.

ಭಾರತಕ್ಕೆ ಬರುತ್ತಿದೆ ಐಕಾನಿಕ್ ಎಪ್ರಿಲಿಯಾ ಸ್ಕೂಟರ್

ಇದು ದ್ವಿಚಕ್ರ ವಾಹನ ವಿಭಾಗದಲ್ಲಿ ದೇಶದ ಮಾರುಕಟ್ಟೆಗೆ ಹೊಸ ಆಯಾಮ ನೀಡಲಿದ್ದು, ಮತ್ತಷ್ಟು ಉನ್ನತ್ತ ಮಟ್ಟಕ್ಕೆ ಕೊಂಡೊಯ್ಯಲಿದೆ. ನಿಜಕ್ಕೂ ಗುಣಮಟ್ಟದ ಬ್ರಾಂಡ್ ದೇಶಕ್ಕೆ ಪರಿಚಯವಾಗುತ್ತಿರುವುದು ವಾಹನ ಜಗತ್ತಿನ ನಿಟ್ಟಿನಲ್ಲಿ ಶುಭಸೂಚಕವೆನಿಸಿದೆ.

ಭಾರತಕ್ಕೆ ಬರುತ್ತಿದೆ ಐಕಾನಿಕ್ ಎಪ್ರಿಲಿಯಾ ಸ್ಕೂಟರ್

ಮೋಟಾರ್ ಸೈಕಲ್ ವಿಭಾಗವನ್ನು ಗಮನಿಸಿದಾಗ ಹೊಸ ಹೊಸ ಸೂಪರ್ ಬೈಕ್ ಗಳ ಬ್ರಾಂಡ್ ಭಾರತಕ್ಕೆ ಪರಿಚಯವಾಗುತ್ತಲೇ ಇದೆ. ಈಗ ಸ್ಕೂಟರ್ ಗಳ ವಿಭಾಗದಲ್ಲೂ ಇಂತಹದೊಂದು ಬೆಳವಣಿಗೆ ಕಂಡುಬರುತ್ತಿರುವುದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಭಾರತಕ್ಕೆ ಬರುತ್ತಿದೆ ಐಕಾನಿಕ್ ಎಪ್ರಿಲಿಯಾ ಸ್ಕೂಟರ್

ಎಪ್ರಿಲಿಯಾ ಮೋಟಾರ್ಡ್ 125 ಸ್ಕೂಟರ್ ಆಕರ್ಷಕ ವಿನ್ಯಾಸ ಪಡೆದುಕೊಳ್ಳಲಿದ್ದು, ಡಿಸ್ಕ್ ಬ್ರೇಕ್, ಅಲಾಯ್ ವೀಲ್, ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್, ರಿಯರ್ ಮೊನೊಶಾಕ್, ಹ್ಯಾಂಡಲ್ ಬಾರ್ ನಲ್ಲಿ ಟರ್ನ್ ಇಂಡಿಕೇಟರ್, ಸಾಂಪ್ರಾದಾಯಿಕ ರಿಯರ್ ಮಡ್ ಗಾರ್ಡ್, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ವಿಶಿಷ್ಟ ಗ್ರಾಫಿಕ್ಸ್ ಸೇವೆಯನ್ನು ಪಡೆಯಲಿದೆ.

ಭಾರತಕ್ಕೆ ಬರುತ್ತಿದೆ ಐಕಾನಿಕ್ ಎಪ್ರಿಲಿಯಾ ಸ್ಕೂಟರ್

125 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಪ್ರಸ್ತುತ ಸ್ಕೂಟರ್ 9.3 ಅಶ್ವಶಕ್ತಿ (8.2 ಎನ್ ಎಂ ತಿರುಗುಬಲ) ಉತ್ಪಾದಿಸಲಿದೆ. ಅಂತೆಯೇ ಸಹಜವಾಗಿಯೇ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಭಾರತಕ್ಕೆ ಬರುತ್ತಿದೆ ಐಕಾನಿಕ್ ಎಪ್ರಿಲಿಯಾ ಸ್ಕೂಟರ್

ಭಾರತದಲ್ಲಿದ್ದು ಬಿಡುಗಡೆಯಾದ್ದಲ್ಲಿ ಹೀರೊದ ಝಿರ್ ಮತ್ತು ಹೋಂಡಾ ಪಿಸಿಎಕ್ಸ್150 ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ.

ಭಾರತಕ್ಕೆ ಬರುತ್ತಿದೆ ಐಕಾನಿಕ್ ಎಪ್ರಿಲಿಯಾ ಸ್ಕೂಟರ್

ಎಪ್ರಿಲಿಯಾ ಐಕಾನಿಕ್ ಬೈಕ್ ಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಅಷ್ಟಕ್ಕೂ ಇಲ್ಲಿನ ಚಿತ್ರಗಳನ್ನು ಗಮನಿಸಿರುವ ನೀವು ಎಪ್ರಿಲಿಯಾ ಸ್ಕೂಟರ್ ಕೊಂಡುಕೊಳ್ಳಲು ಬಯಸುವೀರಾ? ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ನಮೂದಿಸಿರಿ. ತಾಜಾ ಕಾರು ಹಾಗೂ ಬೈಕ್ ಸುದ್ದಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ.


More from DriveSpark

Article Published On: Friday, July 10, 2015, 11:23 [IST]
English summary
Piaggio plans to launch Aprilia SR Motard 125 scooter in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+