ಭಾರತದಲ್ಲಿ ವೆಸ್ಪಾ ರೆಡ್ ದ್ವಿಚಕ್ರ ವಾಹನ ಬಿಡುಗಡೆ ; ಬೆಲೆ ರೂ. 87,009

Written By:

ಅತ್ಯಂತ ಶಕ್ತಿಶಾಲಿ ಲೈಫ್ ಸ್ಟೈಲ್ ಸ್ಕೂಟರ್ ಎಂಬ ಖ್ಯಾತಿ ಪಡೆದಿರುವ ಪಿಯಾಜಿಯೊ ಕಂಪನಿಯ ವೆಸ್ಪಾ ದ್ವಿಚಕ್ರದ ಮತ್ತೊಂದು 'ರೆಡ್' ಹೆಸರಿನ ಆವೃತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ವೆಸ್ಪಾ ರೆಡ್ ದ್ವಿಚಕ್ರ ವಾಹನ ಬಿಡುಗಡೆ ; ಬೆಲೆ ರೂ. 87,009

ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಪಿಯಾಜಿಯೊ ಕಂಪನಿ ಭಾರತದಲ್ಲಿ ತನ್ನ ಪ್ರಖ್ಯಾತ ವೆಸ್ಪಾ ರೆಡ್ 125 ಸ್ಕೂಟರನ್ನು ಭಾರತದಲ್ಲಿ ಆರಂಭಿಸಿದ್ದು, ವಿಶೇಷ ಆವೃತ್ತಿಯ ಈ ಸ್ಕೂಟರ್ ರೂ. 87,009 ಎಕ್ಸ್ ಶೋರೂಂ(ಮುಂಬೈ) ಬೆಲೆಯಲ್ಲಿ ಬಿಡುಗಡೆಯಾಗಿದೆ.

ಭಾರತದಲ್ಲಿ ವೆಸ್ಪಾ ರೆಡ್ ದ್ವಿಚಕ್ರ ವಾಹನ ಬಿಡುಗಡೆ ; ಬೆಲೆ ರೂ. 87,009

ಹೊಚ್ಚ ಹೊಸ ವೆಸ್ಪಾ ರೆಡ್ ದ್ವಿಚಕ್ರ ವಾಹನವು ಸ್ಟ್ಯಾಂಡರ್ಡ್ ಆವೃತಿಯಾದ ವೆಸ್ಪಾ 125 ಸ್ಕೂಟರನ್ನು ಆಧರಿಸಿದ್ದು, ಪ್ರಖ್ಯಾತ ರೆಡ್ ಸಂಸ್ಥೆಯ ಸಹಯೋಗದೊಂದಿಗೆ ಈ ಸ್ಕೂಟರ್ ಪ್ರಾರಂಭಿಸಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ವೆಸ್ಪಾ ರೆಡ್ ದ್ವಿಚಕ್ರ ವಾಹನ ಬಿಡುಗಡೆ ; ಬೆಲೆ ರೂ. 87,009

ಜಗತ್ತಿನ ಮಾರಣಾತಿಕ ಕಾಯಿಲೆಗಳಲ್ಲಿ ಒಂದಾದ ಏಡ್ಸ್ ವಿರುದ್ಧ ಹೋರಾಟವನ್ನು ಬೆಂಬಲಿಸಿ ಜಾಗತಿಕ ಬ್ರಾಂಡ್‌ಗಳ ಸಹಯೋಗದೊಂದಿಗೆ ಈ ಜಾಗೃತಿ ಮೂಡಿಸುವ ಕಾರ್ಯಕ್ಕೆ ಪಿಯಾಜಿಯೊ ಕಂಪನಿ ಮುಂದಾಗಿದ್ದು, ಮೊದಲ ಆವೃತಿಯಾಗಿ ವೆಸ್ಪಾ ರೆಡ್ ಬಿಡುಗಡೆಯಾಗಿದೆ.

ಭಾರತದಲ್ಲಿ ವೆಸ್ಪಾ ರೆಡ್ ದ್ವಿಚಕ್ರ ವಾಹನ ಬಿಡುಗಡೆ ; ಬೆಲೆ ರೂ. 87,009

ಪ್ರತ್ಯೇಕವಾಗಿ ಭಾರತಕ್ಕೆಂದೇ ಈ ವಿಶೇಷ ಆವೃತಿಯನ್ನು ಬಿಡುಗಡೆ ಮಾಡಲಾಗಿದ್ದು, ಮಾರಾಟಗೊಳ್ಳುವ ಪ್ರತಿ ವಾಹನದ ಲಾಭದಲ್ಲಿ $ 50(ಸುಮಾರು Rs.3,277)ರಷ್ಟು ಹಣವನ್ನು ಏಡ್ಸ್ ವಿರುದ್ಧ ಹೋರಾಡಲು ಗ್ಲೋಬಲ್ ಫಂಡ್‌ಗೆ ಕೊಡುಗೆಯಾಗಿ ಕಂಪನಿ ನೀಡಲಿದೆ.

ಭಾರತದಲ್ಲಿ ವೆಸ್ಪಾ ರೆಡ್ ದ್ವಿಚಕ್ರ ವಾಹನ ಬಿಡುಗಡೆ ; ಬೆಲೆ ರೂ. 87,009

ಹೆಸರೇ ಸೂಚಿಸುವಂತೆ, ವೆಸ್ಪಾ ರೆಡ್ ವಾಹನದ ಪ್ರತಿಯೊಂದು ಅಂಶವು ಸಹ ಕೆಂಪು ಬಣ್ಣದಿಂದ ಕೂಡಿರಲಿದ್ದು, ಈ ದ್ವಿಚಕ್ರ ವಾಹನದ ಆಸನ, ಪ್ಲಾಸ್ಟಿಕ್ ಪ್ಯಾನೆಲ್‌ಗಳು ಮತ್ತು ಮಿಶ್ರಲೋಹದ ಚಕ್ರಗಳು ಕೆಂಪು ಬಣ್ಣ ಹೊಂದಿರಲಿವೆ.

ಭಾರತದಲ್ಲಿ ವೆಸ್ಪಾ ರೆಡ್ ದ್ವಿಚಕ್ರ ವಾಹನ ಬಿಡುಗಡೆ ; ಬೆಲೆ ರೂ. 87,009

ಸ್ಕೂಟರಿನ ಒಟ್ಟಾರೆ ವಿನ್ಯಾಸವು ಹಿಂದಿನ ಮಾದರಿಯಂತೆ ಇದೆ ಹಾಗು ಈ ಬಲಿಷ್ಠ ಸ್ಕೂಟರ್ 10.6 ಎನ್ಎಂ ತಿರುಗುಬಲದಲ್ಲಿ 10 ಬಿಎಚ್‌ಪಿ ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. ಇನ್ನು ಈ ಸ್ಕೂಟರ್ ಸಿಂಗಲ್ ಸೈಡ್ ಫ್ರಂಟ್ ಸೂಸ್ಪೆನ್‌ಷನ್ ಹೊಂದಿದ್ದು, ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಮತ್ತು 12 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಈ ಸ್ಕೂಟರ್ ಪಡೆದುಕೊಂಡಿದೆ.

ಭಾರತದಲ್ಲಿ ವೆಸ್ಪಾ ರೆಡ್ ದ್ವಿಚಕ್ರ ವಾಹನ ಬಿಡುಗಡೆ ; ಬೆಲೆ ರೂ. 87,009

"ದೇಶದಲ್ಲಿ ವೆಸ್ಪಾ ರೆಡ್ ಸ್ಕೂಟರ್ ಪರಿಚಯಿಸಲು ನಮಗೆ ಬಹಳ ಹೆಮ್ಮೆಯಿದೆ. ಸಾಂಪ್ರದಾಯಿಕ ವೆಸ್ಪಾ ದ್ವಿಚಕ್ರ ವಾಹನವು ಸಾಮಾಜಿಕವಾಗಿ ಜವಾಬ್ದಾರಿಯುತ ಬ್ರ್ಯಾಂಡ್ ಆಗಿದ್ದು, ಜಾಗೃತಿ ಮೂಡಿಸುವ ಕಾರ್ಯಕ್ಕೆ ಬೆಂಬಲಿಸುವ ಮೂಲಕ ಸಮಾಜಕ್ಕೆ ಮರಳಿ ತನ್ನ ಕೊಡುಗೆಯನ್ನು ಈ ವೆಸ್ಪಾ ನೀಡಲಿದೆ" ಎಂದು ಪಿಯಾಜಿಯೊ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆದಂತಹ ಡಿಯಾಗೋ ಗ್ರಾಫಿ ಹೇಳಿದರು.

English summary
Piaggio India has launched the new Vespa RED scooter in India. The special edition scooter is launched at a price tag of Rs 87,009 ex-showroom (Mumbai).
Story first published: Tuesday, October 3, 2017, 16:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark