ಶಾಕ್..! ಸಂಪೂರ್ಣ ಮೇಕ್ ಓವರ್ ಪಡೆದ ಕರಿಜ್ಮಾ
ವ್ಹಾ, ಜನಪ್ರಿಯ ಕರಿಜ್ಮಾ ಸಂಪೂರ್ಣ ಮೇಕ್ ಓವರ್ ಪಡೆದುಕೊಂಡಿದೆ ಅಲ್ಲವೇ? ಇದು ಹೇಗೆ ಸಾಧ್ಯವಾಯಿತು? ಸ್ವಲ್ಪ ತಾಳಿರಿ. ಮುಂಬೈ ಮೂಲದ ಕಸ್ಟಮ್ ಬಿಲ್ಡ್ ಸಂಸ್ಥೆಯಾಗಿರುವ ರೋಡ್ ರೇಜ್ ಕಸ್ಟಮ್ ಬಿಲ್ಡ್ಸ್ ಸಂಸ್ಥೆಯು ಈ ವಿನೂತನ ಪ್ರಯೋಗದೊಂದಿಗೆ ಮುಂದೆ ಬಂದಿದೆ.
Also Read: ಬೆಂಗ್ಳೂರಿಂದ ಕೊಚ್ಚಿಗೆ ಮಮ್ಮುಟ್ಟಿ ಪುತ್ರನ ಬೈಕ್ ಸವಾರಿ
2009ರಲ್ಲಿ ಗ್ಯಾಬ್ರಿಯಲ್ ಡಿ ಝುಜಾರ್ಟೆ ಎಂಬವರಿಂದ ಸ್ಥಾಪಿತವಾಗಿರುವ ಮುಂಬೈ ತಳಹದಿಯ ಈ ವಾಹನ ಮಾರ್ಪಾಡು ಸಂಸ್ಥೆಯು ಈಗಾಗಲೇ ಹಲವಾರು ಸೆಲೆಬ್ರಿಟಿಗಳ ನೆಚ್ಚಿನ ಕಸ್ಟಮೈಸ್ಡ್ ಸಂಸ್ಥೆಯೆನಿಸಿಕೊಂಡಿದೆ.

ವಾಹನ ಪ್ರೇಮಿ ರೋನಕ್ ಷಾ ಎಂಬವರ ಇಚ್ಛೆಯಂತೆ ಕರಿಜ್ಮಾ ಆರ್ ಆರ್ ಬೈಕ್‌ಗೆ ವಿಶಿಷ್ಟ ವಿನ್ಯಾಸ ಕಲ್ಪಿಸಿಕೊಡಲಾಗಿದೆ.

ಇತರೆಲ್ಲ ಬೈಕ್ ಗಿಂತಲೂ ತಮ್ಮ ಬೈಕ್ ವಿಶಿಷ್ಟವಾಗಿ ಗುರುತಿಸಬೇಕೆಂಬ ರೋನಕ್ ಷಾ ಅವರ ಬಯಕೆಯಂತೆ ಏಕಕಾಲದಲ್ಲಿ ಮೂರು ರೀತಿಯಲ್ಲಿ ಗೋಚರಿಸುವ ಈ ಕಸ್ಟಮ್ ಬೈಕ್ ತಯಾರಿಸಲಾಗಿದೆ.

ಅದ್ಭುತ ರಸ್ತೆ ಸಾನಿಧ್ಯ ಪಡೆದುಕೊಂಡಿರುವ ಕರಿಜ್ಮಾ ಒಂದೇ ಸಮಯದಲ್ಲಿ ಸ್ಟ್ರೀಟ್, ಚೊಪ್ಪರ್ ಹಾಗೂ ಕ್ರೀಡಾತ್ಮಕ ಬೈಕ್ ಗಳ ಮಿಶ್ರಣವನ್ನು ಪಡೆದುಕೊಂಡಿದೆ.

ಇಲ್ಲಿ ಸಂಪೂರ್ಣ ಮೈಕಟ್ಟನ್ನು ಮರು ವಿನ್ಯಾಸಗೊಳಿಸಲಾಗಿದ್ದು, ದೇಹದ ಮೇಲಿರುವ ರೇಖೆಯು ಹೆಚ್ಚು ನಿಖರವೆನಿಸಿದೆ. ಅಲ್ಲದೆ ಕೆಟಿಎಂ ಶಾಕ್ಸ್ ಹಾಗೂ ರಿಯರ್ ಸ್ವಿಂಗ್ ಆರ್ಮ್ ಇದಕ್ಕೆ ಜೋಡಣೆ ಮಾಡಲಾಗಿದೆ.

ಇಂಧನ ಟ್ಯಾಂಕ್ ಸಹ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದರಿಂದ ಇಬ್ಬರಿಗೆ ಕುಳಿತುಕೊಳ್ಳುವ ಆಸನ ವ್ಯವಸ್ಥೆ ಒದಗಿಸಲಾಗಿದೆ.

ಒಟ್ಟಾರೆ ಸ್ಟ್ರೀಟ್ ಬೈಕ್ ಆನಂದದೊಂದಿಗೆ ವರ್ಧಿತ ಫೂಟ್ ರೆಸ್ಟ್ ಮುಖಾಂತರ ಚೊಪ್ಪರ್ ಬೈಕ್ ಅನುಭವ ನೀಡಲಿದೆ. ಅಲ್ಲದೆ ಒಟ್ಟಾರೆ ವಿನ್ಯಾಸವು ಹೆಚ್ಚು ಕ್ರೀಡಾತ್ಮಕವೆನಿಸಿದೆ.

1.5 ವ್ಯಾಸದಲ್ಲಿ 18 ವಾಟ್ ಶಕ್ತಿಯ ಟ್ವಿನ್ ಎಲ್‌ಇಡಿ ಲೈಟ್ ಗಳು ಒಟ್ಟು 36 ವಾಟ್ ಶಕ್ತಿಯನ್ನು ನೀಡಲಿದೆ. ಇದರ ಜೊತೆಗೆ ಇನ್ ಬಿಲ್ಡ್ ಡೇಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಇಂಡಿಕೇಟರ್ ಗಳು ರಾತ್ರಿ ಪಯಣವನ್ನು ಸುರಕ್ಷಿತವಾಗಿಸಲಿದೆ. ಇದರ ಬ್ರೇಕ್ ಲೈಟ್ಸ್ ಗಳು ಒಂದು ಕೀ.ಮೀ. ದೂರದಿಂದಲೇ ಗೋಚರವಾಗಲಿದೆ.

ಇನ್ನು ಹೆಚ್ಚು ಕ್ಲಾಸಿಕ್ ಹಾಗೂ ವಿಶಿಷ್ಟ ಚಾಲನಾ ಅನುಭವಕ್ಕಾಗಿ ವಿಶೇಷವಾದ ಬಣ್ಣವನ್ನು ಇದಕ್ಕೆ ಬಳಿಯಲಾಗಿದೆ. ಅಂದರೆ ಫ್ಲೋರ್ ಸೆಂಟ್ ಗ್ರೀನ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಆಯ್ಕೆ ಮಾಡಲಾಗಿದೆ.

ಅಂತೆಯೇ ಹಿಂದುಗಡೆ 170 ಎಂಎಂ ಹಾಗೂ ಮುಂದುಗಡೆ 120 ಎಂಎಂ ಚಕ್ರಗಳನ್ನು ಗಿಟ್ಟಿಸಿಕೊಂಡಿದೆ. ಒಟ್ಟಾರೆಯಾಗಿ ಮುಂಬೈ ಬೈಕ್ ಪ್ರೇಮಿಯ ಕನಸು ನನಸಾಗಿದೆ.


Click it and Unblock the Notifications








