ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

Written By:

ಆಗಲೇ ಭಾರತೀಯ ಮಾರುಕಟ್ಟೆಯಲ್ಲಿ 'ಐಕಾನಿಕ್' ಪಟ್ಟ ಕಟ್ಟಿಕೊಂಡಿರುವ ಚೆನ್ನೈ ಮೂಲದ ರಾಯಲ್ ಎನ್ ಫೀಲ್ಡ್ ಸಂಸ್ಥೆಯು ಏನೇ ಮಾಡಿದರೂ ಇತಿಹಾಸ. ಇದಕ್ಕೊಂದು ತಾಜಾ ಉದಾಹರಣೆ ಈಗಷ್ಟೇ ಬಿಡುಗಡೆಯಾಗಿರುವ ಡಿಸ್ಪಾಚ್ ಸೀಮಿತ ಮಾದರಿ.

ಒಟ್ಟು ಎರಡು ವೆರಿಯಂಟ್ ಗಳಲ್ಲಿ ಇದು ಲಭ್ಯವಾಗಲಿದೆ. ಅವುಗಳೆಂದರೆ,

  • ಸ್ವಾಡ್ರಾನ್ ಬ್ಲೂ ಡಿಸ್ಪಾಚ್ ಮತ್ತು (Squadron Blue Despatch)
  • ಡೆಸರ್ಟ್ ಸ್ಟ್ರೋಮ್ ಡಿಸ್ಪಾಚ್ (Desert Storm Despatch)

ಕೇವಲ ಸೀಮಿತ 200 ಯುನಿಟ್ ಗಳಷ್ಟೇ ನೂತನ ಮಾದರಿಯು ಲಭ್ಯವಾಗಲಿದ್ದು, ಬೆಲೆ ಇತ್ಯಾದಿ ವೈಶಿಷ್ಟ್ಯಗಳ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

To Follow DriveSpark On Facebook, Click The Like Button
ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ನೂತನ ಡಿಸ್ಪಾಚ್ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ 2.24 ಲಕ್ಷ ರು. ಗಳಷ್ಟು (ಎಕ್ಸ್ ಶೋ ರೂಂ ಮುಂಬೈ) ದುಬಾರಿಯೆನಿಸಲಿದೆ.

ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ವಿಶಿಷ್ಟ ಹಾಲ್ ಮಾರ್ಕ್ ಗಳು ನೂತನ ಮಾದರಿಗಳ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಲಿದ್ದು, ವೈಯಕ್ತಿಕ ಸ್ಪರ್ಶ ವನ್ನು ತುಂಬಲಿದೆ.

ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ಸೀಟುಗಳು ಸಹ ವಿಶೇಷವೆನಿಸಿದ್ದು, ನೈಜ ಇಟಲಿಯನ್ ಲೆಥರ್ ನಿಂದ ನಿರ್ಮಿಸಲಾಗಿದೆ.

ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ಬದಿಯಲ್ಲಿ ಏರ್ ಫಿಲ್ಟರ್ ಬಾಕ್ಸ್ ಕಾಣಬಹುದಾಗಿದ್ದು, ಕಪ್ಪು ವರ್ಣದ ಇದನ್ನು ಗುಣಮಟ್ಟದ ಲೆಥರ್ ಬೆಲ್ಟ್ ಸುತ್ತುವರಿದಿದೆ.

ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ತಮ್ಮ ವ್ಯಕ್ತಿತ್ವವನ್ನು ತೋರಿಸುವ ನಿಟ್ಟಿನಲ್ಲಿ ವಿಶೇಷ ಶೈಲಿಯ ಎಕ್ಸಾಸ್ಟ್ ಕೊಳವೆಗಳನ್ನು ಕೊಡಲಾಗಿದೆ.

ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ಸಾಮಾನ್ಯ ರಾಯಲ್ ಎನ್ ಫೀಲ್ಡ್ ಬೈಕ್ ಗಿಂತಲೂ ವಿಭಿನ್ನವಾಗಿ ಅತ್ಯಂತ ಕಡಿಮೆ ಕ್ರೋಮ್ ಬಳಕೆ ಮಾಡಲಾಗಿದೆ.

ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ರಾಯಲ್ ಎನ್ ಫೀಲ್ಡ್ ಅತಿ ಪುರಾತನ ಕ್ಲಾಸಿಕ್ ಶೈಲಿಯ ಇನ್ಸ್ಟ್ರುಮೆಂಟ್ ಗೇಜ್ ಕಾಯ್ದುಕೊಳ್ಳಲಾಗಿದೆ. ಇದು ವಿಶ್ವ ಪ್ರಸಿದ್ಧ ಬೈಕ್ ನ ಸರಳತೆಗೆ ಕಾರಣವಾಗಲಿದೆ.

ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ಇನ್ನು ಅನುಕೂಲತೆಗೂ ಹೆಚ್ಚಿನ ಆದ್ಯತೆಯನ್ನು ಕೊಡಲಾಗಿದ್ದು ತನ್ನ ಮಾದರಿಗಳಲ್ಲಿ ಗ್ಯಾಸ್ ಶಾಕ್ಸ್ ಬಳಕೆ ಮಾಡಲಾಗಿದೆ.

ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ಒಟ್ಟಾರೆ ವಿನ್ಯಾಸವನ್ನು ಎನ್ ಫೀಲ್ಡ್ ಪ್ರತಿಷ್ಠೆಯನ್ನು ಹೆಚ್ಚಿಸಲಿದೆ. ಇದರ ಎರಡು ವಿಶಿಷ್ಟ ಮೈಬಣ್ಣವು ಪ್ರಮುಖ ಆಕರ್ಷಣೆಯಾಗಿರಲಿದೆ.

ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ಹಾಗೊಂದು ವೇಳೆ ನಿಮಗೂ ಇಷ್ಟವಾದ್ದಲ್ಲಿ ಆನ್ ಲೈನ್ ಮುಖಾಂತರ ಖರೀದಿಸಬಹುದಾಗಿದೆ. ಇಲ್ಲಿ ಡಿಸ್ಪಾಚ್ ಎಕ್ಸ್ ಕ್ಲೂಸಿವ್ ಜಾಕೆಟ್, ಶರ್ಟ್, ಶೂ, ಹೆಲ್ಮೆಟ್ ಮತ್ತು ಇತ್ಯಾದಿ ಆಕ್ಸೆಸರಿಗಳು ಸಹ ಲಭ್ಯವಾಗಲಿದೆ.

ರಾಯಲ್ ಎನ್ ಫೀಲ್ಡ್ ಡಿಸ್ಪಾಚ್ ವಿಶೇಷ ಆವೃತ್ತಿ ಬಿಡುಗಡೆ

ಅಂದ ಹಾಗೆ 2015 ಜುಲೈ 15ರಿಂದ ಈ ಎರಡು ಮೋಟಾರ್ ಸೈಕಲ್ ಗಳು ಬುಕ್ಕಿಂಗ್ ಗೆ ಲಭ್ಯವಾಗಲಿದೆ. ತಾಜಾ ಸುದ್ದಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ.

English summary
Now Royal Enfield motorcycles are currently maintaining its retro/vintage persona. The Indian manufacturer has taken it a step further and launched their Despatch edition in two avatars.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark