ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

By Nagaraja

ಈ ಹಿಂದೆಯೇ ಮಾಹಿತಿ ಕೊಟ್ಟಿರುವಂತೆಯೇ ಚೆನ್ನೈ ಮೂಲದ ದೇಶದ ಐಕಾನಿಕ್ ಸಂಸ್ಥೆ ರಾಯಲ್ ಎನ್‌ಫೀಲ್ಡ್, ನಿಕಟ ಭವಿಷ್ಯದಲ್ಲೇ ಅತಿ ನೂತನ ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕ್ ಅನ್ನು ಬಿಡುಗಡೆ ಮಾಡಲಿದೆ.

Also Read: ಬೆಂಗ್ಳೂರು ಪೊಲೀಸರಿಗೆ ಎನ್ ಫೀಲ್ಡ್ ಓಕೆ ಬಟ್ ಸೌಂಡ್ ನಾಟ್ ಓಕೆ ಏಕೆ? ಮುಂದಕ್ಕೆ ಓದಿ

ಪ್ರಸ್ತುತ ಬೈಕ್ ರಹಸ್ಯ ಚಿತ್ರಗಳು ಅಂತರ್ಜಾಲದಲ್ಲಿ ಜಾಲಾಡುತ್ತಿದ್ದು, ಡ್ರೈವ್ ಸ್ಪಾರ್ಕ್ ಓದುಗರಿಗಾಗಿ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಮುಂದಿಡುತ್ತಿದ್ದೆವು. ಅತಿ ನೂತನ ರಾಯಲ್ ಎನ್ ಫೀಲ್ಡ್ ಸಾಹಸಿ ಬೈಕ್ ಭಾರತೀಯ ರಸ್ತೆಗಳಲ್ಲಿ ಅತಿ ಹೆಚ್ಚು ಸದ್ದು ಮಾಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

ರಾಯಲ್ ಎನ್ ಫೀಲ್ಡ್ ಹಿಮಾನಲಯನ್ ಅಡ್ವೆಂಚರ್ ಟೂರರ್ ಬೈಕ್ ನಲ್ಲಿರುವ 410 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ 32 ಎನ್ ಎಂ ತಿರುಗುಬಲದಲ್ಲಿ 28 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಚಿತ್ರ ಕೃಪೆ: Rushlane

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

ಎಲ್ ಇಡಿ ಟೈಲ್ ಲ್ಯಾಂಪ್, ಮೊನೊ ಶಾಕ್, ಸಿಟ್ಟಿಂಗ್ ವ್ಯವಸ್ಥೆ, ಎಕ್ಸಾಸ್ ಹಾಗೂ ಒಟ್ಟಾರೆ ದೇಹ ವಿನ್ಯಾಸವು ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರ ಕೃಪೆ: Rushlane

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

ಬಲ್ಲ ಮೂಲಗಳ ಪ್ರಕಾರ ಗೋವಾದಲ್ಲಿ ನವೆಂಬರ್ 20ರಿಂದ 22ರ ವರೆಗೆ ನಡೆಯಲಿರುವ ರಾಯಲ್ ಎನ್ ಫೀಲ್ಡ್ ರೈಡರ್ ಮೇನಿಯಾದಲ್ಲಿ ಬಹುನಿರೀಕ್ಷಿತ ಹಿಮಾಲನಯ್ ಅಡ್ವೆಂಚರ್ ಟೂರರ್ ಬೈಕ್ ಬಿಡುಗಡೆಯಾಗಲಿದೆ.

ಚಿತ್ರ ಕೃಪೆ: Motorvikatan

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

ಹಾಗೊಂದು ವೇಳೆ ಬಿಡುಗಡೆ ದಿನಾಂಕ ವಿಳಂಬವಾದ್ದಲ್ಲಿ 2016 ಆಟೋ ಎಕ್ಸ್ ದಲ್ಲಿ ಭರ್ಜರಿ ಪ್ರದರ್ಶನ ಕಾಣುವ ಸಾಧ್ಯತೆಯಿದೆ. ತಾದ ಬಳಿಕ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಚಿತ್ರ ಕೃಪೆ: Autox

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

ನೂತನ ರಾಯಲ್ ಎನ್‌ಫೀಲ್ಡ್ ಅಡ್ವೆಂಚರ್ ಟೂರರ್ ಬೈಕ್ ಬೆಲೆ ಎರಡು ಲಕ್ಷ ರು.ಗಳ ಪರಿಧಿಯಲ್ಲಿರಲಿದೆ.

ಚಿತ್ರ ಕೃಪೆ: Autox

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

ಇನ್ನು ಅಡ್ವೆಂಚರ್ ಬೈಕ್ ಗೆ ತಕ್ಕಂತೆ ವಿಂಡ್ ಸ್ಕ್ರೀನ್ ಹಾಗೂ ಹಿಂದುಗಡೆ ಲಗ್ಗೇಜ್ ಕ್ಯಾರಿಯರ್ ಇರಲಿದೆ.

ಚಿತ್ರ ಕೃಪೆ: Autox

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

ಇನ್ನುಳಿದಂತೆ ಹೊಸ ಇಂಧನ ಟ್ಯಾಂಕ್, ವಿಭಜಿತ ಸೀಟು ಹಾಗೂ ಸ್ಪೋಕ್ ವೀಲ್ಸ್ ಗಳು ಹೆಚ್ಚು ಆಕರ್ಷಣೆಯಾಗಲಿದೆ.

ಚಿತ್ರ ಕೃಪೆ: Autox

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

ಸಾಹಸ ಪ್ರಿಯರಿಗೆ ಪರಿಪೂರ್ಣ ಬೈಕ್ ಎನಿಸಿಕೊಳ್ಳಲಿರುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಚೆನ್ನೈನಲ್ಲಿ ಪರೀಕ್ಷಾರ್ಥ ಚಾಲನೆ ನಡೆಸುತ್ತಿರುವ ವೇಳೆಗೆ ಸೆರೆ ಹಿಡಿಯಲಾಗಿದೆ.

ಚಿತ್ರ ಕೃಪೆ: Shifting gears

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

ನೂತನ ಹಿಮಾಲಯನ್ ಬೈಕ್ ಸಂಸ್ಥೆಯ ಚೆನ್ನೈ ಘಟಕದಿಂದಲೇ ನಿರ್ಮಾಣಗೊಳ್ಳಲಿದ್ದು, ಅತಿ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಚಿತ್ರ ಕೃಪೆ: Shifting gears

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರಹಸ್ಯ ಚಿತ್ರಗಳನ್ನ ನೋಡ ಬನ್ನಿ!

ಅಷ್ಟಕ್ಕೂ ನೂತನ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕ್ ಬಗ್ಗೆ ಇರುವ ನಿಮ್ಮ ಅಭಿಪ್ರಾಯವೇನು ? ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಮುಕ್ತವಾಗಿ ಚರ್ಚಿಸಿರಿ.

ಚಿತ್ರ ಕೃಪೆ: Shifting gears

ಇವನ್ನೂ ಓದಿ

ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ರಾಯಲ್ ಸವಾರಿ

Article Published On: Friday, November 6, 2015, 14:46 [IST]
English summary
Spy Pics: Royal Enfield Himalayan (Adventure-Tourer)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+