ಇದೇ ತಿಂಗಳಲ್ಲಿ ಪರಿಷ್ಕೃತ ಸ್ವಿಷ್ ಬಿಡುಗಡೆ ಸಾಧ್ಯತೆ
ಜಪಾನ್‌ನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ, 2015ನೇ ಸಾಲಿನಲ್ಲೂ ಉತ್ತಮ ಮಾರಾಟ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ. ಇದರಂತೆ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಇದೇ ಜನವರಿ ತಿಂಗಳಲ್ಲಿ ಸ್ವಿಷ್ ಪರಿಷ್ಕೃತ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಸ್ಕೂಟರ್ ವಿಭಾಗವನ್ನು ಗಮಿಸಿದಾಗ ಸುಜುಕಿ ಮಾದರಿಗಳಾಗ ಸ್ವಿಷ್ ಜೊತೆಗೆ ಆಸ್ಸೆಸ್ ಹಾಗೂ ಲೆಟ್ಸ್ ತನ್ನದೇ ಆದ ಮಾರಾಟ ವಲಯವನ್ನು ಕಾಯ್ದುಕೊಂಡಿದೆ.

ಈಗ ಬರಲಿರುವ ಸ್ವಿಷ್ ಸ್ಕೂಟರ್ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ. ಇದರಲ್ಲಿ ವಿನ್ಯಾಸ ಬದಲಾವಣೆ, ಹೊಸ ಅಲಾಯ್ ವೀಲ್, ಸ್ಪೀಡೋಮೀಟರ್ ಮತ್ತು ಡಿಸ್ಕ್ ಬ್ರೇಕ್ ಆಳವಡಿಕೆ ಪ್ರಮುಖವಾಗಿರಲಿದೆ.
ಹಾಗಿದ್ದರೂ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಸ್ಪಡಲಿದ್ದು 8.7 ಪಿಎಪ್ ಪವರ್ (9.8 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಸಿವಿಟಿ ಟ್ರಾನ್ಸ್‌ಮಿಷನ್ ಜೊತೆಗೆ ಸೆಲ್ಫ್ ಹಾಗೂ ಕಿಕ್ ಸ್ಟಾರ್ಟರ್ ವ್ಯವಸ್ಥೆಯು ಇರಲಿದೆ.
ಈಗ ಮಾರುಕಟ್ಟೆಯಲ್ಲಿರುವ ಸ್ವಿಷ್ ಮುಂಬೈ ಎಕ್ಸ್ ಶೋ ರೂಂ ಬೆಲೆ 57,620 ರು.ಗಳಾಗಿವೆ. ಹೋಂಡಾ ಡಿಯೋ ಹಾಗೂ ಯಮಹಾ ರೇ, ರೇ ಝಡ್ ಸವಾಲುಗಳನ್ನು ಎದುರಿಸಲು ಪರಿಷ್ಕೃತ ಸ್ವಿಷ್ ಮಾದರಿಯನ್ನು ಸ್ಮರ್ದಾತ್ಮಕ ಬೆಲೆಗಳಲ್ಲಿ ರಸ್ತೆಗಿಳಿಸುವ ಸಾಧ್ಯತೆಯಿದೆ.


Click it and Unblock the Notifications








