ನಾಲ್ಕು ಜೋಡಿ ಬಣ್ಣಗಳ ಆಯ್ಕೆಯೊಂದಿಗೆ ಸುಜುಕಿ ಲೆಟ್ಸ್ ಸ್ಕೂಟರ್
ಹೊಸತಾದ ನಾಲ್ಕು ಜೋಡಿ ಬಣ್ಣಗಳ ಆಯ್ಕೆಯೊಂದಿಗೆ ಸುಜುಕಿ ಲೆಟ್ಸ್ ಸ್ಕೂಟರ್ ಎಂಟ್ರಿ ಕೊಟ್ಟಿದೆ. 2014ನೇ ಸಾಲಿನಲ್ಲಿ ಮೊದಲ ಬಾರಿಗೆ ಪರಿಚಯವಾಗಿರುವ ಸುಜುಕಿ ಲೆಟ್ಸ್ ಸ್ಕೂಟರ್ ಮುಂಬರುವ ಹಬ್ಬದ ಆವೃತ್ತಿಯ ವೇಳೆಗೆ ತಾಜಾತನವನ್ನು ಪಡೆಯಲಿದೆ.
ಹೊಸ ಸುಜುಕಿ ಲೆಟ್ಸ್ ಡ್ಯುಯಲ್ ಬಣ್ಣಗಳ ಮಾದರಿಯು ಮುಂಬೈ ಆನ್ ರೋಡ್ ಬೆಲೆಯಂತೆ 55,280 ರು.ಗಳಷ್ಟು ದುಬಾರಿಯೆನಿಸಲಿದೆ.

ಸುಜುಕಿ ಲೆಟ್ಸ್ ನಾಲ್ಕು ಆಕರ್ಷಕ ಜೋಡಿ ಬಣ್ಣಗಳು ಇಂತಿದೆ
- ಪಿಯರ್ಲ್ ಮಿರಾಜ್ ವೈಟ್,
- ಪಿಯರ್ಲ್ ಮಿರಾ ರೆಡ್ ಜೊತೆ ಮ್ಯಾಟ್ ಬ್ಲಾಕ್,
- ಮ್ಯಾಟ್ ಗ್ರೇ ಜೊತೆಗೆ ಮ್ಯಾಟ್ ಬ್ಲ್ಯಾಕ್,
- ಪಿಯರ್ಲ್ ಸುಜುಕಿ ಬ್ಲೂ ಜೊತೆಗೆ ಮ್ಯಾಟ್ ಬ್ಲ್ಯಾಕ್
ಇದರ ಹೊರತಾಗಿ ಇತರ ಯಾವುದೇ ಕಾಸ್ಮೆಟಿಕ್ ಬದಲಾವಣೆಗಳು ಕಂಡುಬರುವುದಿಲ್ಲ. ಈ ಎಲ್ಲ ಬಣ್ಣಗಳ ಬದಲಾವಣೆಗಳು ಯಮಹಾ ರೇ ಹಾಗೂ ಹೋಂಡಾ ಆಕ್ಟಿವಾ ಐ ಮಾದರಿಗಳಿಗೆ ಪೈಪೋಟಿ ಒಡ್ಡಲು ಸಹಕಾರಿಯಾಗಲಿದೆ.
ನೂತನ ಲೆಟ್ಸ್ ಸ್ಕೂಟರ್ 112.8 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು 8.7 ಅಶ್ವಶಕ್ತಿ (9 ಎನ್ಎಂ ತಿರುಗುಬಲ) ಉತ್ಪಾದಿಸಲಿದೆ. ಅಲ್ಲದೆ ಪ್ರತಿ ಲೀಟರ್ ಗೆ 63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications








