ಟ್ರಯಂಪ್ ಅಡ್ವೆಂಚರ್ ಬೈಕ್‌ಗಳು ಭಾರತದಲ್ಲಿ ಬಿಡುಗಡೆ
ಬ್ರಿಟನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟ್ರಯಂಪ್ ಮೋಟಾರ್‌ಸೈಕಲ್ಸ್ ಭಾರತಕ್ಕೆ ಎರಡು ದುಬಾರಿ ಬೈಕ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಂಡ್ ಎಂಟ್ರಿ ಕೊಟ್ಟಿದೆ.
ಟ್ರಯಂಪ್‌ನಿಂದ ಬಿಡುಗಡೆಯಾದ ಬೈಕ್‌ಗಳು:
- ಟ್ರಯಂಪ್ ಟೈಗರ್ ಎಕ್ಸ್‌ಆರ್‌ಎಕ್ಸ್,
- ಟ್ರಯಂಪ್ ಟೈಗರ್ ಎಕ್ಸ್‌ಸಿಎಕ್ಸ್

ಬೆಲೆ ಮಾಹಿತಿ (ಎಕ್ಸ್ ಶೋರೂಂ ದೆಹಲಿ)
- ಟ್ರಯಂಪ್ ಟೈಗರ್ ಎಕ್ಸ್‌ಆರ್‌ಎಕ್ಸ್ ಅಡ್ವೆಂಚರ್- 11.60 ಲಕ್ಷ ರು.
- ಟ್ರಯಂಪ್ ಟೈಗರ್ ಎಕ್ಸ್‌ಸಿಎಕ್ಸ್ ಅಡ್ವೆಂಚರ್- 12.70 ಲಕ್ಷ ರು.
ಎಂಜಿನ್ ತಾಂತ್ರಿಕತೆ
ಟ್ರಯಂಪ್ ಎಕ್ಸ್‌ಆರ್‌ಎಕ್ಸ್ ಹಾಗೂ ಎಕ್ಸ್‌ಸಿಎಕ್ಸ್ ಅಡ್ವೆಂಚರ್ ಬೈಕ್‌ಗಳು ಸಮಾನ ಎಂಜಿನ್ ಪಡೆಯಲಿದೆ. ಇವರೆರಡು ಇನ್ ಲೈನ್ ತ್ರಿ ಸಿಲಿಂಡರ್ 800 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 93.66 ಅಶ್ವಶಕ್ತಿ (79 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಮೈಲೇಜ್
19 ಲೀಟರ್ ಸಾಮರ್ಥ್ಯದ ದೊಡ್ಡದಾದ ಇಂಧನ ಟ್ಯಾಂಕ್ ಪಡೆದಿರುವ ಟ್ರಯಂಪ್ ನೂತನ ಬೈಕ್‌ಗಳು ಪ್ರತಿ ಲೀಟರ್‌ಗೆ 25 ಕೀ.ಮೀ. ಮೈಲೇಜ್ ನೀಡಲಿದೆ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ.
ವಿಶೇಷತೆ
- ಎಬಿಎಸ್,
- ಟ್ರಾಕ್ಷನ್ ಕಂಟ್ರೋಲ್,
- ಥ್ರೋಟ್ ಮ್ಯಾಪ್,
- ರೈಡಿಂಗ್ ಮ್ಯಾಪ್,
- ಕ್ರೂಸ್ ಕಂಟ್ರೋಲ್,
- ಟ್ರಿಪ್ ಕಂಪ್ಯೂಟರ್,
- ಆಕ್ಸ್ ಸೊಕೆಟ್,
- ಆಟೋ ಕ್ಯಾನ್ಸಲ್ ಇಂಡಿಕೇಟರ್,
- ಹೊಂದಾಣಿಸಬಹುದಾದ ವಿಂಡ್ ಸ್ಕ್ರೀನ್,
- ಹ್ಯಾಂಡ್ ಗಾರ್ಡ್
ಈ ಎರಡು ಬೈಕ್‌ಗಳ ಪ್ರಮುಖ ವ್ಯತ್ಯಾಸವೇನೆಂದರೆ ಟೈಗರ್ ಎಕ್ಸ್‌ಸಿಎಕ್ಸ್ ಸ್ಪೋಕ್ ವೀಲ್‌ನಿಂದ ಚಲಿಸಿದರೆ ಟೈಗರ್ ಎಕ್ಸ್‌ಆರ್‌ಎಕ್ಸ್ ಅಲಾಯ್ ವೀಲ್ ಪಡೆಯಲಿದೆ. ಇನ್ನು ಎಕ್ಸ್‌ಸಿಎಕ್ಸ್ ಆಫ್ ರೋಡ್ ಹಾಗೂ ಎಕ್ಸ್‌ಆರ್‌ಎಕ್ಸ್ ಟೂರಿಂಗ್ ವಿಧದ ಬೈಕ್ ಆಗಿರಲಿದೆ.


Click it and Unblock the Notifications








