3 ಹೊಸ ಬೈಕ್ ಅನಾವರಣ ಮಾಡಲಿರುವ ಟ್ರಯಂಪ್
ಈಗಾಗಲೇ ಭಾರತದಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಿರುವ ಬ್ರಿಟನ್‌ನ ಐಕಾನಿಕ್ ಮೋಟಾರ್ ಸೈಕಲ್ ಸಂಸ್ಥೆಯಾಗಿರುವ ಟ್ರಯಂಪ್, ಇದೇ ಮುಂಬರುವ ಅಕ್ಟೋಬರ್ 28 ರಂದು ಮೂರು ಹೊಸ ಮಾದರಿಗಳನ್ನು ಅನಾವರಣಗೊಳಿಸಲಿದೆ.
ಈ ಸಂಬಂಧ ಟ್ರಯಂಪ್ ಸಂಸ್ಥೆಯು ಎಕ್ಸ್ ಕ್ಲೂಸಿವ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ಅಲ್ಲದೆ ತನ್ನ ವಿಡಿಯೋದಲ್ಲಿ ರೆಟ್ರೊ ಶೈಲಿಯ ಬೈಕ್ ಪ್ರದರ್ಶನ ಮಾಡಿದೆ.

ಪ್ರಸ್ತುತ ಬೊನೆವಿಲ್ಲೆ, ಬೊನೆವಿಲ್ಲೆ ಟಿ100 ಹಾಗೂ ಥ್ರಕ್ಸ್‌ಟನ್ ಸಾಂಪ್ರಾದಾಯಿಕ ಶೈಲಿಯ ಬೈಕ್ ಗಳನ್ನು ಟ್ರಯಂಪ್ ಹೊಂದಿದೆ. ದೇಶದಲ್ಲಿ ಬೊನೆವಿಲ್ಲೆ ಮತ್ತು ಬೊನೆವಿಲ್ಲೆ ಟಿ100 ಮಾದರಿಗಳು ಅನುಕ್ರಮವಾಗಿ 6.19 ಹಾಗೂ 6.97 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ. ಹಾಗೆಯೇ ಥ್ರಕ್ಸ್‌ಟನ್ ದೆಹಲಿ ಎಕ್ಸ್ ಶೋ ರೂಂ ಬೆಲೆ 7.18 ಲಕ್ಷ ರು.ಗಳಾಗಿದೆ.
ಮೇಲೆ ತಿಳಿಸಿದ ಎಲ್ಲ ಮೂರು ಮಾದರಿಗಳು 865 ಸಿಸಿ ಏರ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 61.1 ಎನ್‌ಎಂ ತಿರುಗುಬಲದಲ್ಲಿ 59.91 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.


Click it and Unblock the Notifications








