ಆರ್ಮಿ ಲುಕ್‌ನೊಂದಿಗೆ ಟ್ರಯಂಪ್ ಹೊಸ ಮೋಟಾರ್ ಸೈಕಲ್
ನೀವು ಬೈಕ್ ಪ್ರೇಮಿಯೇ? ಬಿಡುವು ಮಾಡಿಕೊಂಡು ಸ್ನೇಹಿತರ ಜೊತೆ ದೂರದ ಊರಿಗೆ ರೋಡ್ ಟ್ರಿಪ್ ತೆರಳುವ ಹವ್ಯಾಸವಿದೆಯೇ? ಒಟ್ಟಿನಲ್ಲಿ ಪರಿಪೂರ್ಣ ಟೂರಿಂಗ್ ಬೈಕ್ ಹುಡುಕಾಟದಲ್ಲಿದ್ದೀರಾ? ನಿಮ್ಮೆಲ್ಲ ಸಮಸ್ಯೆಗಳಿಗೆ ಉತ್ತರವಾಗಿ ಇಗೊ ಬಂದಿದೆ ಟ್ರಯಂಪ್ ಬೈಕ್.
ಇದುವೇ ಟ್ರಯಂಪ್ 'ವೆನೊಮ್' ಬೊನೆವಿಲ್ಲೆ. ಬ್ರಿಟಿಷ್ ಸಂಸ್ಥೆಯು ಈ ಐಕಾನಿಕ್ ಬೈಕ್ ನಲ್ಲಿ ಅನೇಕ ಕಸ್ಟಮೈಸ್ಡ್ ಆಯ್ಕೆಗಳನ್ನು ನೀಡಿದೆ. ಇದು ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿದೆ.

ಅತಿ ವಿಶಿಷ್ಟ ವಿನ್ಯಾಸ ಹಾಗೂ ನಿರ್ಮಾಣ ಗುಣಮಟ್ಟತೆ ಯಾವತ್ತೂ ಟ್ರಯಂಪ್ ಬೈಕ್ ಗಳ ಆಕರ್ಷಣೆಗೆ ಸಾಕ್ಷಿಯಾಗಿದೆ.

ಈ ಮೂಲಕ ಮೆಟಲ್ ಗೇರ್ ಸಾಲಿಡ್ 5: ದಿ ಫಾಟಂ ಪೈನ್ ವೈಶಿಷ್ಟ್ಯವನ್ನು ಟ್ರಯಂಪ್ ಪರಿಚಯಿಸುತ್ತಿದೆ. ಇದನ್ನು ಟ್ರಯಂಪ್ ತಂಡವೇ ಅಭಿವೃದ್ಧಿಗೊಳಿಸಿದೆ.

ವಿಶೇಷ ಕಪ್ಪು ಬಣ್ಣವನ್ನು ಇದಕ್ಕೆ ಬಳಿಯಲಾಗಿದೆ. ಒಟ್ಟಿನಲ್ಲಿ ಆರ್ಮಿ ಲುಕ್ ಕಾಯ್ದುಕೊಂಡಿದೆ.

ಮುಂದುಗಡೆ ಹಳದಿ ವರ್ಣದ ಜೆವಿಬಿ ರಂಬ್ಲರ್ ಹೆಡ್ ಲೈಟ್ ಕಾಣಬಹುದಾಗಿದೆ. ಇದು ಸಾಂಪ್ರಾದಾಯಿಕ ಟ್ರಯಂಪ್ ಗಿಂತಲೂ ಹೆಚ್ಚು ವಿಭಿನ್ನವೆನಿಸಿದೆ.

ಇನ್ನು ವಿಶೇಷ ಲಾಂಛನವನ್ನು ಟ್ರಯಂಪ್ ಡಿಸೈನ್ ತಂಡವು ಅಭಿವೃದ್ಧಪಿಡಿಸಿದೆ. ಅಂತೆಯೇ ಫಿನಿಶಿಂಗ್ ಸ್ಪರ್ಶ ಹೆಚ್ಚು ನಿಖರವೆನಿಸಿದೆ.

ಹಾಗೆಯೇ ಎಕ್ಸಾಸ್ಟ್ ಸಿಸ್ಟಂ ಹೆಚ್ಚು ಗಮನ ಸೆಳೆಯುತ್ತಿದೆ. ಈ ಮೂಲಕ ಆಫ್ ರೋಡ್ ದರ್ಜೆಯನ್ನು ಕಾಪಾಡಿಕೊಳ್ಳಲಾಗಿದೆ.

ವಿಶಿಷ್ಟ ವಿನ್ಯಾಸಿತ ಎಕ್ಸಾಸ್ಟ್ ಕೊಳವೆಯ ಇನ್ನೊಂದು ಆಕರ್ಷಕ ನೋಟ


Click it and Unblock the Notifications