ಸದ್ದು ಮಾಡಿದ ಡಿಎಸ್‌ಕೆ ಬೆನೆಲ್ಲಿ ಬಿಎಕ್ಸ್ 250 ಬೈಕ್
2016 ಆಟೋ ಎಕ್ಸ್ ಪೋದಲ್ಲಿ ತನ್ನ ಶ್ರೇಣಿಯ ಬೈಕ್ ಗಳನ್ನು ಪ್ರದರ್ಶಿಸಿರುವ ಇಟಲಿ ಮೂಲದ ಬೆನೆಲ್ಲಿ, ಭಾರತದಲ್ಲಿ ತನ್ನ ದೀರ್ಘ ಯೋಜನೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಡಿಎಸ್‌ಕೆ ಜೊತೆ ಪಾಲುದಾರಿಕೆ ಹೊಂದಿರುವ ಬೆನೆಲ್ಲಿ ಭಾರತದಲ್ಲಿ ಬೈಕ್ ಗಳನ್ನು ಮಾರಾಟ ಮಾಡಲಿದೆ.
ಈ ನಡುವೆ ಬೆನೆಲ್ಲೆ ಪ್ರದರ್ಶನ ಮಾಡಿರುವ ಬಿಎಕ್ಸ್ 250 ಕೂಡಾ ವಾಹನ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಭಾರತ ವಾಹನ ಮಾರುಕಟ್ಟೆಯ ಪ್ರಭಾವ ಅರಿತುಕೊಂಡಿರುವ ಬೆನೆಲ್ಲಿ ಬಿಎಕ್ಸ್ 250 ಮೋಟಾರ್ಡ್ ಪರಿಚಯಿಸುವ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದೆ.

ಇದರ 250 ಸಿಸಿ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ 21 ಎನ್ ಎಂ ತಿರುಗುಬಲದಲ್ಲಿ 25 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಕೇವಲ 132 ಕೆ.ಜಿ ಗಳಷ್ಟು ಮಾತ್ರ ತೂಕವನ್ನು ಹೊಂದಿರುವ ಬೆನೆಲ್ಲಿ ಬಿಎಕ್ಸ್ 250 ನಿಮಗೆ ಅದ್ಬುತ ಚಾಲನಾ ಅನುಭವ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಸ್ಟೀಲ್ ಟ್ಯೂಬುಲರ್ ಫ್ರೇಮ್ ಜೊತೆ ಜೊತೆಗೆ ಯುಎಸ್ ಡಿ ಫ್ರಂಟ್ ಫಾರ್ಕ್ ಮತ್ತು ಹಿಂದುಗಡೆ ಮೊನೊಶಾಕ್ ಸಸ್ಪೆನ್ಷನ್ ವ್ಯವಸ್ಥೆಯು ಕಂಡುಬರಲಿದೆ.

ಆರಾಮದಾಯಕ ಸಿಟ್ಟಿಂಗ್ ವ್ಯವಸ್ಥೆಯನ್ನು ಇದರಲ್ಲಿ ಕೊಡಲಾಗಿದ್ದು, ಭಾರತೀಯ ರಸ್ತೆ ಪರಿಸ್ಥಿತಿಗೆ ಹೆಚ್ಚು ಹೊಂದಿಕೆಯಾಗಲಿದೆ.

ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶಿಸುವ ನಿರೀಕ್ಷೆ ಹೊಂದಿರುವ ಬಿಎಕ್ಸ್ 250, ಸ್ವಲ್ಪ ದುಬಾರಿ ಬೈಕ್ ಖರೀದಿಗಾರರ ಪಾಲಿಗೆ ನೆಚ್ಚಿನ ಆಯ್ಕೆಯಾಗಿರಲಿದೆ.

ಮೋಟಾರ್ಡ್ 250 ಎಂಬ ಹೆಸರಿನಿಂದಲೂ ಅರಿಯಲ್ಪಡುವ ಬೆನೆಲ್ಲಿ ಬಿಎಕ್ಸ್ 250 ಡರ್ಟ್ ಬೈಕ್ ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ.


Click it and Unblock the Notifications








