ಭರ್ಜರಿ ಪುನರಾಗಮನ ಮಾಡಲಿರುವ ಬಜಾಜ್ ಚೇತಕ್

ಭಾರತೀಯ ಮಾರುಕಟ್ಟೆಗೆ ಐಕಾನಿಕ್ ಬಜಾಜ್ ಚೇತಕ್ ಸ್ಕೂಟರ್ ಭರ್ಜರಿ ಪುನರಾಗಮನವನ್ನು ಮಾಡಲಿದೆ.

By Nagaraja

ಗತಕಾಲದ ವೈಭವ ಮರುಕಳಿಸುವ ಇರಾದೆಯಲ್ಲಿರುವ ಬಜಾಜ್ ಚೇತಕ್ ಭರ್ಜರಿ ಪುನರಾಗಮನ ಮಾಡಿಕೊಳ್ಳಲಿದೆ. ಹಳೆಯ ಮಾದರಿಗೆ ಹೋಲಿಸಿದಾಗ ಹೊಸ ಚೇತಕ್ ಸಂಪೂರ್ಣವಾಗಿ ಹೊಸ ಸ್ವರೂಪವನ್ನು ಪಡೆದುಕೊಳ್ಳಲಿದ್ದು, ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಭರ್ಜರಿ ಪುನರಾಗಮನ ಮಾಡಲಿರುವ ಬಜಾಜ್ ಚೇತಕ್

ಈ ಹಿಂದೆ 2007ನೇ ಇಸವಿಯಲ್ಲಿ ಬಜಾಜ್ ಚೇತಕ್ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿತ್ತು. ಆ ವೇಳೆಯಲ್ಲಿ ವಾರ್ಷಿಕವಾಗಿ ಒಂದು ಮಿಲಿಯನ್ ಗಳಷ್ಟು ಸ್ಕೂಟರ್ ಗಳು ಮಾರಾಟವಾಗುತ್ತಿತ್ತು.

ಭರ್ಜರಿ ಪುನರಾಗಮನ ಮಾಡಲಿರುವ ಬಜಾಜ್ ಚೇತಕ್

ಪ್ರಸ್ತುತ ಪ್ರಮಾಣವೀಗ ವಾರ್ಷಿಕ 3.5 ಮಿಲಿಯನ್ ಗಳಿಗೆ ಏರಿಕೆ ಕಂಡಿದ್ದು, ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಬಜಾಜ್ ಗರಿಷ್ಠ ಮಾರಾಟವನ್ನು ಗುರಿಯಾರಿಸಿಕೊಂಡಿದೆ.

ಭರ್ಜರಿ ಪುನರಾಗಮನ ಮಾಡಲಿರುವ ಬಜಾಜ್ ಚೇತಕ್

ಬಲ್ಲ ಮೂಲಗಳ ಪ್ರಕಾರ ಬಜಾಜ್ ಚೇತಕ್ ಸ್ಕೂಟರ್ ರಿ ಎಂಟ್ರಿ ಕೊಡಲಿದೆ. ಆದರೆ ಪ್ರಾಯೋಗಿಕ ಪರಿಸ್ಥಿತಿಯಲ್ಲಿ ಈ ಸ್ಕೂಟರನ್ನು ಭಾರತೀಯ ಗ್ರಾಹಕರು ತುಂಬು ಮನಸ್ಸಿನಿಂದ ಸ್ವೀಕರಿಸುವರೇ ಎಂಬುದು ಕುತೂಹಲಕ್ಕೀಡುಮಾಡಿದೆ.

ಭರ್ಜರಿ ಪುನರಾಗಮನ ಮಾಡಲಿರುವ ಬಜಾಜ್ ಚೇತಕ್

ರೆಟ್ರೊ ಶೈಲಿಯ ವಿನ್ಯಾಸವನ್ನು ಬಜಾಜ್ ಚೇತಕ್ ಕಾಪಾಡಿಕೊಳ್ಳಲಿದೆ. ಮೊದಲ ತಲೆಮಾರಿನ ಚೇತಕ್ ಐಕಾನಿಕ್ ವೆಸ್ಪಾದಿಂದ ಪ್ರೇರಣೆಯನ್ನು ಪಡೆದು ನಿರ್ಮಿಸಲಾಗಿತ್ತು.

ಭರ್ಜರಿ ಪುನರಾಗಮನ ಮಾಡಲಿರುವ ಬಜಾಜ್ ಚೇತಕ್

ಇನ್ನು ಎಂಜಿನ್ ತಾಂತ್ರಿಕತೆ ಹಾಗೂ ವೈಶಿಷ್ಟ್ಯಗಳ ಬಗೆಗಿನ ವಿವರಗಳು ಸದ್ಯಕ್ಕೆ ಅಲಭ್ಯವಾಗಿದೆ. ಹಾಗಾಗಿ ಇನ್ನು ಸ್ವಲ್ಪ ಸಮಯ ಕಾಯಬೇಕಿದೆ.

ಭರ್ಜರಿ ಪುನರಾಗಮನ ಮಾಡಲಿರುವ ಬಜಾಜ್ ಚೇತಕ್

ನೂತನ ಬಜಾಜ್ ಚೇತಕ್ 125ರಿಂದ 150 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡುವ ಸಾಮರ್ಥ್ಯವಿದೆ. ಅಂದರೆ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಭರ್ಜರಿ ಪುನರಾಗಮನ ಮಾಡಲಿರುವ ಬಜಾಜ್ ಚೇತಕ್

ದೇಶದಲ್ಲಿ ಪಲ್ಸರ್ ಗಳಂತಹ ನಂ.1 ಕ್ರೀಡಾ ಬೈಕ್ ಗಳನ್ನು ನೀಡಿರುವ ಬಜಾಜ್ ಈಗ ಐಕಾನಿಕ್ ವಿಕ್ರಾಂತ್ ಹಡಗಿನ ಲೋಹದಿಂದ ನಿರ್ಮಿತ ವಿ ಶ್ರೇಣಿಯ ಬೈಕ್ ಗಳತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದೆ.

ಭರ್ಜರಿ ಪುನರಾಗಮನ ಮಾಡಲಿರುವ ಬಜಾಜ್ ಚೇತಕ್

ಇನ್ನೊಂದೆಡೆ ಇನ್ನೇನು ಕೆಲವೇ ದಿನಗಳ ಅವಧಿಯಲ್ಲಿ ಅತಿ ನೂತನ 400 ಸಿಸಿ ಬೈಕ್ ಸಹ ಬಜಾಜ್ ಬಿಡುಗಡೆಗೊಳಿಸಲಿದೆ.

ಭರ್ಜರಿ ಪುನರಾಗಮನ ಮಾಡಲಿರುವ ಬಜಾಜ್ ಚೇತಕ್

ಚೇತಕ್ ಹೊರತುಪಡಿಸಿದೆ ಸ್ಕೂಟರ್ ವಿಭಾಗದಲ್ಲಿ ಬಜಾಜ್ ಅಷ್ಟೇನು ಸದ್ದು ಮಾಡಿರಲಿಲ್ಲ. ಹಾಗಾಗಿ ಸ್ಕೂಟರ್ ವಿಭಾಗದಲ್ಲಿ ಬಜಾಜ್ ಯೋಜನೆ ಅತಿ ಹೆಚ್ಚು ಕುತೂಹಲವನ್ನುಂಟು ಮಾಡಿದೆ.

More from DriveSpark

Article Published On: Friday, November 25, 2016, 9:55 [IST]
English summary
Bajaj Auto To Relaunch The Chetak Scooter In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+