ಬಜಾಜ್ ಸಿಟಿ100 ಖರೀದಿಸಿ; ಬೆಲೆ ಈಗ 27,668 ರು. ಮಾತ್ರ!

By Nagaraja

ನೀವು ಬಜೆಟ್ ಬೈಕ್ ಖರೀದಿಸುವ ಇರಾದೆಯಲ್ಲಿದ್ದೀರಾ? ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವ ಬೈಕ್ ಯಾವುದು ಎಂಬುದರ ಗೊಂದಲದಲ್ಲಿದ್ದೀರಾ? ನಿಮ್ಮ ಕಾಯುವಿಕೆಗೆ ಇಲ್ಲಿಗೆ ಪೂರ್ಣ ವಿರಾಮ ಬೀಳಲಿದೆ.

ದೇಶದ ದೇಶದ ಮುಂಚೂಣಿಯ ದ್ವಿಚಕ್ರ ಸಂಸ್ಥೆಯಾಗಿರುವ ಬಜಾಜ್‌ನ ಬಜೆಟ್ ಬೈಕ್ ಸಿಟಿ100ಬಿ ಈಗ ಕೇವಲ 27,668 ರುಪಾಯಿಗಳಿಗೆ ನಿಮ್ಮ ಪಾಲಾಗಿಲಿದೆ. ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಬಜಾಜ್ ಸಿಟಿ100 ಖರೀದಿಸಿ; ಬೆಲೆ ಈಗ 27,668 ರು. ಮಾತ್ರ!

ಇ-ಕಾಮರ್ಸ್ ವೆಬ್ ಸೈಟ್ ಆದ ಪೇಟಿಎಂನಲ್ಲಿ ಇಂತಹದೊಂದು ಸುವರ್ಣಾವಕಾಶವನ್ನು ಖರೀದಿಗಾರರಿಗಾಗಿ ಒದಗಿಸಲಾಗುತ್ತಿದೆ. ಇಲ್ಲಿ ಮುಂಬೈ ಎಕ್ಸ್ ಶೋ ರೂಂ ಬೆಲೆ 23,668 ರು. ದಾಖಲಾಗಿದೆ.

ಬಜಾಜ್ ಸಿಟಿ100 ಖರೀದಿಸಿ; ಬೆಲೆ ಈಗ 27,668 ರು. ಮಾತ್ರ!

ಅಲ್ಲದೆ ಪೇಟಿಎಂ ಮುಖಾಂತರ ಬಜಾಜ್ ಸಿಟಿ100ಬಿ ಖರೀದಿಸುವಾಗ 5000 ರು.ಗಳ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ. ಈ ಮೂಲಕ ಗ್ರಾಹಕರು 27,668 ರು.ಗಳಿಗೆ ತಮ್ಮ ಬೈಕ್ ಮನೆಗೆ ಒಯ್ಯಬಹುದಾಗಿದೆ.

ಬಜಾಜ್ ಸಿಟಿ100 ಖರೀದಿಸಿ; ಬೆಲೆ ಈಗ 27,668 ರು. ಮಾತ್ರ!

ಒಮ್ಮೆ ಸಂಪೂರ್ಣ ಮೊತ್ತ ಪಾವತಿಸಿದ ಬಳಿಕ ಇಲ್ಲಿ 5,000 ರುಪಾಯಿಗಳು ನಿಮ್ಮ ಪೇಟಿಎಂ ಅಕೌಂಟ್ ಗೆ ಕ್ರೆಡಿಟ್ ಆಗಲಿದ್ದು, ಇದನ್ನು ಇತರೆ ಶಾಂಪಿಂಗ್ ಗಳಿಗಾಗಿ ಬಳಕೆ ಮಾಡಬಹುದಾಗಿದೆ.

ಬಜಾಜ್ ಸಿಟಿ100 ಖರೀದಿಸಿ; ಬೆಲೆ ಈಗ 27,668 ರು. ಮಾತ್ರ!

ಕಳೆದ ತಿಂಗಳಲ್ಲಿ ಬಿಡುಗಡೆಗೊಂಡಿರುವ ಬಜಾಜ್ ಸಿಟಿ100ಬಿ ದೆಹಲಿ ಎಕ್ಸ್ ಶೋ ರೂಂ ಬೆಲೆ 30,990 ರು.ಗಳಾಗಿವೆ. ಇದು ಸ್ಟ್ಯಾಂಡರ್ಡ್ ಸಿಟಿ100 ಗಿಂತಲೂ (ಸ್ಪೋಕ್ ವೀಲ್) 4,000 ರು.ಗಳಷ್ಟು ಕಡಿಮೆ ದರವಾಗಿದೆ.

ಬಜಾಜ್ ಸಿಟಿ100 ಖರೀದಿಸಿ; ಬೆಲೆ ಈಗ 27,668 ರು. ಮಾತ್ರ!

99.27 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಸಿಟಿ100ಬಿ 8.05 ಎನ್ ಎಂ ತಿರುಗುಬಲದಲ್ಲಿ 8.2 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಬಜಾಜ್ ಸಿಟಿ100 ಖರೀದಿಸಿ; ಬೆಲೆ ಈಗ 27,668 ರು. ಮಾತ್ರ!

ಇಲ್ಲಿ ಗಮನಾರ್ಹ ಸಂಗತಿಯೆಂದರೆ ನೂತನ ಸಿಟಿ 100ಬಿ ಪ್ರತಿ ಲೀಟರ್ ಗೆ 99.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇದು ಸ್ಟ್ಯಾಂಡರ್ಡ್ ಸಿಟಿ100 ಗಿಂತಲೂ 10 ಕೀ.ಮೀ. ಜಾಸ್ತಿ ಮೈಲೇಜ್ ನೀಡಲಿದೆ.

ಬಜಾಜ್ ಸಿಟಿ100 ಖರೀದಿಸಿ; ಬೆಲೆ ಈಗ 27,668 ರು. ಮಾತ್ರ!

ಇನ್ನು ಬಜಾಜ್ ಸಿಟಿ100ಬಿ ವೃತ್ತಕಾರದ ಹೆಡ್ ಲ್ಯಾಂಪ್, ಸೀಟು, ರಿಯರ್ ಲಗ್ಗೇಜ್ ಕ್ಯಾರಿಯರ್, ಸಹ ಪ್ರಯಾಣಿಕರಿಗೆ ಗ್ರಾಬ್ ರೈಲ್ ಮುಂತಾದ ಸೌಲಭ್ಯಗಳಿರಲಿದೆ.

Article Published On: Tuesday, March 1, 2016, 11:47 [IST]
English summary
Bajaj CT100B priced at INR 27,668 on Paytm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+