ಬಜಾಜ್ ಡಿಸ್ಕವರ್ 150 ಮಾರಾಟಕ್ಕೂ ಬೀಳಲಿದೆ ಬ್ರೇಕ್?

ಕಳಪೆ ಮಾರಾಟದ ಹಿನ್ನಲೆಯಲ್ಲಿ ಬಜಾಜ್ ಡಿಸ್ಕವರ್ 150 ಮಾರಾಟವನ್ನು ಹಿಂಪೆಡಯುವ ಸಾಧ್ಯತೆಯಿದೆ.

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಬಜಾಜ್ ಆಟೋ ಒಂದೊಂದಾಗಿ ತನ್ನ ಶ್ರೇಣಿಯ ವಾಹನಗಳನ್ನು ಪರಿಷ್ಕೃತಗೊಳಿಸುತ್ತಿದೆ. ಇದರಂಗವಾಗಿ ಕಳಪೆ ಮಾರಾಟದಲ್ಲಿರುವ ಪ್ರಯಾಣಿಕ ಬೈಕ್ ಗಳನ್ನು ಹಿಂಪಡೆದುಕೊಳ್ಳುತ್ತಿದೆ.

ಬಜಾಜ್ ಡಿಸ್ಕವರ್ 150 ಮಾರಾಟಕ್ಕೂ ಬೀಳಲಿದೆ ಬ್ರೇಕ್?

ಬಲ್ಲ ಮೂಲಗಳ ಪ್ರಕಾರ ಕಳಪೆ ಮಾರಾಟದಲ್ಲಿರುವ ಬಜಾಜ್ ಡಿಸ್ಕವರ್ 150ಎಫ್ ಮತ್ತು ಡಿಸ್ಕವರ್ 150ಎಸ್ ಮಾದರಿಗಳನ್ನು ಮಾರಾಟದಿಂದ ಹಿಂದಕ್ಕೆ ಪಡೆಯುವ ಸಾಧ್ಯತೆಗಳಿವೆ.

ಬಜಾಜ್ ಡಿಸ್ಕವರ್ 150 ಮಾರಾಟಕ್ಕೂ ಬೀಳಲಿದೆ ಬ್ರೇಕ್?

2014ನೇ ಸಾಲಿನಲ್ಲಿ ಬಿಡುಗಡೆಯಾದ ಬಜಾಜ್ ನ ಎರಡು ಜನಪ್ರಿಯ ಬೈಕ್ ಗಳಲ್ಲಿ ಡಿಸ್ಕವರ್ 150 ಸಿಸಿ ಮಾದರಿಗಳು ಸೇರಿಕೊಂಡಿದ್ದವು. ಆದರೆ ಬೈಕ್ ಖರೀದಿಗಾರರ ನಿರೀಕ್ಷೆಗಳು ಹೆಚ್ಚಿದಾಗ ಅದನ್ನು ನೆರವೇರಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಬಜಾಜ್ ಡಿಸ್ಕವರ್ 150 ಮಾರಾಟಕ್ಕೂ ಬೀಳಲಿದೆ ಬ್ರೇಕ್?

ಹಂತ ಹಂತವಾಗಿ ಬಜಾಜ್ ಡಿಸ್ಕವರ್ ಬೈಕ್ ಗಳು ಅವನತಿಯನ್ನು ಕಾಣುತ್ತಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 1272 ಯನಿಟ್ ಗಳಿಷ್ಟಿದ್ದ ಡಿಸ್ಕವರ್ 150 ಶ್ರೇಣಿಯ ಬೈಕ್ ಗಳ ಮಾರಾಟವೀಗ ಶೂನ್ಯಕ್ಕೆ ಬಂದು ತಲುಪಿದೆ.

ಬಜಾಜ್ ಡಿಸ್ಕವರ್ 150 ಮಾರಾಟಕ್ಕೂ ಬೀಳಲಿದೆ ಬ್ರೇಕ್?

ಡಿಸ್ಕವರ್ ಶ್ರೇಣಿಯ ಬೈಕ್ ಗಳನ್ನೇ ಬಜಾಜ್ ಹಿಂಪಡೆಯುವುದರ ಬಗ್ಗೆಯೂ ಮಾಹಿತಿಗಳಿವೆ. ಆದರೆ ಸದ್ಯಕ್ಕೆ 150 ಸಿಸಿ ಮಾತ್ರ ಮಾರಾಟ ನಿಲುಗಡೆಗೊಳಿಸುವ ಸಾಧ್ಯತೆಗಳಿವೆ.

ಬಜಾಜ್ ಡಿಸ್ಕವರ್ 150 ಮಾರಾಟಕ್ಕೂ ಬೀಳಲಿದೆ ಬ್ರೇಕ್?

144.8 ಸಿಸಿ ಸಿಂಗಲ್ ಸಿಲಿಂಡರ್ 4 ವಾಲ್ವ್ ಡಿಟಿಎಸ್-ಐ ಜೊತೆಗೆ ಎಕ್ಸಾಸ್ಟ್ ಟೆಕ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಡಿಸ್ಕವರ್ 150 ಬೈಕ್ 12.75 ಎನ್ ಎಂ ತಿರುಗುಬಲದಲ್ಲಿ 14.5 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಬಜಾಜ್ ಡಿಸ್ಕವರ್ 150 ಮಾರಾಟಕ್ಕೂ ಬೀಳಲಿದೆ ಬ್ರೇಕ್?

ಐದು ಸ್ಪೀಡ್ ಗೇರ್ ಬಾಕ್ಸ್ ನೊಂದಿಗಿರುವ ಬಜಾಜ್ ಡಿಸ್ಕವರ್ 150 ಸಿಸಿ ಬೈಕ್ ಗಂಟೆಗೆ ಗರಿಷ್ಠ 110 ಕೀ.ಮೀ. ವೇಗದಲ್ಲಿ ಸಂಚರಿಸಬಲ್ಲದ್ದು.

ಬಜಾಜ್ ಡಿಸ್ಕವರ್ 150 ಮಾರಾಟಕ್ಕೂ ಬೀಳಲಿದೆ ಬ್ರೇಕ್?

ಡಿಸ್ಕವರ್ ಶ್ರೇಣಿಯ ಬೈಕ್ ಗಳು ದೇಶದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 54,000 ರು.ಗಳಿಂದ 58,000 ರು.ಗಳ ವರೆಗೆ ದುಬಾರಿಯೆನಿಸುತ್ತದೆ.

More from DriveSpark

Article Published On: Monday, December 5, 2016, 17:53 [IST]
English summary
Bajaj Discover 150 Likely To Be Discontinued Owing To Sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+