ಕೆಟಿಎಂಗಿಂತಲೂ ಅಗ್ಗ ಬಜಾಜ್ ಡೊಮಿನರ್; ಬೆಂಗಳೂರು ಬೆಲೆ, ವೈಶಿಷ್ಟ್ಯ!

ಅತಿ ನೂತನ ಬಜಾಜ್ ಡೊಮಿನರ್ 400 ಸಿಸಿ ಬೈಕ್ ಬಗೆಗಿನ ಸಮಗ್ರ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.

By Nagaraja

ಬಹುನಿರೀಕ್ಷಿತ ಬಜಾಜ್ ಡೊಮಿನರ್ 400 ಸಿಸಿ ಕ್ರೂಸರ್ ಸ್ಪೋರ್ಟ್ ಬೈಕ್ ಭಾರತ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಂಡಿದ್ದು, ಯುವ ಬೈಕ್ ಪ್ರೇಮಿಗಳ ನೆಚ್ಚಿನ ಬೈಕ್ ಕೆಟಿಎಂ ಡ್ಯೂಕ್ 400 ಮಾದರಿಗಿಂತಲೂ ಅಗ್ಗವೆನಿಸಿದೆ. ಪ್ರಸ್ತುತ ಲೇಖನದಲ್ಲಿ ಬಜಾಜ್ ಡೊಮಿನರ್ 400 ಸಿಸಿ ಬೈಕ್ ಬೆಂಗಳೂರು ಬೆಲೆ ಸೇರಿದಂತೆ ಪ್ರತಿಯೊಬ್ಬ ವಾಹನ ಉತ್ಸಾಹಿ ತಿಳಿದುಕೊಳ್ಳಬೇಕಾದ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗುವುದು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

  • ಡಿಸ್ಕ್ ಬ್ರೇಕ್: 1,37,723 ರು.
  • ಟ್ವಿನ್ ಚಾನೆಲ್ ಎಬಿಎಸ್: 1,51,973 ರು.
  • ಎಂಜಿನ್ ತಾಂತ್ರಿಕತೆ

    ಎಂಜಿನ್ ತಾಂತ್ರಿಕತೆ

    ವಿಧ: ಟ್ರಿಪಲ್ ಸ್ಪಾರ್ಕ್ 4 ವಾಲ್ವ್ ಡಿಟಿಎಸ್-ಐ ಎಂಜಿನ್, ಫ್ಯೂಯಲ್ ಇಂಜೆಕ್ಷನ್, ಲಿಕ್ವಿಡ್ ಕೂಲ್ಡ್

    ಸಾಮರ್ಥ್ಯ: 373.3 ಸಿಸಿ

    ಗರಿಷ್ಠ ಅಶ್ವಶಕ್ತಿ: 35

    ತಿರುಗುಬಲ: 35

    ಕ್ಲಚ್: ಸ್ಲಿಪರ್ ಕ್ಲಚ್

    ಗೇರ್ ಬಾಕ್ಸ್: ಆರು ಸ್ಪೀಡ್

    ಚಾಸೀ ಮತ್ತು ಸಸ್ಪೆನ್ಷನ್

    ಚಾಸೀ ಮತ್ತು ಸಸ್ಪೆನ್ಷನ್

    ಫ್ರೇಮ್: ಬೀಮ್ ವಿಧದ ಪೆರಿಮೀಟರ್ ಫ್ರೇಮ್

    ಮುಂಭಾಗ ಸಸ್ಪೆನ್ಷನ್: ಟೆಲಿಸ್ಕಾಪಿಕ್ 43 ಎಂಎಂ ಫಾರ್ಕ್

    ಹಿಂಭಾಗ ಸಸ್ಪೆನ್ಷನ್: ಬಹು ವಿಧದ ಹೊಂದಾಣಿಸಬಹುದಾದ ಮೊನೊ ಶಾಕ್

    ಬ್ರೇಕ್ ಮತ್ತು ಚಕ್ರಗಳು

    ಬ್ರೇಕ್ ಮತ್ತು ಚಕ್ರಗಳು

    ಬ್ರೇಕ್ ಮುಂಭಾಗ (ಎಂಎಂ): ಟ್ವಿನ್ ಚಾನೆಲ್ ಎಬಿಎಸ್, 320 ಡಯಾ ಡಿಸ್ಕ್

    ಬ್ರೇಕ್ ಹಿಂಭಾಗ (ಎಂಎಂ): ಟ್ವಿನ್ ಚಾನೆಲ್ ಎಬಿಎಸ್, 230 ಡಯಾ ಡಿಸ್ಕ್

    ಮುಂಭಾಗದ ಚಕ್ರ: 110/70-17 ರೇಡಿಯಲ್

    ಹಿಂಭಾಗದ ಚಕ್ರ: 150/60-17

    ಆಯಾಮ (ಎಂಎಂ)

    ಆಯಾಮ (ಎಂಎಂ)

    ಉದ್ದ: 2156

    ಅಗಲ: 813

    ಎತ್ತರ: 1112

    ಚಕ್ರಾಂತರ: 1453

    ಗ್ರೌಂಡ್ ಕ್ಲಿಯರನ್ಸ್: 157

    ಭಾರ (ಕೆ.ಜಿ): 182

    ಇಂಧನ ಟ್ಯಾಂಕ್ ಸಾಮರ್ಥ್ಯ (ಲೀಟರ್): 13

    ಎಲೆಕ್ಟ್ರಿಕ್

    ಎಲೆಕ್ಟ್ರಿಕ್

    ಬ್ಯಾಟರಿ: 12ವ್ಯಾಟ್, 8ಎಎಚ್ ವಿಆರ್‌‌ಎಲ್‌ಎ

    ಹೆಡ್ ಲ್ಯಾಂಪ್: ಎಲ್ ಇಡಿ ಜೊತೆ ಆಟೋ ಹೆಡ್ ಲ್ಯಾಂಪ್ ಆನ್ (ಎಎಚ್‌ಒ)

    ವಿಶಿಷ್ಟತೆ - ರಸ್ತೆ ಸಾನಿಧ್ಯ ಮತ್ತು ವಿನ್ಯಾಸ

    ವಿಶಿಷ್ಟತೆ - ರಸ್ತೆ ಸಾನಿಧ್ಯ ಮತ್ತು ವಿನ್ಯಾಸ

    ರಸ್ತೆ ಅಧಿಪತ್ಯ ಮಾಡುವ ಬೃಹತ್ ಸಾನಿಧ್ಯವನ್ನು ಡೊಮಿನರ್ ಕಾಪಾಡಿಕೊಂಡಿದೆ. ಇದರ 43 ಎಂಎಂ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಜೊತೆ ಯೂನಿಕ್ ಡ್ಯುಯಲ್ ಸ್ಪ್ರಿಂಗ್ ಮೊನೊ ಸಸ್ಪೆನ್ಷನ್ ರಾತ್ರಿ ವೇಳೆಯಲ್ಲೂ ಆರಾಮದಾಯಕ ಚಾಲನೆ ಖಾತ್ರಿಪಡಿಸಲಿದೆ.

    ಲಿಯೊ ಸಾನಿಧ್ಯ

    ಲಿಯೊ ಸಾನಿಧ್ಯ

    ಲಿಯೊ ಸಾನಿಧ್ಯದಿಂದ ಸ್ಪೂರ್ತಿ ಪಡೆದಿರುವ ಬಜಾಜ್ ಡೊಮಿನರ್ 400 ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಇದು ಆಕ್ರಮಣಕಾರಿ ನೆಕ್ಡ್ ವಿನ್ಯಾಸ, ದೊಡ್ಡದಾದ ಟ್ಯಾಂಕ್ ಹಾಗೂ ರಿಯರ್ ಲೈಟ್ಸ್ ಗಳು ಒಂದೇ ನೋಟದಲ್ಲಿ ಪ್ರಾಬಲ್ಯದ ನಡೆತೆಯನ್ನು ತೋರಿಸುತ್ತದೆ.

    ಹ್ಯಾಂಡ್ಲಿಂಗ್ ಮತ್ತು ಕಂಟ್ರೋಲ್ - ಅಗಲ ಮತ್ತು ಕಡಿಮೆ ಸಾನಿಧ್ಯದ ರೇಡಿಯಲ್ ಚಕ್ರಗಳು

    ಹ್ಯಾಂಡ್ಲಿಂಗ್ ಮತ್ತು ಕಂಟ್ರೋಲ್ - ಅಗಲ ಮತ್ತು ಕಡಿಮೆ ಸಾನಿಧ್ಯದ ರೇಡಿಯಲ್ ಚಕ್ರಗಳು

    ಹಿಂದುಗಡೆಯ ಅಗಲವಾದ ಚಕ್ರಗಳು ಗರಿಷ್ಠ ವೇಗದಲ್ಲೂ ಅತ್ಯುತ್ತಮ ಸ್ಥಿರತೆಯನ್ನು ಪ್ರದಾನ ಮಾಡಲಿದೆ. ಇದರ ಕಡಿಮೆ ಸಾನಿಧ್ಯದ ರೇಡಿಯಲ್ ಚಕ್ರಗಳು ಕಡಿದಾದ ತಿರುವು ಹಾಗೂ ರಾತ್ರಿ ವೇಳೆಯಲ್ಲೂ ಸ್ಥಿರತೆ ಕಾಪಾಡಿಕೊಳ್ಳಲಿದೆ.

    ಮೆಟಲ್ ಸ್ವಿಂಗಾರ್ಮ್

    ಮೆಟಲ್ ಸ್ವಿಂಗಾರ್ಮ್

    ಇದರ ಮೆಟಲ್ ಸ್ವಿಂಗಾರ್ಮ್ ಹೆಚ್ಚಿನ ಅನುಭವ ಇಲ್ಲದವರಿಗೂ ಬಹಳ ಸಲೀಸಾಗಿ ಬಜಾಜ್ ಡೊಮಿನರ್ 400 ಓಡಿಸಲು ಸಾಧ್ಯವಾಗಲಿದೆ.

     ಬೀಮ್ ವಿಧದ ಪೆರಿಮೀಟರ್ ಫ್ರೇಮ್

    ಬೀಮ್ ವಿಧದ ಪೆರಿಮೀಟರ್ ಫ್ರೇಮ್

    ಇದರ ಬೀಮ್ ವಿಧದ ಪೆರಿಮೀಟರ್ ಫ್ರೇಮ್ ಅತ್ಯುತ್ತಮ ಬಿಗಿತವನ್ನು ಪ್ರದಾನ ಮಾಡಲಿದೆ. ಅಲ್ಲದೆ ಸವಾರನಿಗೆ ನಿಖರವಾದ ಹ್ಯಾಂಡ್ಲಿಂಗ್ ನೀಡಲಿದೆ.

    ಸ್ಲಿಪರ್ ಕ್ಲಚ್

    ಸ್ಲಿಪರ್ ಕ್ಲಚ್

    ಇದೇ ಮೊದಲ ಬಾರಿಗೆ ಬಜಾಜ್ ಬೈಕ್ ವೊಂದರಲ್ಲಿ ಸ್ಲಿಪರ್ ಕ್ಲಚ್ ತಂತ್ರಜ್ಞಾನವನ್ನು ನೀಡಲಾಗುತ್ತಿದೆ. ಇದರಿಂದಾಗಿ ಗೇರ್ ಬದಲಾಯಿಸುವುದು ವೇಗತೆಗೆ ಧಕ್ಕೆಯುಂಟಾಗುವುದಿಲ್ಲ.

    ವೇಗವರ್ಧನೆ

    ವೇಗವರ್ಧನೆ

    ಬಜಾಜ್ ಡೊಮಿನರ್ 400 ಸಿಸಿ ಬೈಕ್ ಕೇವಲ 8.23 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ.

    ಟ್ವಿನ್ ಚಾನೆಲ್ ಬ್ರೇಕಿಂಗ್

    ಟ್ವಿನ್ ಚಾನೆಲ್ ಬ್ರೇಕಿಂಗ್

    ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು. ಟ್ವಿನ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆಯನ್ನು ಕೊಡಲಾಗಿದೆ. ಹಾಗೆಯೇ ದೊಡ್ಡದಾದ 320 ಎಂಎಂ ಡಿಸ್ಕ್ ಬ್ರೇಕ್ ಇದರಲ್ಲಿರುತ್ತದೆ.

    ಕೆಟಿಎಂಗಿಂತಲೂ ಅಗ್ಗ ಬಜಾಜ್ ಡೊಮಿನರ್; ಬೆಂಗಳೂರು ಬೆಲೆ, ವೈಶಿಷ್ಟ್ಯ!

    ಅಂತಿಮವಾಗಿ ಆಧುನಿಕತೆಗೆ ತಕ್ಕಂತೆ ಸಂಪೂರ್ಣ ಎಲ್ ಇಡಿ ಹೆಡ್ ಲ್ಯಾಂಪ್ ಹಾಗೂ ವಿಭಜಿತ ರಿವರ್ಸ್ ಎಲ್ ಸಿಡಿ ಡಿಸ್ ಪ್ಲೇ ವ್ಯವಸ್ಥೆಯನ್ನು ಕೊಡಲಾಗಿದೆ.

Article Published On: Friday, December 16, 2016, 12:44 [IST]
English summary
Bajaj Dominar 400 Benagaluru Price, Specs, Features And More Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+