ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಬಜಾಜ್ ಪಲ್ಸರ್ ದೇಶದ ನಂ.1 ಕ್ರೀಡಾ ಬೈಕಾಗಿದ್ದು, 200 ಎನ್ ಎಸ್ ಆವೃತ್ತಿಗೀಗ ಶಕ್ತಿಶಾಲಿ ಕವಾಸಕಿ ಬೈಕ್ ಗೆ ಹೋಲುವಂತಹ ವಿನ್ಯಾಸ ಕಲ್ಪಿಸಿಕೊಡಲಾಗಿದೆ.

By Nagaraja

ಬೈಕ್ ಪ್ರೇಮಿಗಳನ್ನು ಮೈ ಜುಮ್ ಎನಿಸುವ ರೀತಿಯಲ್ಲಿ ಅತಿ ನೂತನ ಪಲ್ಸರ್ ಕ್ರೀಡಾ ಬೈಕ್ ಪ್ರತ್ಯಕ್ಷಗೊಂಡಿದೆ. ಇದು ನೀವು ಕಂಡಿರುವ ಇದುವರೆಗಿನ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಬೈಕಾ? ಎಂಬುದು ಬಾರಿ ಚರ್ಚೆಗೀಡು ಮಾಡಿದೆ. ವಿಶೇಷ ಏನೆಂದರೆ ಪಲ್ಸರ್ 200ಎನ್ ಎಸ್ ಮಾದರಿಯನ್ನು ಸಂಪೂರ್ಣವಾಗಿ ಮಾರ್ಪಾಡುಗೊಳಿಸಲಾಗಿದ್ದು, ಅಪ್ಪಟ ಕವಾಸಕಿ ಝಡ್1000 ಸುಗೊಮಿ ವಿನ್ಯಾಸ ಸ್ಪೂರ್ತಿಯನ್ನು ಗಿಟ್ಟಿಸಿಕೊಂಡಿದೆ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಮೊದಲ ನೋಟದಲ್ಲಿ ಇದು ಪಲ್ಸರ್ ಬೈಕೇ ಎಂಬ ಸಂದೇಹ ನಿಮ್ಮಲ್ಲಿ ಮೂಡಬಹುದು. ಯಾಕೆಂದರೆ ಅಷ್ಟೊಂದು ಅಚ್ಚುಕಟ್ಟಾಗಿ ಶಕ್ತಿಶಾಲಿ ಕವಾಸಕಿ ಬೈಕ್ ನ ರೂಪವನ್ನು ಕಲ್ಪಿಸಿ ಕೊಡಲಾಗಿದೆ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಮುಂದುಗಡೆ ಟು ಪ್ಯಾಡ್ ಎಲ್ ಇಡಿ ಹೆಡ್ ಲೈಟ್ ಜೊತೆ ಕಸ್ಟಮ್ ವಿಂಡ್ ಶೀಲ್ಡ್, ಹೊಸತಾದ ಶಕ್ತಿಯುತ ಇಂಧನ ಟ್ಯಾಂಕ್ ಮತ್ತು ಹಿಂದುಗಡೆ ಚೂಪಾದ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಪಲ್ಸರ್ 200 ಎನ್ ಎಸ್ ಮಾದರಿಯು ಕವಾಸಕಿ ಝಡ್1000 ಮಾದರಿಗೆ ಸಮಾನವಾದ ತ್ರಿಕೋನ ಎಲ್ ಇಡಿ ಟೈಲ್ ಲೈಟ್ ಗಳನ್ನು ಗಿಟ್ಟಿಸಿಕೊಂಡಿದೆ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಇಷ್ಟೆಲ್ಲ ಆದರೂ ಎಲ್ ಇಡಿ ಹೆಡ್ ಲೈಟ್ ಗಳ ಮಧ್ಯ ಭಾಗದಲ್ಲಿ ಮಸೆರಟಿ ಲಾಂಛನವನ್ನು ಲಗತ್ತಿಸರುವುದು ಗಮನಾರ್ಹವೆನಿಸುತ್ತದೆ. ಬಹುಶ: ಇದರ ಮಾಲಿಕ ಮಸೆರಟಿ ಸೂಪರ್ ಕಾರಿನ ಅಭಿಮಾನಿಯಾಗಿರಲೂಬಹುದು.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

2012ನೇ ಸಾಲಿನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಪಲ್ಸರ್ 200 ಎನ್ ಎಸ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಬಳಿಕ 2015ರಲ್ಲಿ ಮಾರಾಟವನ್ನು ಹಿಂಪಡೆಯಲಾಗಿತ್ತು.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಅಂದ ಹಾಗೆ ವಿಯೆಟ್ನಾದಲ್ಲಿ ಈ ಮನಮೋಹಕ ಬೈಕ್ ಪ್ರತ್ಯಕ್ಷಗೊಂಡಿದೆ. ತನ್ಮೂಲಕ ವಿಯೆಟ್ನಾದಲ್ಲೂ ಪಲ್ಸರ್ ಪ್ರೇಮಕ್ಕೆ ಸಾಕ್ಷಿಯಾಗಿದೆ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಕೇವಲ ಹೊರಮೈ ವಿನ್ಯಾಸ ಮಾತ್ರವಲ್ಲದೆ ಇಲ್ಲಿ 200 ಎನ್ ಎನ್ ಪಲ್ಸರ್ ಬೈಕ್ ನ ಎಂಜಿನನ್ನು ಶಕ್ತಿಶಾಲಿ 350 ಸಿಸಿ ಎಂಜಿನ್ ಆಗಿ ಮಾರ್ಪಾಡುಗೊಳಿಸಲಾಗಿದೆ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಬಜಾಜ್ ಪಲ್ಸರ್ 200 ಎನ್ ಎಸ್ ನಲ್ಲಿರುವ ಎಂಜಿನ್ 18.3 ಎನ್ ಎಂ ತಿರುಗುಬಲದಲ್ಲಿ 21 ಅಶ್ವಶಕ್ತಿ ಉತ್ಪಾದಿಸುತ್ತದೆ. ಆದರೆ ಈ ಬದಲಾದ ಪಲ್ಸರ್ ಎಂಜಿನ್ ತಾಂತ್ರಿಕತೆಗಳ ಬಗೆಗಿನ ವಿವರಗಳು ತಿಳಿದು ಬಂದಿಲ್ಲ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಇನ್ನುಳಿದಂತೆ 180 ರಿಯರ್ ಚಕ್ರಗಳು, ಬ್ರೆಂಬೊ ಬ್ರೇಕ್ ಕ್ಯಾಲಿಪರ್, ಆಸ್ಟನ್ ರೇಸಿಂಗ್ ಮತ್ತು ವಿನೂತನ ಶೈಲಿಯ ಎಕ್ಸಾಸ್ಟ್ ಕೊಳವೆಗಳನ್ನು ಜೋಡಿಸಲಾಗಿದೆ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಕಾರ್ಬನ್ ಫೈಬರ್ ಹೋದಿಕೆಯ ಹ್ಯಾಂಡಲ್ ಬಾರ್, ಹೊಸತಾದ ಸೀಟುಗಳು, ಪೆಡಲ್ ಡಿಸ್ಕ್ ಮತ್ತು ಪರಿಷ್ಕೃತ ಇನ್ಸ್ಟ್ರುಮೆಂಟ ಕ್ಲಸ್ಟರ್ ಸಹ ಗಮನ ಸೆಳೆಯುತ್ತದೆ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ದೇಶದಲ್ಲಿ ಅತೀವ ಬೇಡಿಕೆಯನ್ನು ಪರಿಗಣಿಸಿ ಬಜಾಜ್ 200 ಎನ್ ಎಸ್ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರು ಪ್ರವೇಶ ಮಾಡಿದ್ದಲ್ಲಿ ಅಚ್ಚರಿಪಡಬೇಕಿಲ್ಲ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಹಾಗೊಂದು ವೇಳೆ ಭಾರತಕ್ಕೆ ರಿ ಎಂಟ್ರಿ ಕೊಟ್ಟಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲ್ ಇಡಿ ಬೆಳಕಿನ ಸೇವೆ, ಫ್ಯೂಯಲ್ ಇಂಜೆಕ್ಟಡ್ ತಂತ್ರಜ್ಞಾನದೊಂದಿಗೆ ಆಗಮನವಾಗುವ ಸಾಧ್ಯತೆ ಹೆಚ್ಚಾಗಿದೆ.

ಇದೇನಾ ಸರ್ವಕಾಲಿಕ ಶ್ರೇಷ್ಠ ಪಲ್ಸರ್ ಕ್ರೀಡಾ ಬೈಕ್?

ಪ್ರಸ್ತುತ ಪಲ್ಸರ್ ಕ್ರೀಡಾ ಬೈಕ್ ಬಗ್ಗೆ ನಿಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

More from DriveSpark

Article Published On: Friday, October 28, 2016, 12:25 [IST]
English summary
This Bajaj Pulsar 200NS Has Been Blinged Up To Its Core
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+