ಬೈಕ್ ಪ್ರೇಮಿಗಳಿಗಾಗಿ 2017 ಬಜಾಜ್ ಪಲ್ಸರ್ 220ಎಫ್ ಬಿಡುಗಡೆ

ಪಲ್ಸರ್ ದೇಶದ ಜನಪ್ರಿಯ ಕ್ರೀಡಾ ಬೈಕಾಗಿದ್ದು, ಇದಕ್ಕೀಗ ನೂತನ 2017 ಪಲ್ಸರ್ 220ಎಫ್ ಸೇರ್ಪಡೆಗೊಂಡಿದೆ.

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಬಜಾಜ್ ಆಟೋ, ಅತಿ ನೂತನ 2017 ಪಲ್ಸರ್ 220ಎಫ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. 2017 ಬಜಾಜ್ ಪಲ್ಸರ್ 220ಎಫ್ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದ್ದು, ಬಿಎಸ್ IV ಮಾಲಿನ್ಯ ಮಟ್ಟದ ಎಂಜಿನ್ ಪಡೆದುಕೊಂಡಿದೆ.

ಬೈಕ್ ಪ್ರೇಮಿಗಳಿಗಾಗಿ 2017 ಬಜಾಜ್ ಪಲ್ಸರ್ 220ಎಫ್ ಬಿಡುಗಡೆ

ಪ್ರಮುಖವಾಗಿಯೂ ಪಲ್ಸರ್ 220ಎಫ್ ಅಂದತೆಯಲ್ಲಿ ಬದಲಾವಣೆಗಳನ್ನು ತರಲಾಗಿದೆ. ಇದು ಹೊಸತಾದ ಗ್ರಾಫಿಕ್ಸ್ ಮತ್ತು ಸ್ಟಿಕ್ಕರ್ ಸೇವೆಗಳನ್ನು ಗಿಟ್ಟಿಸಿಕೊಂಡಿದೆ.

ಬೈಕ್ ಪ್ರೇಮಿಗಳಿಗಾಗಿ 2017 ಬಜಾಜ್ ಪಲ್ಸರ್ 220ಎಫ್ ಬಿಡುಗಡೆ

ಹಾಗಿದ್ದರೂ ತಾಂತ್ರಿಕವಾದ ಬದಲಾವಣೆಗಳ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಇದು ಹಿಂದಿನಗಿಂತಲೂ ಹೆಚ್ಚು ಪರಿಣಾಮಕಾರಿಯೆನಿಸಿಕೊಂಡಿದೆ.

ಬೈಕ್ ಪ್ರೇಮಿಗಳಿಗಾಗಿ 2017 ಬಜಾಜ್ ಪಲ್ಸರ್ 220ಎಫ್ ಬಿಡುಗಡೆ

ಈಗಿರುವ ಬಜಾಜ್ ಪಲ್ಸರ್ ಗಿಂತಲೂ ಹೆಚ್ಚು ಪ್ರಭಾವಶಾಲಿ 220 ಸಿಸಿ ಸಿಂಗಲ್ ಸಿಂಡರ್ 4 ಸ್ಟ್ರೋಕ್ ಡಿಟಿಎಸ್-ಐ ಎಂಜಿನ್ ಪಡೆದಿದೆ. ಇದು 19.12 ಎನ್ ಎಂ ತಿರುಗುಬಲದಲ್ಲಿ 21 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬೈಕ್ ಪ್ರೇಮಿಗಳಿಗಾಗಿ 2017 ಬಜಾಜ್ ಪಲ್ಸರ್ 220ಎಫ್ ಬಿಡುಗಡೆ

ನೂತನ ಪಲ್ಸರ್ 220ಎಫ್ ಫೈವ್ ಸ್ಪೀಡ್ ಗೇರ್ ಬಾಕ್ಸ್ ಗಿಟ್ಟಿಸಿಕೊಳ್ಳಲಿದೆ. ಇನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಬದಲಾವಣೆ ಕಂಡುಬರಲಿದ್ದು, ನೀಲಿ ಬೆಳಕಿನ ಸೇವೆಯಿರಲಿದೆ.

ಬೈಕ್ ಪ್ರೇಮಿಗಳಿಗಾಗಿ 2017 ಬಜಾಜ್ ಪಲ್ಸರ್ 220ಎಫ್ ಬಿಡುಗಡೆ

ಮೃದುವಾದ ಸೀಟು, ಕೆಂಪು ಮತ್ತು ಕಪ್ಪು ಪಟ್ಟಿ, ಮ್ಯಾನುವಲ್ ಚೋಕ್, ಅಲಾಯ್ ಚಕ್ರಗಳು ಮತ್ತು ಮ್ಯಾಟ್ ಬ್ಲ್ಯಾಕ್ ಫಿನಿಶಿಂಗ್ ಎಕ್ಸಾಸ್ಟ್ ಕೊಳವೆಗಳಿರಲಿದೆ.

ಬೈಕ್ ಪ್ರೇಮಿಗಳಿಗಾಗಿ 2017 ಬಜಾಜ್ ಪಲ್ಸರ್ 220ಎಫ್ ಬಿಡುಗಡೆ

ನೂತನ ಬಜಾಜ್ ಪಲ್ಸರ್ 220ಎಫ್ ಥಾಣೆ ಎಕ್ಸ್ ಶೋ ರೂಂ ಬೆಲೆಯು 91,000 ರು.ಗಳಷ್ಟು ದುಬಾರಿಯೆನಿಸಲಿದ್ದು, ಆನ್ ರೋಡ್ ಬೆಲೆ ಅಂದಾಜು 1.03 ಲಕ್ಷ ರುಪಾಯಿಗಳಿಗೆ ತಲುಪಲಿದೆ. ಅಂದರೆ ಈಗಿರುವ ಮಾದರಿಗಿಂತಲೂ ಸರಿ ಸುಮಾರು 4,000 ರು.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

ಬೈಕ್ ಪ್ರೇಮಿಗಳಿಗಾಗಿ 2017 ಬಜಾಜ್ ಪಲ್ಸರ್ 220ಎಫ್ ಬಿಡುಗಡೆ

ದೇಶದಲ್ಲಿ ಪಲ್ಸರ್ ಶ್ರೇಣಿಯ ಬೈಕ್ ಗಳು 135 ರಿಂದ ಆರಂಭಿಸಿ, 150, 180, ಆರ್ ಎಸ್ 200 ಹಾಗೂ 220 ಎಫ್ ವರೆಗೂ ಹರಡಿದ್ದು, ಇದಕ್ಕೀಗ 400 ಸಿಸಿ ಸಹ ಸೇರ್ಪಡೆಗೊಳ್ಳಲಿದೆ.

More from DriveSpark

Article Published On: Friday, November 11, 2016, 10:15 [IST]
English summary
2017 Bajaj Pulsar 220F With BS4 Engine Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+