ಬಜಾಜ್‌ಗೆ ಮಗದೊಂದು ಗರಿ; ಪಲ್ಸರ್ ಶಕ್ತಿಶಾಲಿ ಸಿಎಸ್400 ಮಾರುಕಟ್ಟೆಯತ್ತ
ದೇಶದ ನಂ.1 ಕ್ರೀಡಾ ಬೈಕ್ ತಯಾರಿಕ ಸಂಸ್ಥೆ ಬಜಾಜ್ ಆಟೋ, ಅತಿ ಶೀಘ್ರದಲ್ಲೇ ತನ್ನ ಜನಪ್ರಿಯ ಪಲ್ಸರ್ ಶ್ರೇಣಿಯ ಅತ್ಯಂತ ಶಕ್ತಿಶಾಲಿ ಸಿಎಸ್400 ಬೈಕನ್ನು ಬಿಡುಗಡೆಗೊಳಿಸಲಿದೆ. ಇದು ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಜಾಜ್‌ಗೆ ಮಗದೊಂದು ಗರಿ ನೀಡಲಿದೆ.
Also Read: ಅಚ್ಚರಿ! ಬಜಾಜ್ ವಿ15, 150 ಸಿಸಿ ಬೈಕ್‌ನ ಬೆಲೆ ಎಷ್ಟು ಗೊತ್ತಾ?
ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಬಜಾಜ್ ಪಲ್ಸರ್ ಸಿಎಸ್400 ಕೆಲವೇ ತಿಂಗಳೊಳಗೆ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಉತ್ಸಾಹಕ್ಕೆ ಕಾರಣವಾಗಿದೆ.

ಪಲ್ಸರ್ ಸಿಎಸ್400 ಪೂರ್ಣರೂಪ
ಇಲ್ಲಿ ಪಲ್ಸರ್ 'ಸಿಎಸ್' ಎಂಬುದು ಕ್ರೂಸರ್ ಸ್ಪೋರ್ಟ್ ಎಂಬುದನ್ನು ಸೂಚಿಸುತ್ತದೆ. ಅಂತೆಯೇ 400 ಎಂಬುದು ಎಂಜಿನ್ ಸಾಮರ್ಥ್ಯವನ್ನು ಬಿಂಬಿಸಲಿದೆ.

ಕೆಟಿಎಂ ಡ್ಯೂಕ್ 390 ಎಂಜಿನ್
ನೂತನ ಪಲ್ಸರ್ ಸಿಎಸ್400 ಬೈಕ್ ನಲ್ಲಿ ಕೆಟಿಎಂ ಡ್ಯೂಕ್ 390ಗೆ ಸಮಾನವಾದ ಎಂಜಿನ್ ಬಳಕೆಯಾಗಲಿದೆ. ನೀವಿಲ್ಲಿ ಕೆಟಿಎಂ ಜೊತೆಗಿನ ಬಜಾಜ್ ಪಾಲುದಾರಿಕೆಯನ್ನು ನೆನಪಿಸಿಕೊಳ್ಳಬಹುದಾಗಿದೆ.

ಎಂಜಿನ್ ಸಾಮರ್ಥ್ಯ
ಇದರಲ್ಲಿರುವ 373.4 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಪೋರ್ ಸ್ಟ್ರೋಕ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ 40 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಹಾಗೆಯೇ 6 ಸ್ಪೀಡ್ ರೇಗ್ ಬಾಕ್ಸ್ ಇದರಲ್ಲಿರುತ್ತದೆ. ಇನ್ನೊಂದೆಡೆ ಕೆಟಿಎಂ ಡ್ಯೂಕ್ 35 ಎನ್ ಎಂ ತಿರುಗುಬಲದಲ್ಲಿ 43.5 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಬ್ರೇಕ್
ನೂತನ ಪಲ್ಸರ್ ಸಿಎಸ್400, ಮುಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ.

ಸಸ್ಪೆನ್ಷನ್
ಅಂತೆಯೇ ಮುಂಭಾಗದಲ್ಲಿ ಇನ್ವರ್ಟಡ್ ಸಸ್ಪೆನ್ಷನ್ ಮತ್ತು ಮೊನೊಶಾಕ್ ರಿಯರ್ ಸಸ್ಪೆನ್ಷನ್ ಗಿಟ್ಟಿಸಿಕೊಳ್ಳಲಿದೆ.

ವಿಶಿಷ್ಟತೆ
ಬದಿಯಲ್ಲಿ ಕ್ರೀಡಾತ್ಮಕ ವಿನ್ಯಾಸಕ್ಕೆ ತಕ್ಕ ಎಕ್ಸಾಸ್ಟ್ ಕೊಳವೆ, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ ಸಿಡಿ ಪರದೆ, ಇಂಧನ ಟ್ಯಾಂಕ್, ಅಲಾಯ್ ವೀಲ್ ಮತ್ತು ಎಲ್‌ಇಡಿ ಬೆಳಕಿನ ಸೇವೆಯಿರಲಿದೆ.

ಬೆಲೆ
ಅಂದ ಹಾಗೆ ಕೆಟಿಎಂ ಡ್ಯೂಕ್ 390 ಗಿಂತಲೂ ಕಡಿಮೆ ಬೆಲೆಯಲ್ಲಿ ನೂತನ ಪಲ್ಸರ್ ಸಿಎಸ್400 ಬಿಡುಗಡೆಯಾಗುವ ಸಾಧ್ಯತೆಯಿದ್ದು, ಎರಡು ಲಕ್ಷದೊಳಗಿನ ಬೆಲೆ ಅಂದಾಜಿಸಲಾಗಿದೆ.

ನಿಮ್ಮ ಮಾಹಿತಿಗಾಗಿ ತನ್ನ ನೂತನ ಮಾದರಿಗಳ ಅಭಿವೃದ್ಧಿ ಹಾಗೂ ಹೆಚ್ಚಿನ ಪ್ರಚಾರ ಕಾರ್ಯದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಾಗಿದ 2016 ಆಟೋ ಎಕ್ಸ್ ಪೋದಿಂದ ಬಜಾಜ್ ಆಟೋ ವಾಹನ ಪ್ರದರ್ಶನ ಮೇಳದಿಂದ ದೂರವುಳಿದಿತ್ತು.

ಬಜಾಜ್ 'ವಿ'; ಬೈಕ್ ಪ್ರೇಮಿಗಳು ಅರಿತುಕೊಳ್ಳಬೇಕಾದ 10 ಅಂಶಗಳು!
ಐತಿಹಾಸಿಕ 'ವಿಕ್ರಾಂತ್' ಹಡಗಿನ ಲೋಹದಿಂದ ನೂತನ ಬಜಾಜ್ ಬೈಕ್ ತಯಾರಿ


Click it and Unblock the Notifications








