ಐತಿಹಾಸಿಕ 'ವಿಕ್ರಾಂತ್' ಹಡಗಿನ ಲೋಹದಿಂದ ನೂತನ ಬಜಾಜ್ ಬೈಕ್ ತಯಾರಿ
1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ನಿರ್ಮಾಣಕ ಪಾತ್ರ ವಹಿಸಿರುವ ಭಾರತೀಯ ನೌಕಾಸೇನೆಯ ವಿಮಾನಧಾರಕ ನೌಕೆ 'ವಿಕ್ರಾಂತ್' ಯುದ್ಧ ವಿಮಾನದ ಉಕ್ಕಿನ ಲೋಹದಿಂದ ಅತ್ಯಾಧುನಿಕ ಬೈಕ್ ವೊಂದು ಸಿದ್ಧಗೊಳುತ್ತಿದೆ.
Also Read: ಹೊಸ ಬಜಾಜ್ ಅವೆಂಜರ್ ಕ್ರೂಸರ್ ಬೈಕ್ ಗಳತ್ತ ಕಣ್ಣಾಯಿಸಿ
ದೇಶದ ನಂ.1 ಕ್ರೀಡಾ ಬೈಕ್ ತಯಾರಿಕ ಸಂಸ್ಥೆ ಬಜಾಜ್ ಆಟೋ ವಿಕ್ರಾಂತ್ ಹಡಗಿನ ಉಕ್ಕಿನ ಲೋಹದಿಂದ ನಿರ್ಮಿಸುತ್ತಿರುವ ಹೊಸ ಬೈಕ್‌ಗೆ 'ವಿ' ಎಂಬ ನಾಮಕರಣ ಮಾಡಿದೆ. ಈ ಮೂಲಕ ದೇಶದ ಐತಿಹಾಸಿಕ ಇತಿಹಾಸ ಪರಂಪರೆಯನ್ನು ಉಳಿಸಿಕೊಳ್ಳಲಿದೆ.

ಹಿನ್ನೆಲೆ...
1961ನೇ ಇಸವಿಯಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಂಡಿರುವ ಮೊದಲ ಯುದ್ಧ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್, 1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

36 ವರ್ಷಗಳಷ್ಟು ಕಾಲ ಭಾರತೀಯ ನೌಕಾ ಸೇನೆಯ ಸೇವೆಯಲ್ಲಿದ್ದ ಐಎನ್‌ಎಸ್ ವಿಕ್ರಾಂತ್ 1997ನೇ ಇಸವಿಯಲ್ಲಿ ನಿವೃತ್ತಿ ಹೊಂದಿತ್ತು. ಬಳಿಕ 2012ರ ವರೆಗೂ ಮುಂಬೈನ ವಸ್ತು ಸಂಗ್ರಹಣಾಲಯದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಆದರೆ ದುರದೃಷ್ಟವಶಾತ್ 2014 ಐಎನ್‌ಎಸ್ ವಿಕ್ರಾಂತ್ ಹಡಗನ್ನು ನೆಲಸಮಗೊಳಿಸಿ ಅದರ ಬಿಡಿಭಾಗಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಇಲ್ಲಿಗೆ ಈ ವೀರ ಪರಂಪರೆಯು ಕೊನೆಯಾಗಲಿದೆ ಎಂದೇ ಎಲ್ಲರು ನಂಬಿದ್ದರು.

ಏತನ್ಮಧ್ಯೆ ಜವಾಬ್ದಾರಿಯನ್ನೆಲ್ಲ ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ಬಜಾಜ್ ಐಎನ್‌ಎಸ್ ವಿಕ್ರಾಂತ್ ಗೆ ಮರು ಜೀವ ತುಂಬುವ ಇರಾದೆಯಲ್ಲಿದೆ. ಅಲ್ಲದೆ ಐಎನ್‌ಎಸ್ ವಿಕ್ರಾಂತ್ ಹಡಗಿನ ಲೋಹದಿಂದ ತಯಾರಿಸಲಾಗುತ್ತಿರುವ ಅತಿ ನೂತನ 'ವಿ' ಬೈಕ್ ನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

ಬಜಾಜ್ ನೂತನ 'ವಿ' ಬೈಕ್ ಬಗೆಗಿನ ಹೆಚ್ಚಿನ ಮಾಹಿತಿಗಳು ಸದ್ಯಕ್ಕೆ ಅಲಭ್ಯವಾದರೂ, ಕೆಫೆ ರೇಸರ್ ಶೈಲಿಯ ಈ ಬೈಕ್ ಸದೃಢ ದೇಹಕಾಯವನ್ನು ಪಡೆಯಲಿದೆ ಎಂಬುದಂತೂ ಸ್ಪಷ್ಟ. ಅಲ್ಲದೆ 150 ಸಿಸಿ ಎಂಜಿನ್ ಪಡೆಯುವ ನಿರೀಕ್ಷೆಯೂ ಇದೆ.

ಈ ಸಂಬಂಧ ಆಕರ್ಷಕ ಜಾಹೀರಾತು ವಿಡಿಯೋವನ್ನು ಬಿಡುಗಡೆಗೊಳಿಸಿರುವ ಬಜಾಜ್, ದೇಶದ ಹೀರೊ ಐಎನ್‌ಎಸ್ ವಿಕ್ರಾಂತ್ ಹಡಗಿನ ಪರಂಪರೆಯ ನೂತನ ಬೈಕ್ ಪರಿಚಯವಾಗುತ್ತಿದ್ದು, 2016 ಫೆಬ್ರವರಿ 01ರಂದು ಭರ್ಜರಿ ಅನಾವರಣ ಕಾಣಲಿದೆ ಎಂದಿದೆ.

ಸಮಕಾಲೀನ ಮಾರುಕಟ್ಟೆಯಲ್ಲಿ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಸಾನಿಧ್ಯವನ್ನು ಹೊಂದಿರುವ ಬಜಾಜ್ ಆಟೋ, ಜಾಗತಿಕ ಮಟ್ಟದಲ್ಲಿ ಭಾರತೀಯ ಬ್ರಾಂಡ್ ವೊಂದರ ಪ್ರತಿನಿಧಿಯಾಗಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ.

ಮಗದೊಂದು ಪಲ್ಸರ್ ದೇಶದ ರಸ್ತೆ ಪ್ರವೇಶಿಸಲು ಸಿದ್ಧ!


Click it and Unblock the Notifications