ಬಜಾಜ್ ವಿ15 ಬೈಕ್ ಗೆ ಕಿಚ್ಚು ಹಚ್ಚಿದ ಸಾಗರ ನೀಲಿ ಬಣ್ಣ
ಎರಡು ಲಕ್ಷ ಮಾರಾಟ ಮೈಲುಗಲ್ಲನ್ನು ತಲುಪಿರುವ ಅತಿ ನೂತನ ಬಜಾಜ್ ವಿ15 ಬೈಕ್ ಗೆ ಹೂಸತಾದ ಸಾಗರ ನೀಲಿ ಬಣ್ಣದ ಆಯ್ಕೆಯನ್ನು ಸೇರ್ಪಡೆಗೊಳಿಸಲಾಗಿದೆ. ಇದು ಭಾರತ ಪಾಕಿಸ್ತಾನ ಯುದ್ಧದ ಐತಿಹಾಸಿಕ ಐಎನ್ ಎಸ್ ವಿಕ್ರಾಂತ್ ಹಡಗಿನಿಂದ ನಿರ್ಮಾಣಗೊಂಡಿರುವ ಬಜಾಜ್ ವಿ15 ಬೈಕ್ ಮತ್ತಷ್ಟು ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿದೆ.

ಬಿಡುಗಡೆಯಾದ ಮೊದಲ ತಿಂಗಳಲ್ಲೇ ದೇಶದ ಅಗ್ರ 10 ಮಾರಾಟವಾಗುವ ಬೈಕ್ ಗಳ ಸಾಲಲ್ಲಿ ಗುರುತಿಸಿಕೊಂಡಿರುವ ಬಜಾಜ್ ವಿ15, ನಾಲ್ಕು ತಿಂಗಳ ಅವಧಿಯೊಳಗೆ ಒಂದು ಲಕ್ಷ ಮಾರಾಟ ಮೈಲುಗಲ್ಲನ್ನು ತಲುಪಿತ್ತು.

ಈ ನಡುವೆ ಹೀರೊಯಿಕ್ ರೆಡ್ ಬಣ್ಣದಲ್ಲೂ ಅಪ್ ಡೇಟ್ ಮಾಡಲಾಗಿತ್ತು. ಈಗ ಎಂಟು ತಿಂಗಳ ಅವಧಿಯಲ್ಲಿ ಎರಡು ಲಕ್ಷ ಮಾರಾಟವನ್ನು ತಲುಪಿರುವಂತೆಯೇ ಸಾಗರ ನೀಲಿ ಬಣ್ಣದ ಆಯ್ಕೆಯನ್ನು ಕೊಡಲಾಗಿದೆ.

ಇದರೊಂದಿಗೆ ಬಜಾಜ್ ವಿ ಬಣ್ಣಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅವುಗಳೆಂದರೆ,
ಎಬೋನಿ ಬ್ಲ್ಯಾಕ್,
ಪಿಯರ್ಲ್ ವೈಟ್,
ಹೀರೊಯಿಕ್ ರೆಡ್ ಮತ್ತು
ನ್ಯೂ ಓಷಿಯನ್ ಬ್ಲೂ.

149.5 ಸಿಸಿ ಡಿಟಿಎಸ್-ಐ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಬಜಾಜ್ ವಿ15, 13 ಎನ್ ಎಂ ತಿರುಗುಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಐದು ಸ್ಪೀಡ್ ಗೇರ್ ಬಾಕ್ಸ್ ಪಡೆದಿದೆ.

36 ವರ್ಷಗಳ ಸೇವೆಯ ಬಳಿಕ ನಿವೃತ್ತಿ ಹೊಂದಿದ ಐಎನ್ ಎನ್ ವಿಕ್ರಾಂತ್ ಲೋಹವನ್ನು ಬಳಸಿಕೊಂಡು ಬಜಾಜ್ ವಿ15 ಬೈಕನ್ನು ನಿರ್ಮಿಸಲಾಗಿತ್ತು.

1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಐಎನ್ ಎಸ್ ವಿಕ್ರಾಂತ್ ಹಡಗು ನಿರ್ಣಾಯಕ ಪಾತ್ರ ವಹಿಸಿತ್ತು. ಹಾಗಾಗಿ ಇದೇ ಹಡಗಿನಿಂದ ನಿರ್ಮಿತ ಬೈಕ್ ದೇಶ ನಿವಾಸಿಗಳಿಗೆ ಹೆಮ್ಮೆ ಪಟ್ಟುಕೊಳ್ಳುವಂತಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಕರ್ನಾಟಕ)
63,094 ರು.

ಸಸ್ಪೆನ್ಷನ್
ಫ್ರಂಟ್: ಟೆಲಿಸ್ಕಾಪಿಕ್,
ರಿಯರ್: ಟ್ವಿನ್ ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ವಿಧ

ಇಂಧನ ಟ್ಯಾಂಕ್
ಲೀಟರ್: 13
ರಿಸರ್ವ್: 1.7

ಆಯಾಮ (ಎಂಎಂ)
ಉದ್ದ: 2044
ಅಗಲ: 780
ಎತ್ತರ: 1070
ಗ್ರೌಂಡ್ ಕ್ಲಿಯರನ್ಸ್: 165
ಚಕ್ರಾಂತರ: 1315
ಭಾರ: 135.5 ಕೆ.ಜಿ
ಸೀಟು ಎತ್ತರ: 780

ವಿಶಿಷ್ಟತೆಗಳು
ಎತ್ತರದ ಸಾನಿಧ್ಯ,
13 ಲೀಟರ್ ಇಂಧನ ಟ್ಯಾಂಕ್,
ಸ್ಪೋರ್ಟಿ ಗ್ರಾಫಿಕ್ಸ್ ,
ಕೆಫೆ ರೇಸರ್ ಸ್ಪೂರ್ತಿ,
60ವಾಟ್ ಹೆಡ್ ಲ್ಯಾಂಪ್ ಹಾಗೂ ಎಲ್‌ಇಡಿ ಹೆಡ್ ಲ್ಯಾಂಪ್,
ಟ್ವಿನ್ ಸ್ಪೋಕ್ ಅಲಾಯ್ ವೀಲ್,
ಎಲ್‌ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್

ಬ್ರೇಕ್
ಮುಂಭಾಗ: 240 ಡಿಸ್ಕ್
ಹಿಂಭಾಗ: 130 ಡ್ರಮ್


Click it and Unblock the Notifications








