ಬಜಾಜ್ ವಿ15 ಬೆನ್ನಲ್ಲೇ ಬರುತ್ತಿದೆ ಹೆಚ್ಚು ಶಕ್ತಿಶಾಲಿ ವಿ20, ವಿ40 ಬೈಕ್ಸ್

By Nagaraja

ಬಜಾಜ್ ವಿ15 ಯಶಸ್ಸಿನ ಬೆನ್ನಲ್ಲೇ ವಿ ಶ್ರೇಣಿಯ ಮತ್ತಷ್ಟು ಬೈಕ್ ಗಳನ್ನು ಬಿಡುಗಡೆ ಮಾಡುವ ಇರಾದೆಯನ್ನು ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಬಜಾಜ್ ಆಟೋ ವ್ಯಕ್ತಪಡಿಸಿದೆ. ಬಲ್ಲ ಮೂಲಗಳ ಪ್ರಕಾರ ನಿಕಟ ಭವಿಷ್ಯದಲ್ಲೇ ವಿ ಶ್ರೇಣಿಯಲ್ಲಿ ನೂತನ ಬಜಾಜ್ ವಿ20 ಹಾಗೂ ವಿ40 ಬೈಕ್ ಗಳು ಬಿಡುಗಡೆಯಾಗಲಿದೆ.

ಇತಿಹಾಸದ ಭಾಗವಾಗಿರುವ ಐಎನ್‌ಎಸ್ ವಿಕ್ರಾಂತ್ ಹಡಗಿನ ಲೋಹದಿಂದ ನಿರ್ಮಿಸಲಾಗಿರುವ ಬಜಾಜ್ ವಿ15 ಮಾರುಕಟ್ಟೆಯಲ್ಲಿ ಗಮನಾರ್ಹ ಮಾರಾಟವನ್ನು ಕಾಪಾಡಿಕೊಂಡಿದೆ. ಮುಂದಿನ ಒಂದೆರಡು ವರ್ಷದೊಳಗೆ ಇದೇ ಶ್ರೇಣಿಯಲ್ಲಿ ಮತ್ತಷ್ಟು ಆಕರ್ಷಕ ಬೈಕ್ ಗಳನ್ನು ಬಿಡುಗಡೆ ಮಾಡುವುದು ಸಂಸ್ಥೆಯ ಗುರಿಯಾಗಿದೆ.

ಬಜಾಜ್ ವಿ15 ಬೆನ್ನಲ್ಲೇ ಬರುತ್ತಿದೆ ಹೆಚ್ಚು ಶಕ್ತಿಶಾಲಿ ವಿ20, ವಿ40 ಬೈಕ್ಸ್

ಮಾರ್ಚ್ ತಿಂಗಳಾಂತ್ಯದ ವೇಳೆಯಲ್ಲಿ ಬಜಾಜ್ ವಿ15 ಮಾರುಕಟ್ಟೆ ಪ್ರವೇಶ ಪಡೆದಿತ್ತು. ಈಗ ಮುಂಬರುವ ಸೆಪ್ಟೆಂಬ್ ತಿಂಗಳಲ್ಲಿ ವಿ20 ಮತ್ತು 2017ನೇ ಸಾಲಿನ ಮಾರ್ಚ್ ವೇಳೆಯಾಗುವಾಗ ವಿ40 ಬೈಕ್ ಗಳು ಬಿಡುಗಡೆಯಾಗಲಿದೆ.

ಬಜಾಜ್ ವಿ15 ಬೆನ್ನಲ್ಲೇ ಬರುತ್ತಿದೆ ಹೆಚ್ಚು ಶಕ್ತಿಶಾಲಿ ವಿ20, ವಿ40 ಬೈಕ್ಸ್

ಇಲ್ಲಿ ವಿ20 ಮತ್ತು ವಿ40 ಎಂಬುದು 200 ಸಿಸಿ ಮತ್ತು 400 ಸಿಸಿ ಎಂಜಿನ್ ಸಾಮರ್ಥ್ಯದ ಸಂಕ್ಷಿಪ್ತ ರೂಪವಾಗಿದೆ. ಅಂದರೆ ಕ್ರೀಡಾ ಸ್ನೇಹಿ ಗ್ರಾಹಕರನ್ನು ಹೆಚ್ಚು ಗುರಿ ಮಾಡಲಿದೆ.

ಬಜಾಜ್ ವಿ15 ಬೆನ್ನಲ್ಲೇ ಬರುತ್ತಿದೆ ಹೆಚ್ಚು ಶಕ್ತಿಶಾಲಿ ವಿ20, ವಿ40 ಬೈಕ್ಸ್

ಪ್ರಯಾಣಿಕ ಬೈಕ್ ಮಾರುಕಟ್ಟೆಯಲ್ಲೂ ಹೆಚ್ಚೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವುದು ಸಂಸ್ಥೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ 62,000 ರು.ಗಳ ಎಕ್ಸ್ ಶೋ ರೂಂ ಬೆಲೆಗಳಲ್ಲಿ ಬಿಡುಗಡೆಯಾಗಿರುವ ವಿ15 ಅತ್ಯುತ್ತಮ ಆಯ್ಕೆಯಾಗಿರಲಿದೆ.

ಬಜಾಜ್ ವಿ15 ಬೆನ್ನಲ್ಲೇ ಬರುತ್ತಿದೆ ಹೆಚ್ಚು ಶಕ್ತಿಶಾಲಿ ವಿ20, ವಿ40 ಬೈಕ್ಸ್

1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವನ್ನು ಒದಗಿಸಿಕೊಡುವಲ್ಲಿ ಐಎನ್‌ಎಸ್ ವಿಕ್ರಾಂತ್ ನಿರ್ಣಾಯಕ ಪಾತ್ರ ವಹಿಸಿತ್ತು. ಈಗ ಇದೇ ಹಡಗಿನ ಲೋಹದಿಂದ ವಿ ಬೈಕನ್ನು ನಿರ್ಮಿಸಲಾಗಿದೆ.

ಬಜಾಜ್ ವಿ15 ಬೆನ್ನಲ್ಲೇ ಬರುತ್ತಿದೆ ಹೆಚ್ಚು ಶಕ್ತಿಶಾಲಿ ವಿ20, ವಿ40 ಬೈಕ್ಸ್

150 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ವಿ15, 13 ಎನ್ ಎಂ ತಿರುಗುಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬಜಾಜ್ ವಿ15 ಬೆನ್ನಲ್ಲೇ ಬರುತ್ತಿದೆ ಹೆಚ್ಚು ಶಕ್ತಿಶಾಲಿ ವಿ20, ವಿ40 ಬೈಕ್ಸ್

200 ಮತ್ತು 400 ಸಿಸಿ ವಿಭಾಗದಲ್ಲಿ ನೂತನ ಎಂಜಿನ್ ಗಳನ್ನು ಅಭಿವೃದ್ಧಿಪಡಿಸಿರುವುದರಿಂದ 'ವಿ' ತಳಹದಿಯಲ್ಲಿ ನಿರ್ಮಾಣವಾಗಲಿರುವ ನೂತನ ಬೈಕ್ ಗಳ ನಿರ್ಮಾಣ ವೆಚ್ಚವು ಇಳಿಕೆಯಾಗಲಿದೆ. ಇದು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ಸಹಕಾರಿಯಾಗಲಿದೆ.

Article Published On: Friday, July 15, 2016, 12:39 [IST]
English summary
Could There Soon Be A Bajaj V20 And A V40? Product Launch Confirmed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+