ಹೆಲ್ಮೆಟ್ ಕಡ್ಡಾಯ; ತಲೆ ಸೇಫ್ ಆದರೆ ರಸ್ತೆ..?

By Nagaraja

ಬೆಂಗಳೂರಿನಲ್ಲಿ ಬೈಕ್ ಹಿಂಬದಿ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕೆಂಬ ನಿಯಮ ಹಲವಾರು ಗೊಂದಲವನ್ನುಂಟು ಮಾಡಿರುವ ನಡುವೆಯೂ ಯಾತ್ರಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ನಿಲುವಿನಲ್ಲಿ ಬದ್ಧವಾಗಿರುವ ರಾಜ್ಯ ಸರಕಾರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ನಿರ್ಧರಿಸಿದೆ.

ಇದರೊಂದಿಗೆ ದ್ವಿಚಕ್ರ ಸವಾರಿ ವೇಳೆ ಹಿಂಬದಿ ಪ್ರಯಾಣಿಕರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕಾಗುತ್ತದೆ. ಹಾಗೊಂದು ವೇಳೆ ನಿಯಮ ಉಲ್ಲಂಘನೆ ಪತ್ತೆಯಾದ್ದಲ್ಲಿ ಪ್ರಾಥಮಿಕವಾಗಿ 100 ರುಪಾಯಿಗಳ ದಂಡ ಕಟ್ಟಬೇಕಾಗುತ್ತದೆ. ಇನ್ನು ಮೂರನೇ ಬಾರಿಯೂ ನಿಯಮ ಉಲ್ಲಂಘನೆಯಾದ್ದಲ್ಲಿ ನಿಮ್ಮ ಚಾಲನಾ ಪರವಾನಗಿ ರದ್ದಾಗುವ ಭೀತಿ ಎದುರಾಗಲಿದೆ.

ಹೆಲ್ಮೆಟ್ ಕಡ್ಡಾಯ; ತಲೆ ಸೇಫ್ ಆದರೆ ರಸ್ತೆ..?

ನಗರದಲ್ಲಿ ಹಿಂಬದಿ ಸವಾರರು ಹೆಲ್ಮೆಟ್ ಕಡ್ಡಾಯ ಬಗ್ಗೆ ಓದುಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಲ್ಲಿ ನಿಯಮ ಜಾರಿ ಮಾಡುವುದನ್ನು ಸ್ವಾಗತಿಸುವ ಬದಲು ಕಟುವಾದ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಸಂಬಂಧ ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕೃತ ಪುಟದಲ್ಲಿ ಫೇಸ್ ಬುಕ್ ಮಿತ್ರರ ಕೆಲವು ಕಾಮೆಂಟ್ ಗಳನ್ನು ನಾವಿಲ್ಲಿ ಉಲ್ಲೇಖಿಸಲಿದ್ದೇವೆ.

ಗುಣಮಟ್ಟದ ರಸ್ತೆ ಎಲ್ಲಿ ?

ಗುಣಮಟ್ಟದ ರಸ್ತೆ ಎಲ್ಲಿ ?

ಬೈಕ್ ಹಿಂಬದಿ ಸವಾರರಿಗೂ ಹೆಲ್ಮೆಟ್ ನಿಯಮವನ್ನು ಕಡ್ಡಾಯಗೊಳಿಸುವ ಮೊದಲು ಸರಕಾರವು ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರಕಾರಕ್ಕೆ ದಂಡ?

ಸರಕಾರಕ್ಕೆ ದಂಡ?

ಯಾವ ರೀತಿ ಹೆಲ್ಮೆಟ್ ಧರಿಸದ ಹೊರತಾಗಿ ಟ್ರಾಫಿಕ್ ಪೊಲೀಸರು ಸವಾರರ ಮೇಲೆ ದಂಡ ವಿಧಿಸಲಿದ್ದಾರೆಯೋ ಅದೇ ರೀತಿ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದ ಸರಕಾರಕ್ಕೂ ದಂಡವಾಗಲಿ ಎಂದು ವಿನಂತಿಸಿಕೊಂಡಿದ್ದಾರೆ.

100 ರು.ಗಳಿಗೆ ಹೆಲ್ಮೆಟ್

100 ರು.ಗಳಿಗೆ ಹೆಲ್ಮೆಟ್

ಮಗದೊರ್ವ ಸವಾರ ನಿಯಮ ಜಾರಿಯಾಗುವುದರ ವಿರುದ್ಧ ಯಾವುದೇ ಅಕ್ಷೇಪವನ್ನು ಎತ್ತಿಲ್ಲ. ಬದಲಾಗಿ ಐಎಸ್‌ಐ ಮಾನ್ಯತೆ ಪಡೆದ ಹೆಲ್ಮೆಟ್ ಗಳನ್ನು ಸರಕಾರ ಕನಿಷ್ಠ 100 ರುಪಾಯಿಗಳಿಗೆ ಒದಗಿಸಲಿ ಎಂದು ಬೇಡಿಕೆ ಮುಂದಿಟ್ಟಿದ್ದಾರೆ.

ಪೊಲೀಸರಿಗೊಂದು ನಿಯಮವೇ?

ಪೊಲೀಸರಿಗೊಂದು ನಿಯಮವೇ?

ನಿಯಮದ ಮುಂದೆ ಎಲ್ಲರೂ ಸಮಾನರು. ಹಾಗಿದ್ದರೆ ಪೊಲೀಸರಿಗೆ ಒಂದು ನೀತಿ ಜನ ಸಾಮನ್ಯರಿಗೆ ಇನ್ನೊಂದು ನೀತಿ ಇದ್ಯಾವ ನ್ಯಾಯ?

ಅಗತ್ಯವಾದರೂ ಏನು?

ಅಗತ್ಯವಾದರೂ ಏನು?

ಸದಾ ವಾಹನ ದಟ್ಟಣೆಯಿಂದ ಸಾಕಪ್ಪಾ ಸಾಕು ಎನ್ನುವ ಪರಿಸ್ಥಿತಿಯಲ್ಲಿ 20 ಕೀ.ಮೀ. ವೇಗದಲ್ಲಿ ಚಲಿಸುವುದೇ ದೊಡ್ಡ ವಿಚಾರ. ಹಾಗಿರುವಾಗ ಈ ಹೆಲ್ಮೆಟ್ ಅಗತ್ಯವಾದರೂ ಎಲ್ಲಿಂದ ಬಂತು ?

ಹೆಲ್ಮೆಟ್ ಸಾಗಿಸುವುದೇ ದೊಡ್ಡ ತಲೆನೋವು

ಹೆಲ್ಮೆಟ್ ಸಾಗಿಸುವುದೇ ದೊಡ್ಡ ತಲೆನೋವು

ನಿಯಮ ಜಾರಿಯಾಗುತ್ತಿರುವುದು ಎಲ್ಲ ಓಕೆ. ಆದರೆ ಹೆಲ್ಮೆಟ್ ಸಾಗಿಸುವುದಾದರೂ ಹೇಗೆ? ಇದಕ್ಕೂ ನಿಯಮ ಪಾಲಕರು ಒಂಚೂರು ಉಪಾಯ ಹೆಳ್ತೀರಾ ಸ್ವಾಮಿ?

ಕಾರಲ್ಲಿ ಸಂಚರಿಸುವುದೇ ಬೆಸ್ಟ್?

ಕಾರಲ್ಲಿ ಸಂಚರಿಸುವುದೇ ಬೆಸ್ಟ್?

ಬೆಂಗ್ಳೂರಿನಲ್ಲಿ ಬಹುತೇಕ ಮಂದಿಯಲ್ಲಿ ಕಾರು, ಬೈಕ್ ಎರಡೂ ಇವೆ. ಈಗ ಹೊಸ ನಿಯಮ ಜಾರಿಯಾಗುವುದರೊಂದಿಗೆ ಎಲ್ಲರೂ ಕಾರಲ್ಲೇ ಸಂಚಾರ ಆರಂಭಿಸಲಿದ್ದು, ಸಂಚಾರ ದಟ್ಟಣೆ ಮತ್ತಷ್ಟು ದುಸ್ತರವಾಗಲಿದೆ.

ಸರಕಾರದ ಬೊಕ್ಕಸಕ್ಕೆ ದುಡ್ಡು?

ಸರಕಾರದ ಬೊಕ್ಕಸಕ್ಕೆ ದುಡ್ಡು?

ಸರಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ದುಡ್ಡು ಸಂಗ್ರಹವಾಗಲಿದ್ದು, ಜನ ಸಾಮಾನ್ಯರಿಗೆ ದೊಡ್ಡ ಹೊಡೆತವನ್ನೇ ನೀಡುವುದಂತೂ ಗ್ಯಾರಂಟಿ.

ಲಿಫ್ಟ್ ಕೇಳಿದರೆ ಮಾಡುವುದೇನು?

ಲಿಫ್ಟ್ ಕೇಳಿದರೆ ಮಾಡುವುದೇನು?

ಹಾಗೊಂದು ವೇಳೆ ದಾರಿ ಮಧ್ಯೆ ಬಂಧು ಮಿತ್ರರು ಲಿಫ್ಟ್ ಕೇಳಿದರೆ ಏನು ಮಾಡ್ತೀರಾ?

ತಲೆ ಅಂತೂ ಸೇಫ್..

ತಲೆ ಅಂತೂ ಸೇಫ್..

ಒಟ್ಟಾರೆಯಾಗಿ ನೂತನ ನಿಯಮದಿಂದಾಗಿ ಅವಘಡ ಸಂಭವಿಸಿದ್ದಲ್ಲಿ ತಲೆ ಅಂತೂ ಸೇಫ್ ಎಂದು ಇನ್ನು ಕೆಲವು ಸವಾರರು ನಿರಾಳತೆ ವ್ಯಕ್ತಪಡಿಸುತ್ತಿದ್ದಾರೆ. ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ವ್ಯಕ್ತಪಡಿಸಿರಿ.

More from DriveSpark

Article Published On: Tuesday, January 19, 2016, 17:44 [IST]
English summary
Bengaluru: Pillion Rider Wearing Helmet is mandatory now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+