ಪರಿಸರ ಸ್ನೇಹಿ ಹೀರೊ ಎನ್‌ವೈಎಕ್ಸ್ ವಿದ್ಯುತ್ ಚಾಲಿತ ಸ್ಕೂಟರ್ ಎಂಟ್ರಿ

By Nagaraja

ಹೀರೊ ಮೊಟೊಕಾರ್ಪ್ ಭಾಗವಾಗಿರುವ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಎಲೆಕ್ಟ್ರಿಕ್, ಅತಿ ನೂತನ ಎನ್‌ವೈಎಕ್ಸ್ ವಿದ್ಯುತ್ ಚಾಲಿತ ಸ್ಕೂಟರನ್ನು ಬಿಡುಗಡೆಗೊಳಿಸಿದೆ. ಬೆಂಗಳೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ಹೀರೊ ಎನ್‌ವೈಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಾಗಲಿದೆ.

ವಾಣಿಜ್ಯ ವೆಬ್ ಸೈಟ್ ಆಗಿರುವ ಪೇಟಿಎಂ ಜೊತೆಗೂ ಕೈಜೋಡಿಸಿಕೊಂಡಿರುವ ಹೀರೊ ಎಲೆಕ್ಟ್ರಿಕ್, ಆನ್ಲೈನ್ ಮೂಖಾಂತರವೂ ಸ್ಕೂಟರನ್ನು ಮಾರಾಟ ಮಾಡಲಿದೆ.

ಪರಿಸರ ಸ್ನೇಹಿ ಹೀರೊ ಎನ್‌ವೈಎಕ್ಸ್ ವಿದ್ಯುತ್ ಚಾಲಿತ ಸ್ಕೂಟರ್ ಎಂಟ್ರಿ

ಪೇಟಿಎಂನಲ್ಲಿ ಹೀರೊ ಎನ್‌ವೈಎಕ್ಸ್ ಬೆಂಗಳೂರು ಆನ್ ರೋಡ್ ಬೆಲೆ 33,390 ರು.ಗಳು ಮಾತ್ರವಾಗಿದೆ. ಇದಲ್ಲದೆ ವಿಶೇಷ ಪ್ರೊಮೊ ಕೋಡ್ ಲಗತ್ತಿಸುವ ಅವಕಾಶವಿದ್ದು, ಗರಿಷ್ಠ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಪರಿಸರ ಸ್ನೇಹಿ ಹೀರೊ ಎನ್‌ವೈಎಕ್ಸ್ ವಿದ್ಯುತ್ ಚಾಲಿತ ಸ್ಕೂಟರ್ ಎಂಟ್ರಿ

ಸೀಮಿತ ಅವಧಿಯ ವರೆಗೆ ಮಾತ್ರ ಆಫರ್ ಲಭ್ಯವಾಗಿದ್ದು, 0.1 ಗ್ರಾಂಗಳಷ್ಟು ಎರಡು ಚಿನ್ನದ ನಾಣ್ಯ ಗೆಲ್ಲುವ ಅವಕಾಶವೂ ಇದೆ. ಇದರ ಜೊತೆಗೆ ಒಂದು ವರ್ಷಗಳ ರೋಡ್ ಸೈಡ್ ನೆರವು ಸಹ ದೊರಕಲಿದೆ.

ಪರಿಸರ ಸ್ನೇಹಿ ಹೀರೊ ಎನ್‌ವೈಎಕ್ಸ್ ವಿದ್ಯುತ್ ಚಾಲಿತ ಸ್ಕೂಟರ್ ಎಂಟ್ರಿ

ಆಕರ್ಷಕ ಇಎಂಐಗಳಲ್ಲಿ ಲಭ್ಯವಿರುವ ಹೀರೊ ಎಲೆಕ್ಟ್ರಿಕ್ ಎನ್‌ವೈಎಕ್ಸ್ ಗೆ ಎರಡು ವರ್ಷಗಳ ವಾರಂಟಿ ಸೌಲಭ್ಯವೂ ದೊರಕಲಿದೆ.

ಪರಿಸರ ಸ್ನೇಹಿ ಹೀರೊ ಎನ್‌ವೈಎಕ್ಸ್ ವಿದ್ಯುತ್ ಚಾಲಿತ ಸ್ಕೂಟರ್ ಎಂಟ್ರಿ

ಇದರಲ್ಲಿರುವ 250 ವಾಟ್ ಮೋಟಾರ್ 70 ಕೀ.ಮೀ. ವರೆಗೆ ಚಲಿಸಲು ನೆರವಾಗಲಿದೆ. ಅಲ್ಲದೆ ಸಂಪೂರ್ಣ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದ್ದು, ಗಂಟೆಗೆ ಗರಿಷ್ಠ 25 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಪರಿಸರ ಸ್ನೇಹಿ ಹೀರೊ ಎನ್‌ವೈಎಕ್ಸ್ ವಿದ್ಯುತ್ ಚಾಲಿತ ಸ್ಕೂಟರ್ ಎಂಟ್ರಿ

ಬಿಳಿ ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿರುವ ಹೀರೊ ಎನ್‌ವೈಎಕ್ಸ್ ಬುಕ್ ಮಾಡಿದ 20 ದಿನಗಳೊಳಗೆ ನಿಮ್ಮ ಕೈಗೆ ಬಂದು ಸೇರಲಿದೆ.

More from DriveSpark

Article Published On: Saturday, June 4, 2016, 15:56 [IST]
English summary
Hero Electric Launches NYX Scooter On Paytm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+