ಮತ್ತೆ ಮೋಡಿ ಮಾಡಲಿರುವ ಕರಿಜ್ಮಾ ಭರ್ಜರಿ ರಿ ಎಂಟ್ರಿಗೆ ರೆಡಿ

By Nagaraja

ನಿಮ್ಮ ನೆಚ್ಚಿನ ಹೀರೊ ಕರಿಜ್ಮಾ ಯುಗಾಂತ್ಯ ಕಾಣುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಹೀರೊ ಕರಿಜ್ಮಾ ಹಿನ್ನಡೆ ಅನುಭವಿಸಿರಬಹದು. ಆದರೆ ನಿಸ್ಸಂಶವಾಗಿಯೂ ಭರ್ಜರಿ ರಿ ಎಂಟ್ರಿ ಕೊಡುವುದು ಖಚಿತವೆನಿಸಿದೆ.

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಆಗಿರುವ ಹೀರೊ ಮೊಟೊಕಾರ್ಪ್ ಹೊಸ ತಲೆಮಾರಿನ ಕರಿಜ್ಮಾ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ತನ್ಮೂಲಕ ತನ್ನ ಕರಿಜ್ಮಾ ಪ್ರೇಮಿಗಳನ್ನು ನಿರಾಸೆಗೊಳಪಡಿಸುವುದಿಲ್ಲ ಎಂಬುದನ್ನು ಖಚಿತಪಡಿಸಿದೆ.

ಮತ್ತೆ ಮೋಡಿ ಮಾಡಲಿರುವ ಕರಿಜ್ಮಾ ಭರ್ಜರಿ ರಿ ಎಂಟ್ರಿಗೆ ರೆಡಿ

ಅಚೀವರ್ 150 ಬಿಡುಗಡೆ ವೇಳೆಯಲ್ಲಿ ಹೀರೊ ಇದನ್ನು ಖಚಪಡಿಸಿದೆ. ಕ್ರೀಡಾ ಬೈಕ್ ಪ್ರೇಮಿಗಳಿಗಂತೂ ಕರಿಜ್ಮಾ ಮರು ಪ್ರವೇಶ ಸುದ್ದಿಯು ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಮತ್ತೆ ಮೋಡಿ ಮಾಡಲಿರುವ ಕರಿಜ್ಮಾ ಭರ್ಜರಿ ರಿ ಎಂಟ್ರಿಗೆ ರೆಡಿ

ನಿಕಟ ಭವಿಷ್ಯದಲ್ಲೇ ಕರಿಜ್ಮಾ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ. ಎಲ್ಲ ನೂತನ ತಳಹದಿಯಲ್ಲಿ ನಿರ್ಮಾಣಗೊಳ್ಳಲಿದೆಯೇ ಎಂಬುದು ಕುತೂಹಲವೆನಿಸಿದೆ.

ಮತ್ತೆ ಮೋಡಿ ಮಾಡಲಿರುವ ಕರಿಜ್ಮಾ ಭರ್ಜರಿ ರಿ ಎಂಟ್ರಿಗೆ ರೆಡಿ

ಇದಕ್ಕೂ ಮೊದಲು ಪ್ರಸಕ್ತ ಸಾಲಿನಲ್ಲಿ 15 ಪರಿಷ್ಕೃತ ಹಾಗೂ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಹೀರೊ ಘೋಷಿಸಿತ್ತು. ಕರಿಜ್ಮಾ ಕೂಡಾ ಈ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆಯಿದೆ. ಅಂದರೆ ಇದೇ ವರ್ಷದಲ್ಲಿ ಬಿಡುಗಡೆಯಾಗಲಿದೆ.

ಮತ್ತೆ ಮೋಡಿ ಮಾಡಲಿರುವ ಕರಿಜ್ಮಾ ಭರ್ಜರಿ ರಿ ಎಂಟ್ರಿಗೆ ರೆಡಿ

2003ನೇ ಸಾಲಿನಲ್ಲಿ ಪರಿಚಯವಾಗಿರುವ ಹೀರೊ ಕರಿಜ್ಮಾ 220 ಸಿಸಿ ಬೈಕ್ ಯುವ ಗ್ರಾಹಕರನ್ನು ಅತಿ ಹೆಚ್ಚು ಆಕರ್ಷಿಸಿತ್ತು. ಈ ಪೈಕಿ ಕರಿಜ್ಮಾ ಝಡ್ ಎಂಆರ್ ಹಾಗೂ ಸ್ಟ್ಯಾಂಡರ್ಡ್ ಕರಿಜ್ಮಾ ಈಗ ಮಾರಾಟದಲ್ಲಿದೆ.

ಮತ್ತೆ ಮೋಡಿ ಮಾಡಲಿರುವ ಕರಿಜ್ಮಾ ಭರ್ಜರಿ ರಿ ಎಂಟ್ರಿಗೆ ರೆಡಿ

ಈಗ ಮಾರಾಟದಲ್ಲಿರುವ ಕರಿಜ್ಮಾದಲ್ಲಿರುವ 223 ಸಿಸಿ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್, ಐದು ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಮತ್ತೆ ಮೋಡಿ ಮಾಡಲಿರುವ ಕರಿಜ್ಮಾ ಭರ್ಜರಿ ರಿ ಎಂಟ್ರಿಗೆ ರೆಡಿ

ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಜೊತೆ ಹಿಂದುಗಡೆ ಟ್ವಿನ್ ಸ್ಪ್ರಿಂಗ್ ಶಾಕ್ ಅಬ್ಸಾರ್ಬರ್ ಜೋಡಣೆ ಮಾಡಲಾಗಿದೆ.

More from DriveSpark

Article Published On: Sunday, October 2, 2016, 10:02 [IST]
English summary
Hero Will Revamp The Karizma Brand
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+