ಹೀರೊದಿಂದ 3 ನಿರ್ವಹಣಾ ಬೈಕ್ ಗಳು ಭಾರತಕ್ಕೆ
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಮೂರು ನಿರ್ವಹಣಾ ಬೈಕ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಎಲ್ಲ ಮಾದರಿಗಳು 2016ನೇ ಸಾಲಿನಲ್ಲೇ ರಸ್ತೆ ಪ್ರವೇಶಿಸಲಿದೆ ಎಂಬುದು ಗಮನಾರ್ಹ.
ಹಾಗಿದ್ದರೂ ಈ ಬಗ್ಗೆ ಹೀರೊ ಸಂಸ್ಥೆಯಿಂದ ಅಧಿಕೃತ ವರದಿಗಳು ಬಂದಿಲ್ಲ. ಅಲ್ಲದೆ ವಾಹನೋದ್ಯಮವು 2016 ಆಟೋ ಎಕ್ಸ್ ಪೋದಲ್ಲಿ ಪ್ರಕಟಣೆಯ ನಿರೀಕ್ಷೆಯಲ್ಲಿದೆ.

ನಿಮ್ಮ ಮಾಹಿತಿಗಾಗಿ, ಎರಡು ವರ್ಷಗಳ ಹಿಂದೆ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಹೀರೊ ಸಂಸ್ಥೆಯು ಎಚ್‌ಎಕ್ಸ್250ಆರ್ ಮತ್ತು ಹಸ್ಟೂರ್ ಮಾದರಿಗಳನ್ನು ಪ್ರದರ್ಶನಕ್ಕಿರಿಸಿತ್ತು. ಇದಕ್ಕೆ ಅಮೆರಿಕದ ಎರಿಕ್ ಬ್ಯುಯೆಲ್ ರೇಸಿಂಗ್ ಸಂಸ್ಥೆಯು ತಾಂತ್ರಿಕ ನೆರವನ್ನು ಒದಗಿಸಿತ್ತು.
ದುರದೃಷ್ಟವಶಾತ್ ಎರಿಕ್ ಬ್ಯುಯೆಲ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಬಿಡುಗಡೆ ವಿಳಂಬವಾಗಿತ್ತು. ಪ್ರಸ್ತುತ 2016 ಆಟೋ ಎಕ್ಸ್ ಪೋದಲ್ಲೂ ಈ ಮಾದರಿಗಳು ಮೋಡಿ ಮಾಡುವ ಸಾಧ್ಯತೆಯಿದೆ.
ಜೈಪುರದಲ್ಲಿ ಸಂಶೋಧನಾ ಹಾಗೂ ಅಧ್ಯಯನ ಘಟಕ ತೆರೆಯಲಿರುವ ಹೀರೊ ಈ ಯೋಜನೆಗಾಗಿ ಬರೋಬ್ಬರಿ 450 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ.


Click it and Unblock the Notifications








