ಸುಜುಕಿ ಜಿಎಸ್ಎಕ್ಸ್-ಆರ್ 125 ಬೈಕ್ ಅಬ್ಬರ; ದೇಶಕ್ಕೆ ಯಾವಾಗ ಬರುತ್ತೆ?
ಜರ್ಮನಿಯ ಕೊಲೊಗ್ನೆಯಲ್ಲಿ ಸಾಗುತ್ತಿರುವ 2016 ಇಂಟರ್ ಮೊಟ್ ಮೋಟಾರ್ ಸೈಕಲ್ ಶೋದಲ್ಲಿ ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ಸಂಸ್ಥೆ ಸುಜುಕಿ, ಅತಿ ನೂತನ ಜಿಎಸ್ ಎಕ್ಸ್-ಆರ್ 125 ಬೈಕನ್ನು ಅನಾವರಣಗೊಳಿಸಿದೆ. ಇದರೊಂದಿಗೆ ಸುಜುಕಿ ಜಿಎಸ್ಎಕ್ಸ್-ಆರ್ ಕುಟುಂಬಕ್ಕೆ ಹೊಸ ಆತಿಥಿಯ ಪ್ರವೇಶವಾಗಿದ್ದು, ವಾಹನ ಪ್ರೇಮಿಗಳಲ್ಲಿ ಅತೀವ ಕುತೂಹಲ ಮೂಡಿಸುವಲ್ಲಿ ಕಾರಣವಾಗಿದೆ.

ಫುಲ್ ಫೇರ್ಡ್ ಮೋಟಾರ್ ಸೈಕಲ್ ಆಗಿರುವ ಸುಜುಕಿ ಜಿಎಸ್ಎಕ್ಸ್-ಆರ್ 125 ಯುರೋಪ್ ಜೊತೆಗೆ ಬೆಳೆದು ಬರುತ್ತಿರುವ ಏಷ್ಯಾ ಮಾರುಕಟ್ಟೆನಯನ್ನು ಗುರಿಯಾಗಿರಿಸಲಿದೆ.

ಭಾರತದಲ್ಲಿ ಸುಜುಕಿ ಜಿಕ್ಸರ್ ಭಾರಿ ಯಶ ಸಾಧಿಸಿದರೆ ನಿಕಟ ಭವಿಷ್ಯದಲ್ಲಿ ಜಿಎಸ್‌ಎಕ್ಸ್-ಆರ್ 125 ಸಹ ಪ್ರವೇಶ ಪಡೆದರೆ ಅಚ್ಚರಿಪಡಬೇಕಿಲ್ಲ.

ಹಗುರ ಭಾರದ ಮೋಟಾರ್ ಸೈಕಲ್ ವಿಭಾಗದಲ್ಲಿ ಹೊಸ ಕ್ರಾಂತಿ ಎಬ್ಬಿಸಿರುವ ಸುಜುಕಿ, ಐಕಾನಿಕ್ ಜಿಎಸ್ ಎಕ್ಸ್-ಆರ್ 1000 ತಳಹದಿಯಲ್ಲಿ ಜಿಎಸ್‌ಎಕ್ಸ್-ಆರ್ 125 ನಿರ್ಮಿಸಿದೆ.

ವೈಶಿಷ್ಟ್ಯಗಳತ್ತ ಬೆಳಕು ಚೆಲ್ಲುವುದಾದ್ದಲ್ಲಿ ಎಲ್ ಇಡಿ ಹೆಡ್ ಲೈಟ್, ಆ್ಯಂಟಿ ಬ್ರೇಕಿಂಗ್ ಲಾಕ್ ಸಿಸ್ಟಂ ಹಾಗೂ ಕೀಲೆಸ್ ಎಂಟ್ರಿ ಸೇವೆಗಳು ಲಭ್ಯವಾಗಲಿದೆ.

ಅಷ್ಟೇ ಯಾಕೆ ಆಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಎಲ್ ಇಡಿ ಟೈಲ್ ಲ್ಯಾಂಪ್ ಮತ್ತು ಸಾಂಪ್ರದಾಯಿಕ ಎಕ್ಸಾಸ್ಟ್ ಮಫ್ಲರ್ ಗಳು ಇರಲಿದೆ.

'ಆನ್ಸರ್ ಬ್ಯಾಕ್ ಫಂಕ್ಷನ್' ಮಗದೊಂದು ಮೆಚ್ಚುಗೆದಾಯಕ ವಿಶಿಷ್ಟತೆಯಾಗಿದ್ದು, ಒಂದು ಬಟನ್ ಒತ್ತಿದಾಗ ಪಾರ್ಕ್ ಮಾಡಿದ ಬೈಕ್ ನ ಇಂಡಿಕೇಟರ್ ಗಳು ಪ್ರತಿಫಲಿಸಲು ಆರಂಭಿಸಲಿದೆ. ಇದರಿಂದ ಸುಲಭವಾಗಿ ಬೈಕ್ ಗುರುತಿಸಬಹುದಾಗಿದೆ.

ಹಾಗಿದ್ದರೂ ಎಂಜಿನ್ ತಾಂತ್ರಿಕತೆಗಳ ಬಗ್ಗೆ ವಿವರಗಳು ಇನ್ನು ಲಭ್ಯವಾಗಿಲ್ಲ. ಇದು ಸಿಂಗಲ್ ಸಿಲಿಂಡರ್ ಡಿಒಎಚ್ ಸಿ ಮೋಟಾರ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ.

ಮುಂಭಾಗದಲ್ಲಿ ಪೆಡಲ್ ಡಿಸ್ಕ್ ಹಾಗೂ ಎಬಿಎಸ್ ವ್ಯವಸ್ಥೆಯು ಹೆಚ್ಚು ಸುರಕ್ಷತೆಯ ಜೊತೆಗೆ ಗ್ರಿಪ್ ಕಾಪಾಡಿಕೊಳ್ಳಲು ನೆರವಾಗಲಿದೆ.

ಯುರೋಪ್ ಮಾರುಕಟ್ಟೆಯಲ್ಲಿ ಕೆಟಿಎಂ ಆರ್ ಎಸ್ 125 ಮತ್ತು ಯಮಹಾ ವೈಝಡ್ ಎಫ್ ಆರ್ 125 ಮಾದರಿಗಳಿಗೆ ನೂತನ ಸುಜುಕಿ ಜಿಎಸ್ಎಕ್ಸ್-ಆರ್ 125 ಪೈಪೋಟಿಯನ್ನು ಒಡ್ಡಲಿದೆ.

ಭಾರತದಲ್ಲಿ ಜಿಕ್ಸರ್ ಎಸ್ ಎಫ್ ಮಾರಾಟದಲ್ಲಿರುವುದರಿಂದ ಜಿಎಸ್‌ಎಕ್ಸ್-ಆರ್ 125 ಆಗಮನಗವಾಗುವುದೇ ಎಂಬ ಸಂದೇಹ ಮೂಡಿದೆ. ಒಟ್ಟಿನಲ್ಲಿ ನಿರ್ವಹಣಾ ಬೈಕ್ ವಿಭಾಗದಲ್ಲಿ ಸುಜುಕಿಗೆ ಬೇಡಿಕೆ ಹೆಚ್ಚುತ್ತಿರುವುದು ಕಂಡುಬಂದಿದೆ.


Click it and Unblock the Notifications








