ಹ್ಹಾಂ..ಇದೇನಿದು ಕೆಟಿಎಂ 200 ಡ್ಯೂಕ್ ನಿರ್ಮಾಣ ಸ್ಥಗಿತ ?
ಕೆಟಿಎಂ 200 ಡ್ಯೂಕ್ ನಿರ್ಮಾಣವನ್ನು ಸ್ಧಗಿತಗೊಳಿಸಲಾಗಿದ್ದು, ನವೀಕೃತ ಮಾದರಿಗೆ ಹಾದಿ ಬಿಟ್ಟುಕೊಟ್ಟಿದೆ.
ದೇಶದ ಜನಪ್ರಿಯ ಬಜಾಜ್ ಆಟೋ ಮಾಲಿಕತ್ವದಲ್ಲಿರುವ ಆಸ್ಟ್ರಿಯಾ ಮೂಲದ ದ್ವಿಚಕ್ರ ವಾಹನ ಸಂಸ್ಥೆ ಕೆಟಿಎಂ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಕಾಪಾಡಿಕೊಂಡಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಭಾರತದಲ್ಲಿ ತನ್ನ ಶ್ರೇಣಿಯ ಬೈಕ್ ಗಳನ್ನು ಕೆಟಿಎಂ ನವೀಕರಿಸುತ್ತಿದ್ದು, ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ.

ಇದರ ಭಾಗವಾಗಿ ಈಗ ಮಾರಾಟದಲ್ಲಿರುವ ಕೆಟಿಎಂ 200 ಡ್ಯೂಕ್ ಉತ್ಪಾದನೆಯನ್ನು ನಿಲುಗಡೆಗೊಳಿಸಲು ಸಂಸ್ಥೆಯು ನಿರ್ಧರಿಸಿದೆ. ಇದರೊಂದಿಗೆ ಹೊಸ ಉತ್ಪನ್ನ ಅತಿ ಬೇಗನೇ ಮಾರುಕಟ್ಟೆಗೆ ಎಂಟ್ರಿ ಕೊಡುವುದು ಖಚಿತವೆನಿಸಿದೆ.

ಕೆಟಿಎಂ ಸಂಸ್ಥೆಯು ಇತ್ತೀಚೆಗಷ್ಟೇ ನೂತನ 200 ಡ್ಯೂಕ್ ಜೊತೆಗೆ 125 ಡ್ಯೂಕ್, 250 ಡ್ಯೂಕ್ ಹಾಗೂ ಹೆಚ್ಚು ಶಕ್ತಿಶಾಲಿ 390 ಡ್ಯೂಕ್ ಬೈಕ್ ಗಳನ್ನು ಅನಾವರಣಗೊಳಿಸಿತ್ತು.

ಈ ಎಲ್ಲ ಮಾದರಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯನ್ನು 2017ನೇ ಸಾಲಿನಲ್ಲಿ ತಲುಪಲಿದೆ. ಈ ಪೈಕಿ ಕೆಟಿಎಂ 200 ಹಾಗೂ 390 ಮಾದರಿಗಳು ಭಾರತಕ್ಕೂ ಪ್ರವೇಶ ಪಡೆಯುತ್ತಿದೆ.

ಕೆಟಿಎಂ ಇಂಡಿಯಾ ಅಧಿಕೃತ ವೆಬ್ ಸೈಟ್ ನಿಂದಲೂ ನೂತನ 200 ಡ್ಯೂಕ್ ಬೈಕನ್ನು ತೆರವುಗೊಳಿಸಲಾಗಿದೆ. ತನ್ಮೂಲಕ ಹೊಸ ಡ್ಯೂಕ್ 200 ಬೈಕ್ ಬರಮಾಡಿಕೊಳ್ಳಲು ಎಲ್ಲ ರೀತಿಯಲ್ಲಿ ಸಜ್ಜಾಗಿದೆ.

ಪ್ರಸ್ತುತ ಡೀಲರ್ ಶಿಪ್ ಗಳಲ್ಲಿರುವ ಸ್ಟೋಕ್ ಗಳನ್ನು ಮಾರಾಟ ಮಾಡುವ ಪ್ರಯತ್ನ ಮಾಡಲಾಗುವುದು. ಆದರೆ ದುರದೃಷ್ಟವಶಾತ್ ಕಳೆದ ತಿಂಗಳಲ್ಲೇ ಒಂದೇ ಒಂದು 200 ಡ್ಯೂಕ್ ಉತ್ಪನ್ನ ಮಾರಾಟವಾಗಿರಲಿಲ್ಲ.

ಎರಡನೇ ತಲೆಮಾರಿನ ಕೆಟಿಎಂ 200 ಡ್ಯೂಕ್ 2017 ಜನವರಿ ತಿಂಗಳಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ. ತದಾ ಬಳಿಕ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.

ಎಂದಿನಂತೆ ಬಜಾಜ್ ಆಟೋ ಘಟಕದಲ್ಲಿ ಕೆಟಿಎಂ ಡ್ಯೂಕ್ ಬೈಕ್ ಗಳು ನಿರ್ಮಾಣವಾಗಲಿದೆ. ಬಳಿಕ ಇಲ್ಲಿಂದಲೇ ವಿದೇಶಗಳಿಗೆ ರಫ್ತು ಪ್ರಕ್ರಿಯೆ ಆರಂಭವಾಗಲಿದೆ.


Click it and Unblock the Notifications








