ಎಕ್ಸ್ ಕ್ಲೂಸಿವ್; ಬರುತ್ತಿದೆ ಮಹೀಂದ್ರ 155 ಸಿಸಿ ಅಗ್ಗದ ಬೈಕ್

By Nagaraja

ಕಾರು ಮಾತ್ರವಲ್ಲದೆ ದ್ವಿಚಕ್ರ ವಾಹನ ವಿಭಾಗದಲ್ಲೂ ತನ್ನ ಮಾರಾಟ ವಲಯವನ್ನು ವಿಸ್ತರಿಸಿಕೊಂಡಿರುವ ಮಹೀಂದ್ರ, ಸೆಂಚುರೊ ಹಾಗೂ ಮೊಜೊಗಳಂತಹ ಆಕರ್ಷಕ ಬೈಕ್ ಗಳನ್ನು ಬಿಡುಗಡೆಗೊಳಿಸಿತ್ತು. ಸ್ಕೂಟರ್ ವಿಭಾಗದಲ್ಲೂ ಗಮನ ಕೇಂದ್ರಿಕರಿಸಿರುವ ಮಹೀಂದ್ರ ಟು ವೀಲರ್ಸ್ ಗಸ್ಟೊದಂತಹ ಅತ್ಯುತ್ತಮ ಉತ್ಪನ್ನಗಳನ್ನು ನೀಡಿದೆ.

ಈಗ ಮಗದೊಂದು ಮಹೀಂದ್ರ ಬೈಕ್ ತೆರೆಮರೆಯಲ್ಲಿ ಸಜ್ಜಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ಮಹೀಂದ್ರ 155 ಸಿಸಿ ಅಗ್ಗದ ಬೈಕ್ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದು ನಡೆಯುತ್ತಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ನಿರ್ಮಾಣ ಹಂತವನ್ನು ತಲುಪಲಿದೆ. ಇದರ ವಿನ್ಯಾಸ ಹೇಗಿದೆ ? ಇನ್ನಿತ್ತರ ವೈಶಿಷ್ಟ್ಯ ಹಾಗೂ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಡ್ರೈವ್ ಸ್ಪಾರ್ಕ್ ಓದುಗರ ಜೊತೆಗೆ ಇಲ್ಲಿ ಹಂಚಿಕೊಳ್ಳಲಾಗುವುದು.

ಎಕ್ಸ್ ಕ್ಲೂಸಿವ್; ಬರುತ್ತಿದೆ ಮಹೀಂದ್ರ 155 ಸಿಸಿ ಅಗ್ಗದ ಬೈಕ್

ಎಲ್ಲ ಬೈಕ್ ವಿಭಾಗದಲ್ಲೂ ಸಾನಿಧ್ಯ ವ್ಯಕ್ತಪಡಿಸುವುದು ಮಹೀಂದ್ರ ಇರಾದೆಯಾಗಿದೆ. ಸದ್ಯಕ್ಕೆ ಮಹೀಂದ್ರ 155 ಸಿಸಿ ಉಪಯುಕ್ತ ಬೈಕ್ ಪ್ರತ್ಯಕ್ಷಗೊಂಡಿದ್ದು, ಮುಂಬರುವ ದಿನಗಳಲ್ಲಿ ಕ್ರೀಡಾತ್ಮಕ ಹಾಗೂ ಪ್ರಯಾಣಿಕ ಆವೃತ್ತಿಯು ಆಗಮನವಾಗುವ ಸಾಧ್ಯತೆಯಿದೆ.

ಎಕ್ಸ್ ಕ್ಲೂಸಿವ್; ಬರುತ್ತಿದೆ ಮಹೀಂದ್ರ 155 ಸಿಸಿ ಅಗ್ಗದ ಬೈಕ್

ಅತ್ತ 150 ಸಿಸಿ ವಿಭಾಗದ ಬೈಕ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರು ಪ್ರಯಾಣಿಕ ವಿಭಾಗದಿಂದ ನಿಧಾನವಾಗಿ ಹೆಚ್ಚು ಶಕ್ತಿಶಾಲಿ 150 ಕ್ರೀಡಾ ಬೈಕ್ ಗಳತ್ತ ವಾಲುತ್ತಿದ್ದಾರೆ.

ಎಕ್ಸ್ ಕ್ಲೂಸಿವ್; ಬರುತ್ತಿದೆ ಮಹೀಂದ್ರ 155 ಸಿಸಿ ಅಗ್ಗದ ಬೈಕ್

ಸಾಂಪ್ರದಾಯಿಕ ಶೈಲಿಯನ್ನು ಕಾಪಾಡಿಕೊಂಡಿರುವ ಮಹೀಂದ್ರ 155 ಸಿಸಿ ಬೈಕ್ ಸ್ಪೋಕ್ ವೀಲ್ ಗಳನ್ನು ಪಡೆದುಕೊಂಡಿದೆ. ವೃತ್ತಕಾರಾದ ಹೆಡ್ ಲೈಟ್ ಬೈಕ್ ಗೆ ಕ್ಲಾಸಿಕ್ ನೋಟ ನೀಡುತ್ತಿದೆ.

ಎಕ್ಸ್ ಕ್ಲೂಸಿವ್; ಬರುತ್ತಿದೆ ಮಹೀಂದ್ರ 155 ಸಿಸಿ ಅಗ್ಗದ ಬೈಕ್

ಮಹೀಂದ್ರ ಸೆಂಚುರೊದಿಂದ ಸ್ಪೂರ್ತಿ ಪಡೆದ ಇಂಧನ ಟ್ಯಾಂಕ್, ದೊಡ್ಡದಾದ ಸೈಡ್ ಪ್ಯಾನೆಲ್, ಸ್ಟೀಲ್ ಫೂಟ್ ರೆಸ್ಟ್ ಇನ್ನಿತರ ವೈಶಿಷ್ಟ್ಯಗಳಾಗಿದೆ.

ಎಕ್ಸ್ ಕ್ಲೂಸಿವ್; ಬರುತ್ತಿದೆ ಮಹೀಂದ್ರ 155 ಸಿಸಿ ಅಗ್ಗದ ಬೈಕ್

ಇದಕ್ಕೆ ಹೆಚ್ಚು ಉದ್ದಗಲವನ್ನು ಹೊಂದಿರುವ ಸೀಟುಗಳನ್ನು ಜೋಡಿಸಲಾಗಿದೆ. ಇನ್ನು ಹಿಂದುಗಡೆ ಲಗ್ಗೇಜೆ ಕೇರಿಯರ್ ಕೂಡಾ ಲಗತ್ತಿಸಲಾಗಿದೆ.

ಎಕ್ಸ್ ಕ್ಲೂಸಿವ್; ಬರುತ್ತಿದೆ ಮಹೀಂದ್ರ 155 ಸಿಸಿ ಅಗ್ಗದ ಬೈಕ್

ಸಿಂಗಲ್ ಡೌನ್ ಟ್ಯೂಬ್ ಫ್ರೇಮ್ ಚಾಸೀಯನ್ನು ಕಾಣಬಹುದಾಗಿದೆ. ಟೆಲಿಸ್ಕಾಫಿಕ್ ಫ್ರಂಟ್ ಫಾರ್ಕ್ ಹಾಗೂ ರಿಯರ್ ಹೈಡ್ರಾಲಿಕ್ ಶಾಕ್ಸ್ ಸಸ್ಪೆನ್ಷನ್ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ.

ಎಕ್ಸ್ ಕ್ಲೂಸಿವ್; ಬರುತ್ತಿದೆ ಮಹೀಂದ್ರ 155 ಸಿಸಿ ಅಗ್ಗದ ಬೈಕ್

ಮಹೀಂದ್ರ 155 ಸಿಸಿ ಬೈಕ್ ನ್ಲಲಿರುವ ಎಂಜಿನ್ 13ರಿಂದ 15ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ. ಭಾರತ ಸೇರಿದಂತೆ ಅಂತರಾಷ್ಟ್ರೀಯ ಮಾರುಕಟ್ಟೆಗೂ ಪರಿಚಯಿಸುವ ಇರಾದೆಯನ್ನು ಮಹೀಂದ್ರ ಹೊಂದಿದೆ.

ಎಕ್ಸ್ ಕ್ಲೂಸಿವ್; ಬರುತ್ತಿದೆ ಮಹೀಂದ್ರ 155 ಸಿಸಿ ಅಗ್ಗದ ಬೈಕ್

ಇನ್ನು ಬಿಡುಗಡೆ ದಿನಾಂಕ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಗಳು ಬಂದಿಲ್ಲ. ಇವೆಲ್ಲದಕ್ಕೂ ಮಹೀಂದ್ರ ಸಂಸ್ಥೆಯೇ ಉತ್ತರಿಸಬೇಕಿದೆ. ಒಟ್ಟಿನಲ್ಲಿ ಸದ್ಯದಲ್ಲೇ ಮಗದೊಂದು ಆಕರ್ಷಕ ಬೈಕ್ ದೇಶದ ರಸ್ತೆಗೆ ಪ್ರವೇಶವಾಗಲಿದೆ.

More from DriveSpark

Article Published On: Friday, August 19, 2016, 10:08 [IST]
English summary
All-New Mahindra Commuter Bike Spied Ahead Of Launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+