ಸದ್ಯದಲ್ಲೇ ಹೆಚ್ಚು ಶಕ್ತಿಶಾಲಿ ಮಹೀಂದ್ರ ಗಸ್ಟೊ 125 ಬಿಡುಗಡೆ
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಗಸ್ಟೊ ಸರಣಿಯ ಮಗದೊಂದು ಹೆಚ್ಚು ಶಕ್ತಿಶಾಲಿ ಬೈಕನ್ನು ಅನಾವರಣಗೊಳಿಸಿದೆ.
ನೂತನ ಮಹೀಂದ್ರ ಗಸ್ಟೊ 125 ಮುಂಬರುವ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿರಿಸಲಿದ್ದು, ತದಾ ಬಳಿಕ ಮಾರಾಟಕ್ಕೆ ಲಭ್ಯವಾಗಲಿದೆ.

ಪ್ರಮುಖವಾಗಿಯೂ ಯುವ ಪೀಳಿಗೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಗಸ್ಟೊ 125 ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಹೊಸ ಹೊಸ ಬಣ್ಣಗಳು ಹಾಗೂ ಗ್ರಾಫಿಕ್ಸ್‌ಗಳ ಆಯ್ಕೆಗಳು ಲಭ್ಯವಾಗಲಿದೆ.

ಇನ್ನು ಎಂಜಿನ್ ತಾಂತ್ರಿಕತೆ ಬಗ್ಗ ಮಾತನಾಡುವುದಾದ್ದಲ್ಲಿ ನೂತನ ಗಸ್ಟೊ ಹೆಚ್ಚು ಶಕ್ತಿಶಾಲಿ 124.57 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಟೆಕ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಇದು 10 ಎನ್‌ಎಂ ತಿರುಗುಬಲದಲ್ಲಿ 8.5 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರಲಿದೆ.

ನೂತನ ಗಸ್ಟೊ ಪರಿಣಾಮಕಾರಿ ಎಂಜಿನ್ ಕ್ಷಮತೆಯನ್ನು ಕಾಪಾಡಿಕೊಳ್ಳಲಿದ್ದು, ಪ್ರತಿ ಲೀಟರ್ ಗೆ 60 ಕೀ.ಮೀ. ಮೈಲೇಜ್ ನೀಡಲಿದೆ.

ಬಣ್ಣಗಳು
ಆರೆಂಜ್ ರಷ್ (ಡ್ಯುಯಲ್ ಟೋನ್)
ಬೋಲ್ಟ್ ವೈಟ್ (ಡ್ಯುಯಲ್ ಟೋನ್)
ಮೋನಾರ್ಕ್ ಬ್ಲ್ಯಾಕ್
ರೆಗಲ್ ರೆಡ್

ಮೊದಲ ಬಾರಿಗೆ ಗಸ್ಟೊ ದೇಶಕ್ಕೆ ಪರಿಚಯವಾದಾಗ ಎತ್ತರ ಹೊಂದಾಣಿಸಬಹುದಾದ ಸೀಟು, ರಿಮೋಟ್ ಪ್ಲಿಪ್ ಕೀ, ಫೈಂಡ್ ಮಿ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿತ್ತು. ಈ ಎಲ್ಲ ವಿಶಿಷ್ಟತೆಗಳು
ನೂತನ ಗಸ್ಟೊದಲ್ಲೂ ಮುಂದುವರಿಯಲಿದೆ.

ಇದರೊಂದಿಗೆ ಟ್ಯೂಬ್ ಲೆಸ್ ಚಕ್ರಗಳು, ಟೆಲಿಸ್ಕಾಪಿಕ್ ಸಸ್ಪಷನ್ ಜೊತೆ ಏರ್ ಸ್ಪ್ರಿಂಗ್, ಗೈಡ್ ಲ್ಯಾಂಪ್, ಫ್ರಂಟ್ ಕಿಕ್, ಹಾಗೂ ಸೀಟು ಕೆಳಗಡೆ ಹೆಚ್ಚು ಸ್ಥಳಾವಕಾಶವಿರಲಿದೆ.


Click it and Unblock the Notifications








