ಆಕ್ಟಿವಾ ಬ್ರಾಂಡ್ ಮೌಲ್ಯ ಮೀರಿ ನಿಲ್ಲಲು ಗಸ್ಟೊಗೆ ಸಾಧ್ಯವೇ?

By Nagaraja

ಗಸ್ಟೊ 110 ಸಿಸಿ ಸ್ಕೂಟರ್ ಯಶಸ್ಸಿನ ಬಳಿಕ ದೇಶದ ಮುಂಚೂಣಿಯ ಮಹೀಂದ್ರ ಟು ವೀಲರ್ಸ್ ಸಂಸ್ಥೆಯು ಹೆಚ್ಚು ಶಕ್ತಿಶಾಲಿ ಗಸ್ಟೊ 125 ಸಿಸಿ ಆವೃತ್ತಿಯನ್ನು ಪರಿಚಯಿಸುತ್ತಿದೆ.

Also Read: ಮಹೀಂದ್ರ ಮೊಜೊ ವಿಮರ್ಶೆ; ಬ್ರಾಂಡ್ ಅಲ್ಲ ಗುಣಮಟ್ಟ ಮುಖ್ಯ! ಮುಂದಕ್ಕೆ ಓದಿ

ಇದು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಹೋಂಡಾ ಆಕ್ಟಿವಾ 125 ಸಿಸಿ ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ. ಇದರೊಂದಿಗೆ 125 ಸಿಸಿ ವಿಭಾಗದಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ಪೈಪೋಟಿಯು ಕಂಡುಬರಲಿದೆ. ಪ್ರಸ್ತುತ ಲೇಖನದಲ್ಲಿ ಹೊಸ ಗಸ್ಟೊ 125 ಹಾಗೂ ಆಕ್ಟಿವಾ 125 ಸ್ಕೂಟರ್ ಗಳ ಬಗ್ಗೆ ತುಲನೆ ಮಾಡುವ ಪ್ರಯತ್ನ ಮಾಡಲಾಗುವುದು.

ಬೆಲೆ ಮಾಹಿತಿ (ಆನ್ ರೋಡ್ ಬೆಂಗಳೂರು)

ಬೆಲೆ ಮಾಹಿತಿ (ಆನ್ ರೋಡ್ ಬೆಂಗಳೂರು)

ಹೋಂಡಾ ಆಕ್ಟಿವಾ 125 ಸ್ಟ್ಯಾಂಡರ್ಡ್: 67974

ಹೋಂಡಾ ಆಕ್ಟಿವಾ 125 ಡಿಎಲ್‌ಎಕ್ಸ್: 75158

ಮಹೀಂದ್ರ ಗಸ್ಟೊ 125: 60,000 ರು. (ಅಂದಾಜು ಬೆಲೆ)

ವಿನ್ಯಾಸ - ಆಕ್ಟಿವಾ 125

ವಿನ್ಯಾಸ - ಆಕ್ಟಿವಾ 125

ಸರಳ ಹಾಗೂ ಕ್ರೀಡಾತ್ಮಕ ವಿನ್ಯಾಸವನ್ನು ಆಕ್ಟಿವಾದಲ್ಲಿ ಬಳಕೆ ಮಾಡಲಾಗಿದೆ. ಇದು 110 ಸಿಸಿ ಮಾದರಿಗೆ ಹೆಚ್ಚಿನ ಸಾಮತ್ಯೆಯನ್ನು ಪಡೆದುಕೊಂಡಿದ್ದು, ಮುಂದುಗಡೆ ಹೆಡ್ ಲೈಟ್ ಹಾಗೂ ಇಂಡಿಕೇಟರ್ ಕಾಣಬಹುದಾಗಿದೆ.

ವಿನ್ಯಾಸ - ಗಸ್ಟೊ 125

ವಿನ್ಯಾಸ - ಗಸ್ಟೊ 125

ಯುವ ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸುವ ಪ್ರಯತ್ನವನ್ನು ಗಸ್ಟೊ 125 ಮೂಲಕ ಮಾಡಲಾಗಿದೆ. ಮುಂದುಗಡೆ ಕೊಟ್ಟಿರುವ ಏರ್ ವೆಂಟ್ಸ್ ಹಾಗೂ ಟರ್ನ್ ಸಿಗ್ನಲ್ ಗಳು ಸ್ಕೂಟರ್‌ಗೆ ಸ್ಮಾರ್ಟ್ ಲುಕ್ ನೀಡುತ್ತಿದೆ.

ಎಂಜಿನ್ ತಾಂತ್ರಿಕತೆ - ಆಕ್ಟಿವಾ 125

ಎಂಜಿನ್ ತಾಂತ್ರಿಕತೆ - ಆಕ್ಟಿವಾ 125

  • 124 ಸಿಸಿ, ಸಿಂಗಲ್ ಸಿಲಿಂಡರ್,
  • ಏರ್ ಕೂಲ್ಡ್ ಎಂಜಿನ್,
  • 8.6 ಅಶ್ವಶಕ್ತಿ,
  • 10.1 ಎನ್‌ಎಂ ತಿರುಗುಬಲ
  • ಸಿವಿಟಿ ಗೇರ್ ಬಾಕ್ಸ್
  • ಮೈಲೇಜ್: 59 ಕೀ.ಮೀ.
  • ಎಂಜಿನ್ ತಾಂತ್ರಿಕತೆ - ಗಸ್ಟೊ 125

    ಎಂಜಿನ್ ತಾಂತ್ರಿಕತೆ - ಗಸ್ಟೊ 125

    • 124.5 ಸಿಸಿ, ಸಿಂಗಲ್ ಸಿಲಿಂಡರ್,
    • ಏರ್ ಕೂಲ್ಡ್ ಎಂಜಿನ್
    • 8.5 ಅಶ್ವಶಕ್ತಿ,
    • 10 ಎನ್‌ಎಂ ತಿರುಗುಬಲ
    • ಸಿವಿಟಿ ಗೇರ್ ಬಾಕ್ಸ್
    • ವೈಶಿಷ್ಟ್ಯಗಳು - ಆಕ್ಟಿವಾ 125

      ವೈಶಿಷ್ಟ್ಯಗಳು - ಆಕ್ಟಿವಾ 125

      ಮುಂದುಗಡೆ ಟೆಲಿಸ್ಕಾಪಿಕ್ ಫಾರ್ಕ್, ಐಚ್ಛಿಕ ಡಿಸ್ಕ್ ಬ್ರೇಕ್, ಅಲಾಯ್ ವೀಲ್, ಮುಂದುಗಡೆ 12 ಇಂಚು ಹಾಗೂ ಹಿಂದುಗಡೆ 10 ಇಂಚುಗಳ ಚಕ್ರಗಳು, ಹೋಂಡಾ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಅದೇ ರೀತಿ ಸೀಟು ಕೆಳಗಡೆ ಫುಲ್ ಫೇಸ್ ಹೆಲ್ಮೆಟ್ ಇಡುವ ವ್ಯವಸ್ಥೆಯೂ ಇರುತ್ತದೆ.

      ವೈಶಿಷ್ಟ್ಯಗಳು - ಗಸ್ಟೊ 125

      ವೈಶಿಷ್ಟ್ಯಗಳು - ಗಸ್ಟೊ 125

      ಮಹೀಂದ್ರ ಗಸ್ಟೊ ಸ್ಕೂಟರ್ ನಲ್ಲೂ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್, ಅಲಾಯ್ ವೀಲ್, ಸೀಟು ಕೆಳಗಡೆ ಸ್ಟೋರೆಜ್ ಜಾಗ ಹಾಗೂ ಮೊಬೈಲ್ ಅಥವಾ ವ್ಯಾಲೆಟ್ ಗಳನ್ನಿಡಲು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೆಳಗಡೆ ಸಣ್ಣ ಪಾಕೆಟ್ ಇರಲಿದೆ. ಇವೆಲ್ಲದಕ್ಕೂ ಮಿಲಿಲಾಗಿ ಗಸ್ಟೊದಲ್ಲಿ ಮಾತ್ರ ಕಂಡುಬಂದಿರುವ ಎತ್ತರ ಹೊಂದಾಣಿಸಬಹುದಾದ ಸೀಟು ಹೊಸ ಸ್ಕೂಟರನ್ನು ವಿಶಿಷ್ಟವಾಗಿಸಲಿದೆ.

      ವಿಶಿಷ್ಟತೆಗಳು - ಆಕ್ಟಿವಾ 125

      ವಿಶಿಷ್ಟತೆಗಳು - ಆಕ್ಟಿವಾ 125

      • ಡಿಜಿಟಲ್ ಮೀಟರ್,
      • ಸಮರ್ಥ ಮುಂಭಾಗ,
      • ಟೆಲಿಸ್ಕಾಪಿಕ್ ಸಸ್ಪೆನ್ಷನ್,
      • ಡಿಸ್ಕ್ ಬ್ರೇಕ್,
      • ಸ್ಟರ್ಡಿ ಅಲಾಯ್ ವೀಲ್,
      • ಕೊಂಬಿ ಬ್ರೇಕ್ ಸಿಸ್ಟಂ,
      • ವಿಶಿಷ್ಟತೆಗಳು - ಆಕ್ಟಿವಾ 125

        ವಿಶಿಷ್ಟತೆಗಳು - ಆಕ್ಟಿವಾ 125

        • ಸೂಪರ್ ಪವರ್ ಆಂಡ್ ಪಿಕಪ್,
        • ಪ್ರೀಮಿಯಂ 3ಡಿ ಲಾಂಛನ,
        • ಹೋಂಡಾ ಎಚ್‌ಇಟಿ ತಂತ್ರಜ್ಞಾನ,
        • ಮೆಟಲ್ ಬಾಡಿ,
        • ಸೀಟು ಕೆಳಗಡೆ ಬೇಕಾದಷ್ಟು ಸ್ಟೋರೆಜ್ ಜಾಗ
        •  ವಿಶಿಷ್ಟತೆಗಳು - ಮಹೀಂದ್ರ ಗಸ್ಟೊ 125

          ವಿಶಿಷ್ಟತೆಗಳು - ಮಹೀಂದ್ರ ಗಸ್ಟೊ 125

          • ಶಕ್ತಿಶಾಲಿ 125 ಸಿಸಿ ಎಂ-ಟೆಕ್ ಎಂಜಿನ್,
          • ಎತ್ತರ ಹೊಂದಾಣಿಸಬಹುದಾದ ಸೀಟು,
          • ರಿಮೋಟ್ ಪ್ಲಿಪ್ ಕೀ,
          • ಫೈಂಡ್ ಮಿ ಲ್ಯಾಂಪ್,
          • ದೊಡ್ಡದಾದ ಟ್ಯೂಬ್ ಲೆಸ್ ಚಕ್ರಗಳು,
          • ವಿಶಿಷ್ಟತೆಗಳು - ಮಹೀಂದ್ರ ಗಸ್ಟೊ 125

            ವಿಶಿಷ್ಟತೆಗಳು - ಮಹೀಂದ್ರ ಗಸ್ಟೊ 125

            • ಏರ್ ಸ್ಪ್ರಿಂಗ್ ಜೊತೆ ಟೆಲಿಸ್ಕಾಪಿಕ್ ಸಸ್ಪೆನ್ಷನ್,
            • ಗೈಡ್ ಲ್ಯಾಂಪ್,
            • ಈಸಿ ಫ್ರಂಟ್ ಕಿಕ್,
            • ಕ್ವಿಕ್ ಸ್ಟೋರೆಜ್,
            • ಹ್ಯಾಲಗನ್ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಲ್ಯಾಂಪ್,
            • ಹೆಚ್ಚು ಸ್ಥಳಾವಕಾಶ
            • ಅಂತಿಮ ತೀರ್ಪು

              ಅಂತಿಮ ತೀರ್ಪು

              ಎಂಜಿನ್ ತಾಂತ್ರಿಕತೆ, ಶಕ್ತಿ ಹಾಗೂ ವೈಶಿಷ್ಟ್ಯಗಳನ್ನು ಹೋಲಿಕೆ ಮಾಡಿದಾಗ ಹೋಂಡಾ ಆಕ್ಟಿವಾ ಹಾಗೂ ಮಹೀಂದ್ರ 125 ಸ್ಕೂಟರ್ ಗಳು ಬಹುತೇಕ ಸಾಮತ್ಯೆಯನ್ನು ಪಡೆದುಕೊಂಡಿದೆ. ಆದರೆ ಸ್ಕೂಟರ್ ವಿನ್ಯಾಸವನ್ನು ಪರಿಗಣಿಸಿದಾಗ ತಾಜಾತನ ಡಿಸೈನ್ ಮೈಗೂಡಿಸಿ ಬಂದಿರುವ ಗಸ್ಟೊ ಸ್ವಲ್ಪ ಮುನ್ನಡೆಯನ್ನು ಕಾಯ್ದುಕೊಂಡಿದೆ. ಏತನ್ಮಧ್ಯೆ ದೇಶದ ನಂ.1 ಸ್ಕೂಟರ್ ಎಂಬ ಹಣೆಪಟ್ಟಿ ಹಾಗೂ ಬ್ರಾಂಡ್ ಮೌಲ್ಯವು ಆಕ್ಟಿವಾಗೆ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳಲು ಸಹಕಾರಿಯಾಗಲಿದೆ. ಆದರೂ ಎತ್ತರ ಹೊಂದಾಣಿಸಬಹುದಾದ ಸೀಟು ಹಾಗೂ ಇನ್ನಿತರ ನಾವೀನ್ಯ ವೈಶಿಷ್ಟ್ಯಗಳು ಮಹೀಂದ್ರ ಗಸ್ಟೊಗೆ ಹೊಸತನವನ್ನು ನೀಡಲಿದೆ.

              ಇವನ್ನೂ ಓದಿ

              ಆಕ್ಟಿವಾ ತ್ರಿಜಿ vs ಮಹೀಂದ್ರ ಗಸ್ಟೊ; ಯಾವ ಸ್ಕೂಟರ್ ಬೆಸ್ಟ್?

More from DriveSpark

Article Published On: Wednesday, January 13, 2016, 12:30 [IST]
English summary
Honda Activa 125 vs Mahindra Gusto 125 Scooter Comparison
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+