ಮಹೀಂದ್ರ 'ಕೈನಾಟಿಕ್ ಚಾಲೆಂಜರ್' ಅಗ್ಗದ ಬೈಕ್ ರಿ ಎಂಟ್ರಿ ?
ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮಹೀಂದ್ರ ಕೈನಾಟಿಕ್ ಚಾಲೆಂಜರ್ ಅಗ್ಗದ ಪ್ರಯಾಣಿಕ ಬೈಕ್ ಮಾರುಕಟ್ಟೆಗೆ ಮರು ಪ್ರವೇಶಿಸಲಿದೆ. 21ನೇ ಶತಮಾನದ ಆರಂಭದಲ್ಲಿ ಬಿಡುಗಡೆಗೊಂಡಿರುವ ಕೈನಾಟಿಕ್ ಚಾಲೆಂಜರ್ ಮಾರುಕಟ್ಟೆಯಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ.
ಈಗ ಬಂದಿರುವ ಆಟೋ ನಿಕಟವರ್ತಿಗಳ ಮಾಹಿತಿಗಳ ಪ್ರಕಾರ ದೇಶದ ಮುಂಚೂಣಿಯ ಮಹೀಂದ್ರ ಟು ಸಂಸ್ಥೆಯು ಕೈನಾಟಿಕ್ ಚಾಲೆಂಜರ್ ಬೈಕ್ ಮರು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಹಕ್ಕುಪತ್ರ (ಪೇಟೆಂಟ್) ಗಿಟ್ಟಿಸಿಕೊಂಡಿದೆ.

2001ರಲ್ಲಿ ಮೊದಲ ಬಾರಿ ಬಿಡುಗಡೆಗೊಂಡಾಗ ಹೀರೊ ಸ್ಪ್ಲೆಂಡರ್, ಬಜಾಜ್ ಬಾಕ್ಸರ್ ಹಾಗೂ ವಿಕ್ಟರ್ ವಿಕ್ಟರ್ ಗಳಂತಹ ಬೈಕ್ ಗಳ ಜೊತೆಗಿನ ರೇಸ್ ನಲ್ಲಿ ಕೈನಾಟಿಕ್ ಚಾಲೆಂಜರ್ ಹಿಂದೆ ಬಿದ್ದಿತ್ತು.

ಈಗ ಪ್ರಯಾಣಿಕ ಬೈಕ್ ಮಾರುಕಟ್ಟೆಯನ್ನು ಗುರಿಯಿರಿಸಿಕೊಂಡಿರುವ ಬಜಾಜ್, ಕೆಲವೊಂದು ಬದಲಾವಣೆಗಳೊಂದಿಗೆ ಕೈನಾಟಿಕ್ ಚಾಲೆಂಜರ್ ಮೋಟಾರ್ ಸೈಕಲ್ ಮರು ಪರಿಚಯಿಸಲಿದೆ.

ಕೈನಾಟಿಕ್ ಚಾಲೆಂಜರ್ ಮೂಲ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ತರದೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡುವುದು ಸಂಸ್ಥೆಯ ಗುರಿಯಾಗಿದೆ.

ಎಂಜಿನ್ ತಾಂತ್ರಿಕತೆಗಳ ಬಗ್ಗೆ ಹೆಚ್ಚಿನ ವಿವರಗಳು ಅಲಭ್ಯ. ಆದರೂ ಮಹೀಂದ್ರ ತನ್ನ ಯಶಸ್ವಿ ಸೆಂಚುರೊ ಬೈಕ್ ನಲ್ಲಿ ಆಳವಡಿಸಿರುವ 106.70 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ.

ಸದ್ಯ ಮಹೀಂದ್ರ ಸೆಂಚುರೊ ಮಾರುಕಟ್ಟೆಯಲ್ಲಿ ಎಕ್ಸ್ ಶೋ ರೂಂ ಬೆಲೆ 52,200 ರು.ಗಳಷ್ಟು ದುಬಾರಿಯೆನಿಸುತ್ತದೆ. ನೂತನ ಕೈನಾಟಿಕ್ ಚಾಲೆಂಜರ್ ಇದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂಬುದು ಗಮನಾರ್ಹ.


Click it and Unblock the Notifications








