ಡ್ಯುಯಲ್ ಎಕ್ಸಾಸ್ಟ್ ಕೊಳವೆಯ ಬಜಾಜ್ ಪಲ್ಸರ್ ಪವರ್ ಫುಲ್ ಬೈಕ್

By Nagaraja

ವಾಹನಗಳ ಮೇಲೆ ಅತೀವ ಕ್ರೇಜ್ ಹೊಂದಿರುವ ಉತ್ಸಾಹಿ ಸವಾರರು ತಮ್ಮ ಗಾಡಿಗಳನ್ನು ವಿಶೇಷವಾಗಿ ಟ್ಯೂನ್ ಮಾಡುವುದು ಅಥವಾ ಮಾರ್ಪಾಡುಗೊಳಿಸುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯಗಳಾಗಿವೆ. ಇತರೆ ಬೈಕ್ ಗಳಿಂತ ತಮ್ಮ ಬೈಕ್ ಗಳು ವಿಭಿನ್ನವಾಗಿ ಗುರುತಿಸಬೇಕೆಂಬ ಹಂಬಲ ಅಂಥವರದ್ದಾಗಿರುತ್ತದೆ.

ಇಲ್ಲಿ ವಾಹನ ಪ್ರೇಮಿಯೊಬ್ಬ ಅತಿ ನೂತನ ಬಜಾಜ್ ಪಲ್ಸರ್ ಬೈಕನ್ನು ಮಾಪಾರ್ಡುಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಮಾರುಕಟ್ಟೆಗೆ ತಲುಪಿರುವ ಬಜಾಜ್ ಆರ್ ಎಸ್ 200 ಯುವ ಗ್ರಾಹಕರಲ್ಲಿ ಹೆಚ್ಚಿನ ಹುಮ್ಮಸ್ಸನ್ನು ಬೀರಿದೆ.

ಡ್ಯುಯಲ್ ಎಕ್ಸಾಸ್ಟ್ ಕೊಳವೆಯ ಬಜಾಜ್ ಪಲ್ಸರ್ ಪವರ್ ಫುಲ್ ಬೈಕ್

ದೇಶದ ನಂ.1 ಕ್ರೀಡಾ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಜಾಜ್ ಪಲ್ಸರ್, ಕೈಗೆಟುಕುವ ದರಗಳಲ್ಲಿ ಗ್ರಾಹಕರ ಕೈ ಸೇರುತ್ತಿದೆ. ಇದರ ನಿರ್ವಹಣೆ ಸಹ ಮೆಚ್ಚುಗೆಗೆ ಪಾತ್ರವಾಗಿದೆ.

ಡ್ಯುಯಲ್ ಎಕ್ಸಾಸ್ಟ್ ಕೊಳವೆಯ ಬಜಾಜ್ ಪಲ್ಸರ್ ಪವರ್ ಫುಲ್ ಬೈಕ್

ಸಂಪೂರ್ಣ ಫೇರಿಂಗ್ ದೇಹ ರಚನೆಯ ಜೊತೆಗೆ ಎರಡು ಎಕ್ಸಾಸ್ಟ್ ರಂಧ್ರಗಳು ಸೀಟು ಕೆಳಗಡೆಯಿಂದ ಲಗತ್ತಿಸಿರುವುದನ್ನು ನೀವಿಲ್ಲಿ ನೋಡಬಹುದಾಗಿದೆ.

ಡ್ಯುಯಲ್ ಎಕ್ಸಾಸ್ಟ್ ಕೊಳವೆಯ ಬಜಾಜ್ ಪಲ್ಸರ್ ಪವರ್ ಫುಲ್ ಬೈಕ್

ಮುಂಬೈ ತಳಹದಿಯ ಮಾರ್ಕ್ ಫರ್ಫಾಮನ್ಸ್ ರೇಸಿಂಗ್ ಎಕ್ಸಾಸ್ಟ್ ಸಂಸ್ಥೆಯು ರೇಸಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಇದನ್ನು ಸ್ಟೈನ್ ಲೆಸ್ ಸ್ಟೀಲ್ ಹಾಗೂ ಅಲ್ಯೂಮಿನಿಯಂನಿಂದ ನಿರ್ಮಿಸಲಾಗಿದೆ.

ಡ್ಯುಯಲ್ ಎಕ್ಸಾಸ್ಟ್ ಕೊಳವೆಯ ಬಜಾಜ್ ಪಲ್ಸರ್ ಪವರ್ ಫುಲ್ ಬೈಕ್

ಬಜಾಜ್ ಪಲ್ಸರ್ ಆರ್ ಎಸ್ 200 ಆವೃತ್ತಿಯು 199.5 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಟ್ರಿಪಲ್ ಸ್ಪಾರ್ಕ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 18.6 ಎನ್ ಎಂ ತಿರುಗುಬಲದಲ್ಲಿ 24.15 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಂತೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಬಜಾಜ್ ಆರ್ ಎಸ್ 200 ಶಬ್ದ ಹೇಗಿದೆ ಎಂಬುದನ್ನು ನೀವೇ ಆಲಿಸಿ ನೋಡಿ

More from DriveSpark

Article Published On: Monday, September 12, 2016, 11:09 [IST]
English summary
Modified Bajaj Pulsar RS200 With Cool Under Seat Exhaust May The Best One Yet
Read more on ಪಲ್ಸರ್ pulsar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+