9 ಅದೃಷ್ಟವಂತರಿಗೆ ಮಾತ್ರ 20 ಲಕ್ಷದ ಆಗಸ್ಟಾ ಕ್ರೀಡಾ ಬೈಕ್ ಪಡೆಯುವ ಅವಕಾಶ
ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಎಂವಿ ಆಗಸ್ಟಾ, ಅತಿ ನೂತನ ಎಫ್ 800 ಆರ್ ಸಿ ಬೈಕನ್ನು ಭಾರತದಲ್ಲಿ ಬಿಡಗುಡೆಗೊಳಿಸಿದೆ. ಇದರ ಬೆಲೆ 19.73 ಲಕ್ಷ ರುಪಾಯಿಗಳೆಂದು ನಿಗದಿಯಾಗಿದೆ. ಅಲ್ಲದೆ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ನವೆಂಬರ್ ಮೊದಲ ವಾರದಿಂದ ವಿತರಣೆಗೆ ಆರಂಭವಾಗಲಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ 19.73 ಲಕ್ಷ ರು. ಬೆಲೆ ಬಾಳುವ ಆಗಸ್ಟಾ ಎಫ್3 800 ಆರ್ ಸಿ ಕ್ರೀಡಾ ಬೈಕ್ ಪಡೆಯುವ ಅವಕಾಶ ಒಂಬತ್ತು ಅದೃಷ್ಟಶಾಲಿಗಳಿಗೆ ಮಾತ್ರವಿರಲಿದೆ.

ಜಾಗತಿಕ ಮಟ್ಟದಲ್ಲಿ ತನ್ನ ಮೌಲ್ಯ ಕಾಪಾಡಿಕೊಳ್ಳುವ ಇರಾದೆಯಲ್ಲಿರುವ ಆಗಸ್ಟಾ, ಸೀಮಿತ ಒಂಬತ್ತು ಯುನಿಟ್ ಗಳಷ್ಟನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡಲಿದೆ.

ಎಂವಿ ಆಗಸ್ಟಾ ಎಫ್3 800 ಆರ್‌ಸಿ ಸ್ಪೋರ್ಟ್ಸ್ ಬೈಕ್, ಎಎಂಜಿ ಬ್ರಾಂಡಡ್‌ನ ಎಫ್3-800 ಸೀಮಿತ ಆವೃತ್ತಿಯಾಗಿದೆ.

ಇಲ್ಲಿ 'ಆರ್‌ಸಿ' ಎಂಬುದು ರಿಪಾರ್ಟೊ ಕೋರ್ಸ್ ಎಂಬ ಅರ್ಥವನ್ನು ನೀಡುತ್ತದೆ. ಇದು ಎಫ್3 ನ ಕ್ರೀಡಾ ಆವೃತ್ತಿಯಾಗಿದೆ.

ವಿಶ್ವ ಪ್ರಸಿದ್ಧ ಮೋಟಾರ್ ಸೈಕಲ್ ರೇಸರುಗಳಾದ ಜುಲೆಸ್ ಕ್ಲೂಝೆಲ್, ಲೊರೆನ್ಜೊ ಝನೆಟ್ಟಿ ವೈಯಕ್ತಿಕ ಹಸ್ತಾಕ್ಷರದೊಂದಿಗೆ ವಿಶಿಷ್ಟ ಕ್ರೀಡಾ ವಿನ್ಯಾಸವನ್ನು ಪಡೆದಿದೆ.

ಎಂಜಿನ್ ತಾಂತ್ರಿಕತೆ ಬಗ್ಗೆ ಮೆಲುಕು ಹಾಕುವುದಾದ್ದಲ್ಲಿ ಇದರಲ್ಲಿರುವ 798 ಸಿಸಿ ತ್ರಿ ಸಿಲಿಂಡರ್ 12 ವಾಲ್ವ್ ಡಿಒಎಚ್ ಸಿ ಎಂಜಿನ್ 88 ಎನ್ ಎಂ ತಿರುಗುಬಲದಲ್ಲಿ 148 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಎಂಟು ಮಟ್ಟದ ಟ್ರಾಕ್ಷನ್ ಕಂಟ್ರೋಲ್ ಹಾಗೂ ನಾಲ್ಕು ಮೋಡ್ ಹೊಂದಿರುವ ಎಂವಿ ಆಗಸ್ಟಾ ಎಫ್3 800 ಆರ್‌ಸಿ ಸ್ಪೋರ್ಟ್ಸ್ ಬೈಕ್ ಪ್ರತಿ ಗಂಟೆಗೆ ಗರಿಷ್ಠ 269 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸ್ಟೀಲ್ ಟ್ಯೂಬುಲರ್ ಟ್ರೆಲ್ಲಿಸ್ ಫ್ರೇಮ್ ವರ್ಕ್ ಮೇಲೆ ಕುಳಿತುಕೊಂಡಿರುವ ಈ ಸ್ಪೋರ್ಟ್ಸ್ ಬೈಕ್ ಮುಂಭಾಗದ್ಲಲಿ ಮಾರ್ಝೊಚ್ಚಿ ಅಪ್ ಸೈಡ್ ಡೌನ್ ಫಾರ್ಕ್ ಮತ್ತು ಹಿಂಭಾಗದಲ್ಲಿ ಸಚ್ ಮೊನೊಶಾಕ್ ಗಿಟ್ಟಿಸಿಕೊಂಡಿದೆ.

ಬ್ರೇಕಿಂಗ್ ಸಹ ನಿಖರವಾಗಿದ್ದು ಮುಂಭಾಗದಲ್ಲಿ ಡ್ಯುಯಲ್ ಫ್ಲೋಟಿಂಗ್ 320 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 220 ಎಂಎಂ ರಿಯರ್ ಬ್ರೇಕ್ ಸೌಲಭ್ಯವಿರಲಿದೆ.

173 ಕೆ.ಜಿ ತೂಸಕ ಎಂ ಆಗಸ್ಟಾ ಎಫ್3 800 ಆರ್ ಸಿ ಕ್ರೀಡಾ ಬೈಕ್, ಟ್ವಿನ್ ಟೋನ್ ರೆಡ್ ಕಲರ್ ಜೊತೆಗೆ ಬಳಿ ಬಣ್ಣವನ್ನು ಪಡೆಯಲಿದೆ. ಜೊತೆ ಜೊತೆಗೆ ಬೈಕ್ ಕವರ್ ಮತ್ತು ಪ್ಯಾಡ್ ಲಾಕ್ ಸ್ಟ್ಯಾಂಡ್ ಗಿಟ್ಟಿಸಿಕೊಳ್ಳಲಿದೆ.


Click it and Unblock the Notifications








