ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿ ಬಿಡುಗಡೆ; ವೈಶಿಷ್ಟ್ಯಗಳೇನು?

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಸುಜುಕಿ, ತನ್ನ ಜನಪ್ರಿಯ ಆಕ್ಸೆಸ್ 125 ಸ್ಕೂಟರ್‌ನ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 55,589 ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ನೂತನ ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿಯ ಸ್ಕೂಟರ್ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಹಾಗಿದ್ದರೂ ಕಾಸ್ಮೆಟಿಕ್ ಬದಲಾವಣೆಗಳು ಕಂಡುಬರಲಿದ್ದು, ಹೆಚ್ಚಿನ ಕ್ಲಾಸಿಕ್ ಶೈಲಿಯನ್ನು ಕಾಪಾಡಿಕೊಂಡಿದೆ.

ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿ ಬಿಡುಗಡೆ

ಟಿವಿಎಸ್ ಭಾರತದಲ್ಲಿ ಮಾರಾಟ ಮಾಡುತ್ತಿರುವ ಸ್ಕೂಟರ್ ಗಳ ಪೈಕಿ ಅತಿ ಹೆಚ್ಚು ಯಶಸ್ಸು ಪಡೆದಿರುವ ಮಾದರಿಗಳಲ್ಲಿ ಆಕ್ಸೆಸ್ 125 ಒಂದಾಗಿದೆ. ಇದನ್ನೇ ಗಮನದಟ್ಟಿಟ್ಟುಕೊಂಡಿರುವ ಸಂಸ್ಥೆಯು ವಿಶೇಷ ಆವೃತ್ತಿಯನ್ನು ನೆಚ್ಚಿನ ಗ್ರಾಹಕರಿಗಾಗಿ ಒದಗಿಸುತ್ತಿದೆ.

ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿ ಬಿಡುಗಡೆ

ನೂತನ ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿಯಲ್ಲಿ ಕಂಡುಬಂದಿರುವ ಕೆಲವೊಂದು ಗಮನಾರ್ಹ ವೈಶಿಷ್ಟ್ಯಗಳೆಂದರೆ ಕ್ರೋಮ್ ನಿಂದ ಸುತ್ತುವರಿಯಲ್ಪಟ್ಟ ರಿಯರ್ ವ್ಯೂ ಮಿರರ್, ಕೆಂಗಂದು ಬಣ್ಣದ ಲೆಥರ್ ಸೀಟು ಕವರ್, ವಿಶೇಷ ಎಡಿಷನ್ ಲಾಂಛನಗಳು ಹಾಗೂ ಕಂದು ವರ್ಣದ ಫೂಟ್ ಬೋರ್ಡ್ ಕಂಡುಬರಲಿದೆ.

ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿ ಬಿಡುಗಡೆ

ಸ್ಟ್ಯಾಂಡರ್ಡ್ ಮಾದರಿಯಂತೆ ಬೆಳ್ಳಿ ಬಣ್ಣದ ಲೋಹಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಕ್ರೋಮ್ ಸ್ಪರ್ಶದ ಹೆಡ್ ಲೈಟ್ ಕ್ಲಸ್ಟರ್ ಹಾಗೂ ಎಕ್ಸಾಸ್ಟ್ ಸಹ ಕ್ರೋಮ್ ಹಾಗೂ ಅಲ್ಯೂಮಿನಿಯಂನಿಂದ ಸುತ್ತುವರಿಯಲ್ಪಡಲಿದೆ.

ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿ ಬಿಡುಗಡೆ

ಇತರೆಲ್ಲ ವೈಶಿಷ್ಟ್ಯಗಳು ಸಮಾನವಾಗಿರಲಿದ್ದು, ಅನಲಾಗ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಲ್ಪ್ ಸ್ಟ್ಯಾರ್ಟ್, ಸೀಟು ಕೆಳಗಡೆ ಸ್ಟೋರೆಜ್ ಜಾಗ, ಒನ್ ಪ್ರೆಸ್ ಲಾಕ್ ವ್ಯವಸ್ಥೆ ಹಾಗೂ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಗಳು ಇರಲಿದೆ.

ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿ ಬಿಡುಗಡೆ

ನೂತನ ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿಯು 124 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 10.2 ಎನ್ ಎಂ ತಿರುಗುಬಲದಲ್ಲಿ 8.58 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿ ಬಿಡುಗಡೆ

ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಹಾಗೂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಐಚ್ಛಿಕ ಡ್ಯುಯಲ್ ಡ್ರಮ್ ಬ್ರೇಕ್ ಗಳ ಸೌಲಭ್ಯವಿರುತ್ತದೆ.

ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿ ಬಿಡುಗಡೆ

ಸಂಸ್ಥೆಯ ಪ್ರಕಾರ ಸುಜುಕಿ ಆಕ್ಸೆಸ್ 125 ಸ್ಕೂಟರ್ ಪ್ರತಿ ಲೀಟರ್ ಗೆ 64 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಡ್ರಮ್ ಬ್ರೇಕ್: 55,589 ರು.

ಡಿಸ್ಕ್ ಬ್ರೇಕ್: 58,900 ರು.

ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿ ಬಿಡುಗಡೆ

ಭಾರತ ಮಾರುಕಟ್ಟೆಯಲ್ಲಿ ಸುಜುಕಿ ಆಕ್ಸೆಸ್ 125 ಆವೃತ್ತಿಯು ಪ್ರಮುಖವಾಗಿಯೂ ಹೋಂಡಾ ಆಕ್ಟಿವಾ 125 ಹಾಗೂ ವೆಸ್ಪಾ ವಿಎಕ್ಸ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

More from DriveSpark

Article Published On: Saturday, September 10, 2016, 12:39 [IST]
English summary
Suzuki Has Launched Its Access 125 Special Edition At An Irresistible Price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+