ಸುಜುಕಿ ಜಿಕ್ಸರ್ ಮತ್ತು ಜಿಕ್ಸರ್ ಎಸ್‌ಎಫ್ ವಿಶೇಷ ಆವೃತ್ತಿಗಳು ಬಿಡುಗಡೆ
ಜಪಾನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ, ದೇಶದಲ್ಲಿ ತನ್ನ ಜನಪ್ರಿಯ ಜಿಕ್ಸರ್ ಮತ್ತು ಜಿಕ್ಸರ್ ಎಸ್ ಎಫ್ ವಿಶೇಷ 'ಎಸ್ ಪಿ' ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಜಿಕ್ಸರ್ (ಎಸ್ ಪಿ) 80,726 ರುಪಾಯಿ
- ಜಿಕ್ಸರ್ ಎಸ್ ಎಫ್ (ಎಸ್ ಪಿ) 88,857 ರುಪಾಯಿ
ನೂತನ ಜಿಕ್ಸರ್ ಮತ್ತು ಜಿಕ್ಸರ್ ಎಸ್ ಎಫ್ ವಿಶೇಷ ಎಸ್ ಪಿ ಆವೃತ್ತಿಗಳು ವಿಶಿಷ್ಟ ಬಣ್ಣದ ಆಯ್ಕೆ ಹಾಗೂ ಗ್ರಾಫಿಕ್ಸ್ ಗಳೊಂದಿಗೆ ಆಗಮಿಸಲಿದ್ದು, ಬೈಕ್ ಪ್ರೇಮಿಗಳನ್ನು ಹೆಚ್ಚೆಚ್ಚು ಆಕರ್ಷಿಸಲಿದೆ.

ಜಿಕ್ಸರ್ ಎಸ್ ಪಿ ಮತ್ತು ಜಿಕ್ಸರ್ ಎಸ್ ಎಫ್ ಎಸ್ ಪಿ ವಿಶೇಷ ಆವೃತ್ತಿಗಳು ರಿಯರ್ ಡಿಸ್ಕ್ ಬ್ರೇಕ್, ಕ್ಲಾಸಿಕ್ ರೇಸ್ ನಿಂದ ಸ್ಪೂರ್ತಿ ಪಡೆದ ಗ್ರಾಫಿಕ್ಸ್ ಮತ್ತು ಜಿಕ್ಸರ್ ಎಸ್ ಪಿ ಲಾಂಛನವನ್ನು ಪಡೆದುಕೊಳ್ಳಲಿದೆ.

ಕೆಂಗಂದು ಬಣ್ಣದ ಸೀಟು ಮತ್ತು ಕ್ಲಿಯರ್ ಲೆನ್ಸ್ ಎಲ್ ಇಡಿ ಟೈಲ್ ಲೈಟ್ ನೂತನ ಜಿಕ್ಸರ್ ಆವೃತ್ತಿಗಳಿಗೆ ಕ್ಲಾಸಿಕ್ ಲುಕ್ ನೀಡಲಿದೆ.

ಜಿಕ್ಸರ್ ವಿಶೇಷ ಆವೃತ್ತಿಗಲು ಮ್ಯಾಟ್ ಫೈಬ್ರೋನ್ ಗ್ರೇ ಅಥವಾ ಕ್ಲಾಸಿಕ್ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಸಮಕಾಲೀನ ಮಾರುಕಟ್ಟೆಯಲ್ಲಿ ಸ್ಟ್ರೀಟ್ ಸ್ಪೋರ್ಟ್ಸ್ ಬೈಕ್ ಗಳಲ್ಲಿ ಜಿಕ್ಸರ್ ಹೆಚ್ಚು ಜನಪ್ರಿಯತೆಯನ್ನು ಕಾಪಾಡಿಕೊಂಡಿದ್ದು, ಗಮನಾರ್ಹ ಮಾರಾಟವನ್ನು ಸಾಧಿಸುತ್ತಿದೆ.

ಪವರ್ ಫುಲ್ ಎಂಜಿನ್, ಕ್ರೀಡಾತ್ಮಕ ಶೈಲಿ ಹಾಗೂ ಅತ್ಯುತ್ತಮ ಹ್ಯಾಂಡ್ಲಿಂಗನ್ನು ಭಾರತೀಯ ಯುವ ಗ್ರಾಹಕರು ಮೆಚ್ಚಿದ್ದು, ಪ್ರತಿಯೊಂದು ಕ್ಷಣದ ರೈಡಿಂಗ್ ಆನಂದಿಸುವಂತಾಗಿದೆ.

ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ನೂತನ ಜಿಕ್ಸರ್ 155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 14 ಎನ್ ಎಂ ತಿರುಗುಬಲದಲ್ಲಿ 14.6 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಮುಂದುಗಡೆ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಹಾಗೂ ಹಿಂದುಗಡೆ ಮೊನೊಶಾಕ್ ರಿಯರ್ ಶಾಕ್ ವ್ಯವಸ್ಥೆಯನ್ನು ಲಗತ್ತಿಸಲಾಗಿದೆ. ಇನ್ನು ಟ್ವಿನ್ ಡಿಸ್ಕ್ ಬ್ರೇಕ್ ಜೋಡನೆ ಮಾಡಲಾಗಿದ್ದು, ಹಿಂದುಗಡೆ ಐಚ್ಛಿಕ ಡ್ರಮ್ ಬ್ರೇಕ್ ಸೌಲಭ್ಯವೂ ಇರುತ್ತದೆ.

ಅದೇ ಹೊತ್ತಿಗೆ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳಿಸಲಾಗಿರುವ ಜಿಕ್ಸರ್ ಎಸ್ ಎಫ್-ಎಫ್ ಐ ಫ್ಯೂಯಲ್ ಇಂಜೆಕ್ಟರ್ ಆವೃತ್ತಿಯು ಆಯ್ದ ನಗರಗಳಲ್ಲಿ ಮಾರಾಟಕ್ಕೆ ಲಭ್ಯವಾಗಿರಲಿದೆ ಎಂಬುದನ್ನು ಸಂಸ್ಥೆಯು ಸ್ಪಷ್ಟಪಡಿಸಿದೆ. ಇದು ಮೊಟೊಜಿಪಿ ಎಡಿಷನ್ ಬಣ್ಣಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








