ನಮ್ಮ ಬೆಂಗಳೂರಿಗೂ ಕಾಲಿಟ್ಟ ಬ್ರಿಟನ್‌ನ ಕ್ಲಾಸಿಕ್ ದುಬಾರಿ ಬೈಕ್
ಪ್ರೀಮಿಯಂ ಬೈಕ್ ಮಾರುಕಟ್ಟೆಯಲ್ಲಿ ಟ್ರಯಂಪ್ ಬೈಕ್ ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಬ್ರಿಟನ್ ನ ಐಕಾನಿಕ್ ಬೈಕ್ ತಂತ್ರಗಾರಿಕೆಯನ್ನು ಭಾರತೀಯರು ಮನ ಮೆಚ್ಚಿದ್ದಾರೆ.
ರಾಷ್ಟ್ರೀಯ ಬಿಡುಗಡೆಯ ಬೆನ್ನಲ್ಲೇ ಸ್ಥಳೀಯ ಬಿಡುಗಡೆಯ ಭಾಗವಾಗಿ ಬ್ರಿಟನ್ ನ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಟ್ರಯಂಪ್, ನಮ್ಮ ಬೆಂಗಳೂರಿನಲ್ಲಿ ಬೊನ್ ವಿಲ್ ಟಿ100 ಬೈಕನ್ನು ಬಿಡುಗಡೆಗೊಳಿಸಿದೆ. ಬ್ರಿಟನ್ ನ ಈ ಐಕಾನಿಕ್ ಕ್ಲಾಸಿಕ್ ಬೈಕ್ ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 7.96 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಜರ್ಮನಿಯಲ್ಲಿ ನಡೆದ ಇಂಟರ್ ಮೊಟ್ ಮೋಟಾರ್ ಸೈಕಲ್ ಶೋದಲ್ಲಿ ಅನಾವರಣಗೊಂಡಿರುವ ಟ್ರಯಂಪ್ ಬೈಕ್, ಸಂಸ್ಥೆಯಿಂದ ಸ್ಟ್ರೀಟ್ ಟ್ವಿನ್ ಬಳಿಕ ಮಾರಾಟವಾಗಲಿರುವ ಎರಡನೇ ಅತ್ಯಂತ ಅಗ್ಗದ ಬೈಕ್ ಎನಿಸಿಕೊಳ್ಳಲಿದೆ.

ಇದರಲ್ಲಿರುವ 900 ಸಿಸಿ ಪ್ಯಾರಲಲ್ ಟ್ವಿನ್ ಮೋಟಾರು ಎಂಜಿನ್ 80 ಎನ್ ಎಂ ತಿರುಗುಬಲದಲ್ಲಿ 55 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ. ಇದು ಸಹ ಸ್ಟ್ರೀಟ್ ಟ್ವಿನ್ ಆವೃತ್ತಿಗೆ ಸಮಾನವಾಗಿದೆ.

ಟ್ರಯಂಪ್ ಥ್ರಕ್ಸ್ಟನ್ ಆರ್ ಜೊತೆ ವಿನ್ಯಾಸವನ್ನು ಹಂಚಿಕೊಂಡಿರುವ ನೂತನ ಟಿ100, 1950ರ ನೈಜ ಬೊನ್ ವಿಲ್ ಬೈಕ್ ಗಳನ್ನು ಜೀವಂತವಾಗಿರಿಸಿದೆ.

ಆಧುನಿಕ ಶೈಲಿಗೆ ತಕ್ಕಂತೆ ಬಹು ಕ್ರಿಯಾತ್ಮಕ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅನಲಾಗ್ ಸ್ಪೀಡೋಮೀಟರ್, ಅನಲಾಗ್ ಟ್ಯಾಕೋಮೀಟರ್ ಇತ್ಯಾದಿ ವ್ಯವಸ್ಥೆಗಳಿರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಇದರಂತೆ ಎಲೆಕ್ಟ್ರಾನಿಕ್ ರೈಡ್ ಬೈ ವೈರ್ ಜೊತೆ ವಿವಿಧ ರೈಡಿಂಗ್ ಮೋಡ್, ಟ್ರಾಕ್ಷನ್ ಕಂಟ್ರೋಲ್, ಟಾರ್ಕ್ ಅಸಿಸ್ಟ್ ಕ್ಲಚ್, ಹೊಸತಾದ ಡೇಟೈಮ್ ರನ್ನಿಂಗ್ ಲ್ಯಾಂಪ್ಸ್, ಎಲ್ ಇಡಿ ರಿಯರ್ ಲ್ಯಾಂಪ್ ಮತ್ತು ಅಂಡರ್ ಸೀಟು ಯುಎಸ್ ಬಿ ಚಾರ್ಜಿಂಗ್ ಸಾಕೆಟ್ ಲಭ್ಯವಾಗಲಿದೆ.

ಮುಂಭಾಗದಲ್ಲಿ 301 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 255 ಎಂಎಂ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ.

ಟ್ಯೂಬುಲರ್ ಸ್ಟೀಲ್ ಟ್ವಿನ್ ಕ್ರಾಡಲ್ ಚಾಸೀ
ಮುಂಭಾಗದಲ್ಲಿ 41 ಎಂಎಂ ಕೆವೈಬಿ ಫಾರ್ಕ್ ಜೊತೆ 120 ಎಂಎಂ ಟ್ರಾವೆಲ್
ಹಿಂಭಾಗದಲ್ಲಿ ಕೆವೈಬಿ ಶಾಕ್ಸ್ ಜೊತೆ ಹೊಂದಾಣಿಸಬಹುದಾದ ಪ್ರಿಲೋಡ್ 120 ಎಂಎಂ ಟ್ರಾವೆಲ್

ಚಕ್ರಗಳು
ಮುಂಭಾಗ: 100/90-R18
ಹಿಂಭಾಗ: 150/70-R17


Click it and Unblock the Notifications








