ಬ್ರಿಟಿಷ್ ಕ್ಲಾಸಿಕ್ ಮೋಟಾರ್ ಸೈಕಲ್ ಭಾರತಕ್ಕೆ ಎಂಟ್ರಿ
ಭಾರತದಲ್ಲಿ ಹೈ ಎಂಡ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಮಾರಾಟ ಕುದುರಿಸಿಕೊಳ್ಳುವ ಇರಾದೆಯನ್ನು ಟ್ರಯಂಪ್ ಹೊಂದಿದೆ.
ಬ್ರಿಟನ್‌ನ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಟ್ರಯಂಪ್, ಭಾರತದಲ್ಲಿ ಅತಿ ನೂತನ ಬೊನ್ ವಿಲ್ ಟಿ100 ಬೈಕನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 7.78 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಇತ್ತೀಚೆಗಷ್ಟೇ ಜರ್ಮನಿಯಲ್ಲಿ ನಡೆದ ಇಂಟರ್ ಮೊಟ್ ಮೋಟಾರ್ ಸೈಕಲ್ ಶೋದಲ್ಲಿ ಅನಾವರಣಗೊಂಡಿರುವ ಟ್ರಯಂಪ್ ಬೈಕ್, ಸಂಸ್ಥೆಯಿಂದ ಸ್ಟ್ರೀಟ್ ಟ್ವಿನ್ ಬಳಿಕ ಮಾರಾಟವಾಗಲಿರುವ ಎರಡನೇ ಅತ್ಯಂತ ಅಗ್ಗದ ಬೈಕ್ ಎನಿಸಿಕೊಳ್ಳಲಿದೆ.

ಟ್ರಯಂಪ್ ಥ್ರಕ್ಸ್ಟನ್ ಆರ್ ಜೊತೆ ವಿನ್ಯಾಸವನ್ನು ಹಂಚಿಕೊಂಡಿರುವ ನೂತನ ಟಿ100, 1950ರ ನೈಜ ಬೊನ್ ವಿಲ್ ಬೈಕ್ ಗಳನ್ನು ಜೀವಂತವಾಗಿರಿಸಿದೆ.

ಆಧುನಿಕ ಶೈಲಿಗೆ ತಕ್ಕಂತೆ ಬಹು ಕ್ರಿಯಾತ್ಮಕ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅನಲಾಗ್ ಸ್ಪೀಡೋಮೀಟರ್, ಅನಲಾಗ್ ಟ್ಯಾಕೋಮೀಟರ್ ಇತ್ಯಾದಿ ವ್ಯವಸ್ಥೆಗಳಿರಲಿದೆ.

ಸ್ಟ್ರೀಟ್ ಟ್ವಿನ್ ಮಾದರಿಯಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಬಳಕೆಯಾಗಲಿದೆ. ಇದರಲ್ಲಿರುವ 900 ಸಿಸಿ ಪ್ಯಾರಲಲ್ ಟ್ವಿನ್ ಮೋಟಾರು ಎಂಜಿನ್ 80 ಎನ್ ಎಂ ತಿರುಗುಬಲದಲ್ಲಿ 55 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಇದರಂತೆ ಎಲೆಕ್ಟ್ರಾನಿಕ್ ಬೈ ವೈರ್ ಜೊತೆ ವಿವಿಧ ರೈಡಿಂಗ್ ಮೋಡ್, ಟ್ರಾಕ್ಷನ್ ಕಂಟ್ರೋಲ್, ಟಾರ್ಕ್ ಅಸಿಸ್ಟ್ ಕ್ಲಚ್, ಹೊಸತಾದ ಡೇಟೈಮ್ ರನ್ನಿಂಗ್ ಲ್ಯಾಂಪ್ಸ್, ಎಲ್ ಇಡಿ ರಿಯರ್ ಲ್ಯಾಂಪ್ ಮತ್ತು ಅಂಡರ್ ಸೀಟು ಯುಎಸ್ ಬಿ ಚಾರ್ಜಿಂಗ್ ಸಾಕೆಟ್ ಲಭ್ಯವಾಗಲಿದೆ.

ಒಟ್ಟಿನಲ್ಲಿ ಟ್ರಯಂಪ್ ಟಿ100 ಮೂಲಕ ಬ್ರಿಟಿಷ್ ಕ್ಲಾಸಿಕ್ ಮೋಟಾರ್ ಸೈಕಲ್ ಚಾಲನಾ ಮಜಾ ಸವಿಯುವ ಅವಕಾಶ ದೇಶದ ಬೈಕ್ ಪ್ರೇಮಿಗಳಿಗೂ ದೊರಕಲಿದೆ.


Click it and Unblock the Notifications








