ಟ್ರಯಂಪ್ ಬೊನ್‌ವಿಲ್ಲೆ ಟಿ120 ಬಿಡುಗಡೆ; ಬೆಲೆ 8.7 ಲಕ್ಷ ರು.
ಬ್ರಿಟನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟ್ರಯಂಪ್ ಬೊನ್‌ವಿಲ್ಲೆ ಅತಿ ನೂತನ ಟಿ120 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 8.7 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಸಾಗಿದ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಬೊನ್‌ವಿಲ್ಲೆ ಟಿ120 ಈಗ ದೇಶದಲ್ಲಿ ಸ್ಥಿತಗೊಂಡಿರುವ 12 ಡೀಲರ್ ಶಿಪ್ ಗಳಿಗೆ ಅಧಿಕೃತ ಪ್ರವೇಶ ಪಡೆದಿದೆ.

ವೃತ್ತಾಕಾರದ ಹೆಡ್ ಲ್ಯಾಂಪ್, ಟ್ವಿನ್ ಪೊಡ್ ಇನ್ಸ್ಟ್ರುಮೆಂಟ್ ಕನ್ಸಾಲ್, ದೊಡ್ಡದಾದ ಟ್ಯಾಂಕ್, ಸಮತಲದ ಸೀಟು ಮುಂತಾದ ವೈಶಿಷ್ಟ್ಯಗಳು ಕ್ಲಾಸಿಕ್ ಬೊನ್ ವಿಲ್ಲೆ ಬೈಕ್ ಗಳ ನೆನಪುಗಳನ್ನು ಮರುಕಳಿಸುವಂತಿದೆ.

ದೃಶ್ಯ ವಿಸ್ಮಯವಾದ ವಿನ್ಯಾಸವನ್ನು 2015 ಟ್ರಯಂಪ್ ಬೊನ್ ವಿಲ್ಲೆ ಟಿ120 ಬೈಕ್ ನಲ್ಲಿ ಕಾಯ್ದುಕೊಳ್ಳಲಾಗಿದೆ. ಅಂತೆಯೇ ವೈರ್ ಸ್ಪೋಕ್ ಚಕ್ರಗಳು, ಫಾರ್ಕ್ ಗೈಟರ್, ಪೀಶೂಟರ್ ಶೈಲಿ ಎಕ್ಸಾಸ್ಟ್ ಕೊಳವೆಗಳು, ಕ್ರೋಮ್ ಆವರಿಸಿದ ಗ್ರಾಬ್ ರೈಲ್ ಮತ್ತು ಟೈಲ್ ಲ್ಯಾಂಪ್ ಗಳು ಇದರಲ್ಲಿದೆ.

ನೂತನ ಟ್ರಯಂಪ್ ಬೊನ್ ವಿಲ್ಲೆ ಟಿ120 ಹಿಂದಿನಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿದೆ. ಇದರಲ್ಲಿ 1200 ಸಿಸಿ ಪ್ಯಾರಲಲ್ ಟ್ವಿನ್ ಮೋಟಾರ್ ಆಳವಡಿಸಲಾಗಿದ್ದು, 105 ಎನ್ ಎಂ ತಿರುಗುಬಲದಲ್ಲಿ 80 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಉತ್ತಮ ವೇಗವರ್ಧನೆಗಾಗಿ ಟ್ರಯಂಪ್ ನ ಹೊಸ ಪೀಳಿಗೆಯ ರೈಡ್ ಬೈ ವೈರ್ ಫ್ಯೂಯಲ್ ಇಂಜೆಕ್ಷನ್ ಮತ್ತು ಎಂಜಿನ್ ನಿರ್ವಹಣಾ ವ್ಯವಸ್ಥೆಯನ್ನು ಒದಗಿಸಲಾಗಿದೆ. ಅಂತೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಹಿಂದಿನ ಮಾದರಿಗಿಂತಲೂ ಹೆಚ್ಚು ಪವರ್ ಫುಲ್ ಬೈಕ್ ನಿರ್ಮಿಸಲು ಟ್ರಯಂಪ್ ಎಂಜಿನಿಯರ್ ಗಳು ಕಾರ್ಯ ಮಗ್ನವಾಗಿದ್ದಾರೆ. ಹಾಗೆಯೇ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯು ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಬದಲಾಯಿಸಬಹುದಾದ ಎಬಿಎಸ್ ವ್ಯವಸ್ಥೆ. ರೈಡ್ ಬೈ ವೈರ್ ತಂತ್ರಜ್ಞಾನ, ಎಂಜಿನ್ ಇಂಮೊಬಿಲೈಜರ್ ಮತ್ತು ಸ್ಲಿಪ್ ಅಸಿಸ್ಟ್ ಕ್ಲಚ್ ಗಳಂತಹ ಸೌಲಭ್ಯಗಳಿರುತ್ತದೆ.

ನೂತನ ಟ್ರಯಂಪ್ ಬೊನ್ ವಿಲ್ಲೆ ಟಿ120 ರೋಂಡ್ ಮತ್ತು ರೈನ್ ಗಳೆಂಬ ಎರಡು ಚಾಲನಾ ವಿಧಗಳಲ್ಲಿ ಲಭ್ಯವಿರುತ್ತದೆ.


Click it and Unblock the Notifications








