ವಿಶ್ವದಾಖಲೆಗೆ ಸಜ್ಜಾದ ರಾಕೆಟ್ ಚಾಲಿತ ಟ್ರಯಂಪ್ ಬೈಕ್
ಅತ್ಯಂತ ಶಕ್ತಿಶಾಲಿ ಎರಡು ರಾಕೆಟ್ ಎಂಜಿನ್ ಗಳಿಂದ ನಿಯಂತ್ರಿತ ಟ್ರಯಂಪ್ ನೂತನ ಬೈಕ್, ವಿಶ್ವದ ಅತಿ ವೇಗದ ಬೈಕೆಂಬ ದಾಖಲೆ ಬರೆಯಲು ಹೊರಟಿದೆ.
ಗರಡಿಯಲ್ಲಿ ಸಜ್ಜುಗೊಂಡಿರುವ ಟ್ರಯಂಪ್ ಇನ್ ಫಾರ್ ರಾಕೆಟ್ ಸ್ಟ್ರೀಮ್ ಲೈನರ್ ಬೈಕ್ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಬೊನ್ ವಿಲ್ ಸ್ಪೀಡ್ ವೇ ಸ್ಪರ್ಧೆಯಲ್ಲಿ ನೂತನ ವಿಶ್ವ ದಾಖಲೆ ಬರೆಯಲಿದೆ.

ರೇಸ್ ದಂತಕಥೆ ಗಯ್ ಮಾರ್ಟಿನ್ ಎಂಬವರು ಟ್ರಯಂಪ್ ಬೈಕ್ ನ ಸಾರಥಿ ಎನಿಸಲಿದ್ದು, ವಿಶ್ವದಾಖಲೆಯತ್ತ ಮುನ್ನಡೆಸಲಿದ್ದಾರೆ.

ಇದು 25.5 ಅಡಿ ಉದ್ದದ ಕೆಲ್ವಾರ್ ಮೆಷಿನ್ ಗಳು, ಮೆಥನಾಲ್ ಚಾಲಿತ ಎರಡು ರಾಕೆಟ್ ಎಂಜಿನ್ ಗಳನ್ನು ಪಡೆದುಕೊಂಡಿದೆ.

ಉಟಾಹದಲ್ಲಿ ನಡೆಯಲಿರುವ ಬೊನ್ ವಿಲ್ ಸ್ಪೀಡ್ ವೇ ಸ್ಪರ್ಧೆಯಲ್ಲಿ ಟ್ರಯಂಪ್ ಬೈಕ್ ಸ್ಪರ್ಧೆಗಿಳಿಯಲಿದ್ದು, ವಿಶ್ವದ ಅತಿ ವೇಗದ ಮೋಟಾರುಬೈಕ್ ಎಂದೆನಿಸಿಕೊಳ್ಳಲಿದೆ.

2010ರಲ್ಲಿ ಗಂಟೆಗೆ 605.698 ಕೀ.ಮೀ. ವೇಗದಲ್ಲಿ ಸಂಚರಿಸಿರುವುದು ಇದುವರೆಗಿನ ದಾಖಲೆಯಾಗಿದೆ. ಈ ದಾಖಲೆಯನ್ನು ರಾಕಿ ರಾಬಿನ್ಸನ್ ಎಂಬವರು ಟಾಪ್ ಒಯಿಲ್-ಆ್ಯಕ್ ಆ್ಯಟಕ್ ಸ್ಟ್ರೀಮ್ ಲೈನರ್ ಸಹಾಯದಿಂದ ಸ್ಥಾಪಿಸಿದ್ದರು.

ಇದಕ್ಕೂ ಮುನ್ನ 2013ರಲ್ಲಿ ಮೊದಲ ಬಾರಿಗೆ ಟ್ರಯಂಪ್ ಮೋಟಾರ್ ಬೈಕ್ ದಾಖಲೆ ಮಾಡುವ ಮೊದಲ ಪ್ರಯತ್ನ ಮಾಡಿತ್ತು. ಬಳಿಕ ಕಳೆದ ವರ್ಷ ನಡೆದ ಎರಡನೇ ಪ್ರಯತ್ನದಲ್ಲಿ ಅಧಿಕೃತ ರೇಸ್ ಗಿಂತಲೂ ಮೂರು ವಾರಗಳಷ್ಟು ಹಿಂದೆ ಗಯ್ ಮಾರ್ಟಿನ್ ಗಾಯಗೊಂಡಿರುವುದು ಹಿನ್ನಡೆಕ್ಕೊಳಗಾಗಿತ್ತು.

25.5 ಅಡಿ ಉದ್ದದ ಟ್ರಯಂಪ್ ಇನ್ ಫಾರ್ ರಾಕೆಟ್ ಸ್ಟ್ರೀಮ್ ಲೈನರ್ ಕಾರ್ಬನ್ ಕೆಲ್ವಾರ್ ಮೊನಸ್ಟರ್ ಎರಡು ಮೆಥನಾಲ್ ನಿಯಂತ್ರಿತ ಟರ್ಬೊಚಾರ್ಜ್ಡ್ ಟ್ರಯಂಪ್ ರಾಕೆಟ್ III ಎಂಜಿನ್ ಜೊತೆಯಾಗಿ 9000 ಆರ್ ಪಿಎಂ ನಲ್ಲಿ ಬರೋಬ್ಬರಿ 1000 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಂಪಿಯನ್ ರೇಸರ್, ಟ್ರಯಂಪ್ ಇನ್ ಫಾರ್ ರಾಕೆಟ್ ಸ್ಟ್ರೀಮ್ ಲೈನರ್ ನಲ್ಲಿ ದಾಖಲೆ ಬರೆಯಲು ಬಹಳ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.

ಇತಿಹಾಸದತ್ತ ಕಣ್ಣಾಯಿಸಿದಾಗ 1955ರಿಂದ 1970ರ ಅವಧಿಯಲ್ಲಿ ವಿಶ್ವದ ಅತಿ ವೇಗದ ಮೋಟಾರ್ ಸೈಕಲ್ ಎಂಬ ಪಟ್ಟವನ್ನು ಟ್ರಯಂಪ್ ಆಲಂಕರಿಸಿತ್ತು.


Click it and Unblock the Notifications








