ಟಿವಿಸ್ ಸ್ಕೂಟರ್ ಗಳನ್ನು ಖರೀದಿಸಲು ಇದುವೇ ಸಕಾಲ!
ಬೈಕ್ ಹಾಗೂ ಸ್ಕೂಟರ್ ಶ್ರೇಣಿಗಳಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನವನ್ನು ಕಾಪಾಡಿಕೊಂಡಿರುವ ದೇಶದ ಮುಂಚೂಣಿಯ ಟಿವಿಎಸ್ ಮೋಟಾರ್ಸ್ ಸಂಸ್ಧೆಯು ಆಕರ್ಷಕ ಆಫರ್ ಗಳೊಂದಿಗೆ ಮುಂದೆ ಬಂದಿದೆ.
ಹಾಗೊಂದು ವೇಳೆ ನೀವು ಸಹ ಟಿವಿಎಸ್ ಸ್ಕೂಟರ್ ಖರೀದಿಸಲು ಬಯಸುವುದಾದ್ದಲ್ಲಿ ಇದೇ ಸಕಾಲವಾಗಿದೆ. ಪ್ರಸ್ತುತ ಈ ಆಫರ್ ಗಳು ಟಿವಿಎಸ್ ಸ್ಕೂಟರ್ ಶ್ರೇಣಿಗಳಿಗೆ ಸೀಮಿತವಾಗಿದ್ದು, ಬೈಕ್ ಗಳಿಗೆ ಅನ್ವಯವಾಗುವುದಿಲ್ಲ.

ಟಿವಿಎಸ್ ಮೋಟಾರ್ಸ್ ಸ್ಕೂಟರ್ ಗಳನ್ನು ಖರೀದಿಸುವಾಗ ಗರಿಷ್ಠ 2,500 ರುಪಾಯಿಗಳ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ದೇಶದೆಲ್ಲ ಟಿವಿಎಸ್ ಡೀಲರ್ ಶಿಪ್ ಗಳ ಮುಖಾಂತರ ಆಕ್ಸೆಸರಿಗಳನ್ನು ಕೊಡಲಾಗುವುದು. ಇದು ಹೆಲ್ಮೆಟ್, ಸ್ಟೀಲ್ ಗಾರ್ಡ್, ಹ್ಯಾಂಡಲ್ ಗ್ರಿಪ್, ಸೀಟು ಕವರ್, ಲೈಸನ್ಸ್ ಪ್ಲೇಟ್ ಮತ್ತು ಪಾರ್ಕಿಂಗ್ ಕವರ್ ಗಳನ್ನು ಹೊಂದಿರಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಟಿವಿಎಸ್ ಸಂಸ್ಥೆಯು ವೆಗೊ, ಜೂಪಿಟರ್, ಸ್ಕೂಟಿ ಪೆಪ್ ಪ್ಲಸ್ ಮತ್ತು ಸ್ಕೂಟಿ ಜೆಸ್ಟ್ 110 ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಈ ಎಲ್ಲ ನಾಲ್ಕು ಸ್ಕೂಟರ್ ಗಳ ಖರೀದಿ ವೇಳೆಯಲ್ಲಿ ಆಫರ್ ಗಳು ಲಭ್ಯವಾಗಲಿದೆ. ಟಿವಿಎಸ್ ಡೀಲರ್ ಗಳು ಆಫರ್ ಗಳನ್ನು ನೀಡುತ್ತಿದ್ದು ಸೀಮಿತ ಅವಧಿಯ ವರೆಗೆ ಮಾತ್ರ ಲಭ್ಯವಾಗಲಿದೆ.

ಮುಂಬರುವ ದಿನಗಳಲ್ಲಿ ಟಿವಿಎಸ್ ಬೈಕ್ ಗಳಿಗೂ ಆಫರ್ ಗಳು ಲಭ್ಯವಾಗಲಿದೆ. ಆದರೆ ಹೊಸತಾಗಿ ಬಿಡುಗಡೆಯಾಗಿರುವ ಅಪಾಚಿ ಆರ್‌ಟಿಆರ್ 4ವಿ ಬೈಕ್ ಗೆ ಆಫರ್ ಲಭ್ಯವಾಗುವ ಸಾಧ್ಯತೆ ಕಡಿಮೆಯಾಗಿದೆ.


Click it and Unblock the Notifications








