ಹಬ್ಬದ ಸಂಭ್ರಮಕ್ಕೆ ಕಡಿಮೆ ಬಡ್ಡಿದರದಲ್ಲಿ ಟಿವಿಎಸ್ ಹಣಕಾಸು ನೆರವು
ಹಬ್ಬದ ಆವೃತ್ತಿ ಆರಂಭವಾಗಿರುವಂತೆಯೇ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು ಕಾರು ಹಾಗೂ ಬೈಕ್ ಗಳಿಗೆ ಆಕರ್ಷಕ ಆಫರ್ ಗಳನ್ನು ಮುಂದಿಡುತ್ತಿದೆ. ಇದರಿಂದ ಭಾರತದ ಜನಪ್ರಿಯ ಟ್ವಿವಿಎಸ್ ಸಂಸ್ಥೆಯು ಹೊರತಾಗಿಲ್ಲ. ಟಿವಿಎಸ್ ಈಗ ಕಡಿಮೆ ಬಡ್ಡಿದರದಲ್ಲಿ ದ್ವಿಚಕ್ರ ವಾಹನಗಳಿಗೆ ವಿಶೇಷ ಸ್ಕೀಮ್ ಮುಂದಿಟ್ಟಿದೆ. ಈ ಸಂಬಂಧ ಸಮಗ್ರ ಮಾಹಿತಿಯನ್ನು ಲೇಖನದಲ್ಲಿ ಕೊಡಲಾಗಿದೆ.

ಟಿವಿಎಸ್ ದ್ವಿಚಕ್ರ ವಾಹನಗಳನ್ನು ಖರೀದಿಸುವಾಗ ವಿಶೇಷವಾದ 3.99 ಬಡ್ಡಿದರದಲ್ಲಿ ಹಣಕಾಸು ನೆರವನ್ನು ಒದಗಿಸಲಾಗುವುದು.

ಗ್ರಾಮೀಣ ಪ್ರದೇಶಗಳಲ್ಲಿ ಚೆಕ್ ರಹಿತ ಇಎಂಐ ಸ್ಕೀಮ್ ಸೇವೆಯನ್ನು ಟಿವಿಎಸ್ ನೀಡಲಿದೆ. ಇದು ಬ್ಯಾಂಕ್ ಖಾತೆ ಇಲ್ಲದ ಗ್ರಾಹಕರಿಗೂ ಟಿವಿಎಸ್ ದ್ವಿಚಕ್ರ ವಾಹನ ಖರೀಸಲು ನೆರವಾಗಲಿದೆ.

ಗ್ರಾಮೀಣ ಪ್ರದೇಶದ ಗ್ರಾಹಕರು ಕ್ಯಾಶ್ ಮೂಲಕವೂ ಇಎಂಐ ಪಾವತಿಸುವ ವಿಶೇಷ ಸ್ಕೀಮ್ ಟಿವಿಎಸ್ ಒದಗಿಸುತ್ತಿದೆ.

ಹಬ್ಬದ ಸಂಭ್ರಮದ ಆವೃತ್ತಿಯು ಧನಾತ್ಮಕ ಪರಿಣಾಮ ಬೀರುವ ಭರವಸೆಯನ್ನು ಟಿವಿಎಸ್ ವ್ಯಕ್ತಪಡಿಸಿದೆ. ಇದಕ್ಕೂ ಮೊದಲು ಗಣೇಶ ಚತುರ್ಥಿ ಹಾಗೂ ಓಣಂ ಹಬ್ಬದ ವೇಳೆಯಲ್ಲಿ ಗಮನಾರ್ಹ ಮಾರಾಟವನ್ನು ಕಾಪಾಡಿಕೊಂಡಿತ್ತು.

ಟಿವಿಎಸ್ ಅಪಾಚಿ ಆರ್ ಟಿಆರ್ 200
ಬೆಲೆ ಮಾಹಿತಿ: 88,990 ರು. (ಎಕ್ಸ್ ಶೋ ರೂಂ ದೆಹಲಿ)

ಟಿವಿಎಸ್ ವಿಕ್ಟರ್
ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಬ್ರೇಕ್ ಗಳಲ್ಲಿ ಲಭ್ಯ,
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಡಿಸ್ಕ್: 52,715 ರು.
ಡ್ರಮ್: 50,715 ರು.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್
ಹೊಸ ಸ್ಪಾಟ್ ಲೈಟ್ ವೈಟ್ ಬಣ್ಣದಲ್ಲಿ ಲಭ್ಯ.
ಕಿಕ್ ಸ್ಟ್ಯಾರ್ಟ್, ಅಲಾಯ್ ವೆರಿಯಂಟ್ ಬೆಲೆ
44,300 ರು. (ಎಕ್ಸ್ ಶೋ ರೂಂ ದೆಹಲಿ)

ಟಿವಿಎಸ್ ಸ್ಪೋರ್ಟ್
ಬ್ಲ್ಯಾಕ್ ಸಿಲ್ವರ್ ಕಲರ್
ಕಿಕ್ ಸ್ಟ್ಯಾರ್ಟ್, ಸ್ಪೋಕ್ ವೆರಿಯಂಟ್ ಬೆಲೆ
37,200 ರು. (ಎಕ್ಸ್ ಶೋ ರೂಂ ದೆಹಲಿ)

ಟಿವಿಎಸ್ ಜೂಪಿಟರ್
ಬೇಸ್, ಝಡ್ ಎಕ್ಸ್ ಮತ್ತು ಮಿಲಿಯನ್ ಆರ್ (ಡಿಸ್ಕ್ ಬ್ರೇಕ್)
ಪ್ರಾರಂಭಿಕ ಬೆಲೆ: 49,034 ರು. (ಎಕ್ಸ್ ಶೋ ರೂಂ ದೆಹಲಿ)

ಟಿವಿಎಸ್ ಸ್ಕೂಟಿ ಜೆಸ್ಟ್ 110 ಸಿಸಿ
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
46,113 ರು.


Click it and Unblock the Notifications








