ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 'ಚಾಕೊಲೇಟ್ ಗೋಲ್ಡ್' ಆವೃತ್ತಿ ಬಿಡುಗಡೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಮೋಟಾರು ಇಂಡಿಯಾ, ತನ್ನ ಜಪ್ರಿಯ ಸ್ಟಾರ್ ಸಿಟಿ ಪ್ಲಸ್ ಚಾಕೊಲೇಟ್ ಗೋಲ್ಡ್ ಎಡಿಷನ್ ಮಾದರಿಯನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 49,234 ರು. (ಎಕ್ಸ್ ಶೋ ರೂಂ ದೆಹಲಿ)

ನೂತನ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಚಾಕೊಲೇಟ್ ಗೋಲ್ಡ್ ಆವೃತ್ತಿಯು ಆಯ್ದ ಶೋ ರೂಂಗಳಲ್ಲಿ ಮಾತ್ರ ಲಭ್ಯವಾಗಲಿದೆ. ಈ ಮೂಲಕ ಹೆಚ್ಚು ಬೇಡಿಕೆಯನ್ನು ಕಾಪಾಡಿಕೊಳ್ಳುವ ಇರಾದೆಯಲ್ಲಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 'ಚಾಕೊಲೇಟ್ ಗೋಲ್ಡ್' ಆವೃತ್ತಿ ಬಿಡುಗಡೆ

ನೂತನ ಪ್ರೀಮಿಯಂ ಚಾಕೊಲೇಟ್ ಗೋಲ್ಡ್ ಬಣ್ಣದ ಹೊರತಾಗಿ ಮ್ಯಾಚ್ ಟೈಟಾನಿಯಂ ಗ್ರೇ ಎಡಿಷನ್ ಮತ್ತು ಆಕರ್ಷಕ ಗೋಲ್ಡ್ ಎಡಿಷನ್ ಮಾದರಿಯಲ್ಲೂ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಆವೃತ್ತಿಯು ಲಭ್ಯವಾಗಲಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 'ಚಾಕೊಲೇಟ್ ಗೋಲ್ಡ್' ಆವೃತ್ತಿ ಬಿಡುಗಡೆ

ಅಂದ ಹಾಗೆ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಸ್ಟ್ಯಾಂಡರ್ಡ್ ಸೆಲೆಬ್ರಿಟಿ ಸ್ಕಾರ್ಲೆಟ್, ಓಸ್ಕರ್ ಬ್ಲ್ಯಾಕ್ ಮತ್ತು ಶೋ ಸ್ಟಾಪ್ಪರ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲೂ ಲಭ್ಯವಿರುತ್ತದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 'ಚಾಕೊಲೇಟ್ ಗೋಲ್ಡ್' ಆವೃತ್ತಿ ಬಿಡುಗಡೆ

ಭಾರತ ಮಾರುಕಟ್ಟೆಯಲ್ಲಿ ಗ್ರಾಹಕನ ಖರೀದಿ ಬಯಕೆಗಳಲ್ಲಿ ಬಣ್ಣವು ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಗೋಲ್ಡ್ ಮತ್ತು ಮ್ಯಾಟ್ ಚಾಕೊಲೇಟ್ ಬ್ರೌನ್ ಬಣ್ಣದ ಸಂಯೋಜನೆಯಾಗಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 'ಚಾಕೊಲೇಟ್ ಗೋಲ್ಡ್' ಆವೃತ್ತಿ ಬಿಡುಗಡೆ

ನೂತನ ಚಾಕೊಲೇಟ್ ಗೋಲ್ಡ್ ಎಡಿಷನ್ ನ ಟ್ಯಾಂಕ್ ಮತ್ತು ಬಾಡಿ ಪ್ಯಾನೆಲ್ ಗಳಲ್ಲಿ ಚಾಕೊಲೇಟ್ ಕಂದು ಬಣ್ಣವನ್ನು ಬಳಿಯಲಾಗಿದೆ. ಇದರ ಜೊತೆಗೆ ಚಿನ್ನದ ಗ್ರಾಫಿಕ್ಸ್ ಗಳನ್ನು ಬಳಿಯಲಾಗಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 'ಚಾಕೊಲೇಟ್ ಗೋಲ್ಡ್' ಆವೃತ್ತಿ ಬಿಡುಗಡೆ

ಚಿನ್ನದ ಬಣ್ಣದ ಅಲಾಯ್ ವೀಲ್ ನೂತನ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ವಿಶೇಷ ಆವೃತ್ತಿಗೆ ಪ್ರೀಮಿಯಂ ಲುಕ್ ನೀಡಲಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 'ಚಾಕೊಲೇಟ್ ಗೋಲ್ಡ್' ಆವೃತ್ತಿ ಬಿಡುಗಡೆ

ಹಾಗಿದ್ದರೂ ಅಂದತೆಯ ಹೊರತಾಗಿ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಇದು 110 ಸಿಸಿ ಇಕೊಥ್ರಸ್ಟ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 'ಚಾಕೊಲೇಟ್ ಗೋಲ್ಡ್' ಆವೃತ್ತಿ ಬಿಡುಗಡೆ

ಇದರಲ್ಲಿರುವ 109.7 ಸಿಸಿ ಎಂಜಿನ್ 8.7 ಎನ್ ಎಂ ತಿರುಗುಬಲದಲ್ಲಿ 8.3 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 4 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 'ಚಾಕೊಲೇಟ್ ಗೋಲ್ಡ್' ಆವೃತ್ತಿ ಬಿಡುಗಡೆ

ಇನ್ನುಳಿದಂತೆ ಡಿಜಿಟಲ್ ಫ್ಯೂಯಲ್ ಗೇಜ್, ಲಾಂಗ್ ವೀಲ್ ಬೇಸ್, ಹಿಂಬದಿಯಲ್ಲಿ ಅಗಲವಾದ ಚಕ್ರಗಳು, ಅನಲಾಗ್ ಸ್ಪೀಡೋಮೀಟರ್ ಇತ್ಯಾದಿ ವೈಶಿಷ್ಟ್ಯಗಳು ಇರಲಿದೆ.

More from DriveSpark

Article Published On: Wednesday, May 18, 2016, 13:18 [IST]
English summary
TVS Star City+ Available In New Colour — Is It The One You Want?
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+