ಸ್ಪ್ಲೆಂಡರ್, ಡ್ರೀಮ್ ಸಿರೀಸ್‌ಗೆ ಟಕ್ಕರ್; ಟಿವಿಎಸ್ ವಿಕ್ಟರ್ 1 ಲಕ್ಷ ಮೈಲುಗಲ್ಲು
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಮೋಟಾರು ಕಂಪನಿ, ಬಿಡುಗಡೆ ಮಾಡಿರುವ ಹೊಚ್ಚ ಹೊಸ ವಿಕ್ಟರ್ ಬೈಕ್ ಕೇವಲ ಒಂಬತ್ತು ತಿಂಗಳುಗಳ ಅವಧಿಯಲ್ಲೇ ಒಂದು ಲಕ್ಷ ಮಾರಾಟ ಮೈಲುಗಲ್ಲನ್ನು ತಲುಪುವ ಮೂಲಕ ಪ್ರಯಾಣಿಕ ಬೈಕ್ ವಿಭಾಗದಲ್ಲಿ ಹೀರೊ, ಹೋಂಡಾ ಸಂಸ್ಥೆಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಈ ಸಂಬಂಧ ಟಿವಿಎಸ್ ವಿಕ್ಟರ್ ಬಗ್ಗೆ ನಮ್ಮ ಡ್ರೈವ್ ಸ್ಪಾರ್ಕ್ ನಲ್ಲಿ ಪ್ರಕಟಿಸಲಾದ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್ ವರದಿಯನ್ನು ಇಲ್ಲಿ ಓದಲು ಮರೆಯದಿರಿ.

ತಿಂಗಳಲ್ಲಿ ಸರಾಸರಿ 10,000 ಯುನಿಟ್ ಗಳಷ್ಟು ಮಾರಾಟ ಕಾಪಾಡಿಕೊಂಡಿರುವ ಟಿವಿಎಸ್ ವಿಕ್ಟರ್, ಬಿಡುಗಡೆಯಾದ ಒಂಬತ್ತು ತಿಂಗಳ ಅವಧಿಯಲ್ಲೇ ಒಂದು ಲಕ್ಷ ಯುನಿಟ್ ಗಳ ಮಾರಾಟವನ್ನು ದಾಟಿದೆ.

ಪ್ರಯಾಣಿಕ 110 ಸಿಸಿ ವಿಭಾಗದಲ್ಲಿ ಹೀರೊ ಪ್ಯಾಶನ್ ಪ್ರೊ, ಸ್ಪ್ಲೆಂಡರ್, ಹೋಂಡಾ ಲಿವೊ ಮತ್ತು ಡ್ರೀಮ್ ಸಿರೀಸ್ ಗಳಂತಹ ಸಾಲು ಸಾಲು ಬೈಕ್ ಗಳಿಂದ ಸವಾಲನ್ನು ಎದುರಿಸುತ್ತಿದ್ದರೂ ತನ್ನದೇ ಆದ ವಿಶಿಷ್ಟತೆಯನ್ನು ಕಾಪಾಡಿಕೊಂಡಿರುವ ಟಿವಿಎಸ್ ವಿಕ್ಟರ್ ಗಮನಾರ್ಹ ಮಾರಾಟವನ್ನು ಸಾಧಿಸುವ ಲ್ಲಿ ಯಶ ಕಂಡಿದೆ.

ದೇಶೀಯ ಮೋಟಾರ್ ಸೈಕಲ್ ಮಾರಾಟದಲ್ಲಿ ಶೇಕಡಾ 8ರಷ್ಟು ಶೇರು ಗಿಟ್ಟಿಸಿಕೊಂಡಿರುವ ಟಿವಿಎಸ್ ಈಗ ಈ ವಿಭಾಗದಲ್ಲಿ ಶೇಕಡಾ 10ರಿಂದ 12ರಷ್ಟು ಮಾರಾಟ ಶೇರನ್ನು ಗುರಿಯಿರಿಸಿಕೊಂಡಿದೆ.

ಒಂದು ಪ್ರಯಾಣಿಕ ಬೈಕ್ ಗೆ ಬೇಕಾದ ಎಲ್ಲ ಸವಲತ್ತುಗಳನ್ನು ಟಿವಿಎಸ್ ವಿಕ್ಟರ್ ಪಡೆದಿದೆ. ಸಾಂಪ್ರದಾಯಿಕ ಜೊತೆ ಆಧುನಿಕ ಶೈಲಿ, ಗುಣಮಟ್ಟತೆ, ಹ್ಯಾಂಡ್ಲಿಂಗ್, ನಿರ್ವಹಣೆ ಮತ್ತು ಇಂಧನ ಕ್ಷಮತೆಯಲ್ಲಿ ಪರಿಣಾಮಕಾರಿಯೆನಿಸಿಕೊಂಡಿದೆ.

110 ಸಿಸಿ 3 ವಾಲ್ವ್ ಸಿಂಗಲ್ ಸಿಲಿಂಡರ್ ಇಕೊಥ್ರಸ್ಟ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಟಿವಿಎಸ್ ವಿಕ್ಟರ್ 9.4 ಎನ್ ಎಂ ತಿರುಗುಬಲದಲ್ಲಿ 9.4 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಒಳಗೊಂಡಿದೆ.

ಟಿವಿಎಸ್ ವಿಕ್ಟರ್ ಹಜಾರ್ಡ್ ಲೈಟ್ ಗಳಂತಹ ನಾವೀನ್ಯ ಸೌಲಭ್ಯಗಳನ್ನು ಒಳಗೊಂಡಿದ್ದು, ಪ್ರತಿ ಲೀಟರ್ ಗೆ 76 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನುಳಿದಂತೆ ಟ್ಯೂಬುಲರ್ ಸ್ಟೀಲ್ ಫ್ರೇಮ್, ಟೆಲಿಸ್ಕಾಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಡ್ಯುಯಲ್ ಸಿರೀಸ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ವ್ಯವಸ್ಥೆಯಿದೆ.

2016 ಟಿವಿಎಸ್ ವಿಕ್ಟರ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಡ್ರಮ್ ಬ್ರೇಕ್: 50,715 ರು.
ಡಿಸ್ಕ್ ಬ್ರೇಕ್: 52,715 ರು.

ಆರು ಆಕರ್ಷಕ ಬಣ್ಣಗಳು
ಬ್ಲಿಸ್ ಫುಲ್ ಬ್ಲೂ,
ಜನರಸ್ ಗ್ರೇ,
ಬ್ಯೂಟಿಫಿಕ್ ಬ್ಲ್ಯಾಕ್ ಸಿಲ್ವರ್,
ಸೆರೆನ್ ಸಿಲ್ವರ್,
ರೆಸ್ಟ್ ಫುಲ್ ರೆಡ್ ಮತ್ತು
ಬಾಲನ್ಸಡ್ ಬ್ಲ್ಯಾಡ್ ರೆಡ್

ಇವನ್ನೂ ಓದಿ
01. ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ
02. ಹೊಸ ಡ್ರೈವಿಂಗ್ ಅನುಭೂತಿಯೊಂದಿಗೆ ಮನ ಗೆದ್ದ 'ಹೋಂಡಾ ನವಿ'
03. ನೂತನ ಟಿವಿಎಸ್ ಅಪಾಚಿ ವಿಮರ್ಶೆ; ಮೋಜು, ಮಸ್ತಿಯ ರೇಸಿಂಗ್ ಥ್ರಿಲ್ಲರ್ ಬೈಕ್


Click it and Unblock the Notifications








