Subscribe to DriveSpark

ವಿವಿಧ ಬಣ್ಣಗಳಲ್ಲಿ ಖರೀದಿ ಲಭ್ಯವಿದೆ ಕವಾಸಕಿ ಝಡ್650 ಸೂಪರ್ ಬೈಕ್

Written By:

ಸೂಪರ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕವಾಸಕಿ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದ್ದ ಝಡ್650 ಬೈಕ್ ಆವೃತ್ತಿಯನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಬಣ್ಣಗಳಲ್ಲಿ ಪರಿಚಯಿಸುತ್ತಿದೆ.

ಸದ್ಯ ಮಾರಕಟ್ಟೆಯಲ್ಲಿ ಕವಾಸಕಿ ಝಡ್650 ಮಾದರಿಯೂ ಕಪ್ಪು ಮತ್ತು ಹಸಿರು ಮಿಶ್ರಿತ ಬಣ್ಣಗಳೊಂದಿಗೆ ಲಭ್ಯವಿದ್ದು, ಇದೀಗ ಕಪ್ಪು ಮತ್ತು ಹಳದಿ ಮಿಶ್ರಿತ ಬಣ್ಣದೊಂದಿಗೆ ಅಭಿವೃದ್ಧಿ ಮತ್ತೊಂದು ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಇನ್ನು ಯಾಂತ್ರಿಕ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡದ ಕವಾಸಕಿಯೂ ಹೊಸ ಬಣ್ಣದ ಆವೃತ್ತಿಯನ್ನು ಮೊದಲು ಜಪಾನ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಪರಿಚಯಿಸಿದ್ದು, ತದನಂತರವಷ್ಟೇ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಝಡ್650 ಹೊಸ ಬೈಕ್ ಬಿಡುಗಡೆ ಮಾಡಲಿದೆ.

ಸೂಪರ್ ಬೈಕ್ ಆವೃತ್ತಿಗಳಲ್ಲಿ ಝಡ್650 ಆವೃತ್ತಿ ಮಧ್ಯಮ ಕ್ರಮಾಂಕದ ಬೈಕ್ ಇದಾಗಿದ್ದು, 650 ಸಿಸಿ ಪ್ಯಾರಾಲೆಲ್ ಟ್ವಿನ್ ಎಂಜಿನ್‌ನೊಂದಿಗೆ ಅಭಿವೃದ್ಧಿಗೊಂಡಿದೆ.

ಹೀಗಾಗಿ 67 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಝಡ್650 ಬೈಕ್, 6-ಸ್ಪೀಡ್ ಗೇರ್‍‌ಬಾಕ್ಸ್ ಹಾಗೂ ಸ್ಟ್ಯಾಂಡರ್ಡ್ ಸ್ಪಿಪ್ಲರ್ ಕ್ಲಚ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಇದರೊಂದಿಗೆ ಎಬಿಎಸ್ ತಂತ್ರಜ್ಞಾನದೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದ ಚಕ್ರದಲ್ಲಿ ಡ್ಯುಯಲ್ 300ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ ಸಿಂಗಲ್ ಪಿಸ್ಟನ್ ಕ್ಲಿಪರ್ ಗ್ರಿಪ್ ಹೊಂದಿರುವ 220 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

ಸುಧಾರಿತ ತಂತ್ರಜ್ಞಾನ ಅಳವಡಿಕೆ ಹಿನ್ನೆಲೆ ಝಡ್650 ಬೆಲೆಗಳು ದುಬಾರಿ ಎನಿಸಲಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.5.19 ಲಕ್ಷ ಲಭ್ಯವಿದೆ. ಆದರೂ ಝಡ್650 ಬೆಲೆಗಳನ್ನು ಇತರೆ ಸೂಪರ್ ಬೈಕ್‌ಗಳಿಗೆ ಹೋಲಿಕೆ ಮಾಡಿದಲ್ಲಿ ಇದು ಕಡಿಮೆ ಎಂದು ಹೇಳಬಹದು.

English summary
Read in Kannada about Kawasaki Z650 Receives Two New Colour Schemes For 2018.
Story first published: Monday, July 17, 2017, 11:22 [IST]
Please Wait while comments are loading...

Latest Photos