ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ; ಬೆಲೆ, ವಿವರ ಮತ್ತು ಚಿತ್ರಗಳು

Written By:

ಒಂದು ವರ್ಷದ ಹಿಂದೆ ಎಸ್ಆರ್ 150 ಸ್ಕೂಟರ್ ಭಾರತದ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿ ಎಲ್ಲರ ಉಬ್ಬೇರಿಸುವಂತೆ ಮಾಡಿದ್ದ ಎಪ್ರಿಲಿಯಾ ಕಂಪನಿ, ಈಗ ಮತ್ತೆ ಸದ್ದು ಮಾಡಲು ಬರುತ್ತಿದೆ.

To Follow DriveSpark On Facebook, Click The Like Button
ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ

ಕೆಲವೇ ತಿಂಗಳ ಹಿಂದೆ ಬಿಡುಗಡೆಗೊಂಡ ಎಪ್ರಿಲಿಯಾ ಈಗ ರೇಸ್ ಆವೃತಿಯಲ್ಲಿ ಮತ್ತೆ ಜನರ ಮನ ಗೆಲ್ಲಲು ಬರುತ್ತಿದೆ. ಹೊಸ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿಯ ಬೆಲೆ ಸ್ಟ್ಯಾಂಡರ್ಡ್ ಆವೃತಿಗಿಂತ ಕೊಂಚ ದುಬಾರಿ ಇದ್ದು, ರೂ. 70,288 ರೂ ಎಕ್ಸ್ ಶೋರೂಂ (ಮುಂಬೈ) ಬೆಲೆ ಇದೆ.

ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ

ಕೇವಲ ರೂ 65,000 ( ದೆಹಲಿ ಎಕ್ಸ್ ಶೋ ರೂಂ )ಗೆ ಬಿಡುಗಡೆ ಗೊಂಡಿದ್ದ ಈ ಬೈಕ್ ಭಾರತದ ಸ್ಕೂಟರ್ ಮಾರುಕಟ್ಟೆಯಲ್ಲಿ ಮಾಡಿದ ಮೋದಿ ಅಷ್ಟ್ ಇಷ್ಟ್ ಅಲ್ಲ.

ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ

ಕಳೆದ ವರ್ಷ ಎರಡು ಬಾರಿ ಅತ್ಯುತ್ತಮ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಎಪ್ರಿಲಿಯಾ ಗೇರ್ ವಿಭಾಗದಲ್ಲಿ ಸುಧಾರಣೆ ತಂದಿದ್ದು ಇದರಿಂದಾಗಿ ಹೆಚ್ಚು ಇಂಧನ ಉಪಯೋಗಿಸದೆ ಸ್ಕೂಟರ್ ನ ವೇಗ ಹೆಚ್ಚಿಸಬಹುದಾಗಿದೆ.

ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ

ಸ್ಕೂಟರ್ ನಲ್ಲಿ ಮತ್ತು ಹಲವು ಬದಲಾವಣೆಗಳನ್ನು ತರಲಾಗಿದ್ದು, ಕೆಂಪು ಬಣ್ಣದ ಅಲಾಯ್ ಚಕ್ರಗಳನ್ನು ಇರಿಸಲಾಗಿದೆ, ಮುಂಬಾಗದಲ್ಲಿ ಬಂಗಾರದ ಬಣ್ಣದ ಬ್ರೇಕ್ ಕ್ಯಾಲಿಪೆರ್, ಕಪ್ಪು ಬಣ್ಣದ ರಬ್ಬರ್ ಫುಟ್ ಮ್ಯಾಟ್ ಹಾಕಲಾಗಿದೆ.

ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ

ಸ್ಕೂಟರ್ ನ ಒಟ್ಟಾರೆ ವಿನ್ಯಾಸ ಸ್ಟ್ಯಾಂಡರ್ಡ್ ಆವೃತಿಯಂತೆ ಇದ್ದರೂ ಸಹ ಯಾಂತ್ರಿಕ ವಿಭಾಗದಲ್ಲಿ ಹಾಗೂ ಕಾಸ್ಮೆಟಿಕ್ ವಿಭಾಗದಲ್ಲಿ ರೇಸ್ ಆವೃತಿ ಹೊಸತನ ಪಡೆದುಕೊಂಡಿದೆ.

ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ

ಕಾಸ್ಮೆಟಿಕ್ ವಿಭಾಗದಲ್ಲಿ ಹೊಸ ರೇಸ್ ಆವೃತಿಯು ಎಪ್ರಿಲಿಯಾ ಮೊಟೊಜಿಪಿ ಮೋಟಾರ್ ಸೈಕಲ್ ಇಂದ ಪ್ರೇರಿತವಾದ ಸ್ಕೂಟರ್ ಆಗಿದ್ದು, ಬೂದುಬಣ್ಣದಲ್ಲಿ ಅಲಂಕಾರಗೊಂಡಿದೆ.

ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ

ಈ ಸ್ಕೂಟರ್ ನ ಮುಂಬಾಗದಲ್ಲಿ ಟೆಲೆಸ್ಕೋಪಿಕ್ ಫೋರ್ಕ್ಸ್ ಬಳಸಲಾಗಿದ್ದು, 14 ಇಂಚಿನ ಚಕ್ರಗಳನ್ನು ಉಪಯೋಗಿಸಲಾಗಿದೆ. 140 ಎಂಎಂ ನ ರಿಯರ್ ಡ್ರಮ್ ಇರಿಸಲಾಗಿದ್ದು, ಟೈಯರ್ ನ ಗಾತ್ರ 120/70 ಎಂದು ಹೇಳಲಾಗಿದೆ. ಎಂಜಿನ್ ಬಗ್ಗೆ ಹೇಳುವುದಾದರೆ ಎಪ್ರಿಲಿಯಾ ಎಸ್ಆರ್ 150, 154.4 ಸಿಸಿ ಸಾಮರ್ಥ್ಯದ ಸ್ಕೂಟರ್ ಆಗಿದ್ದು, 11.4ಎನ್ಎಂ ತಿರುಗುಬಲದಲ್ಲಿ 10 ಅಶ್ವಶಕ್ತಿಯಷ್ಟು ಶಕ್ತಿ ಉತ್ಪಾದಿಸಲಿದೆ.

ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ

ಈ ಸ್ಕೂಟರ್ ನ ಮುಂಬಾಗದಲ್ಲಿ ಟೆಲೆಸ್ಕೋಪಿಕ್ ಫೋರ್ಕ್ಸ್ ಬಳಸಲಾಗಿದ್ದು, 14 ಇಂಚಿನ ಚಕ್ರಗಳನ್ನು ಉಪಯೋಗಿಸಲಾಗಿದೆ. ಎಪ್ರಿಲಿಯಾ ಗೇರ್ ವಿಭಾಗದಲ್ಲಿ ಸುಧಾರಣೆ ತಂದಿದ್ದು ಇದರಿಂದಾಗಿ ಹೆಚ್ಚು ಇಂಧನ ಉಪಯೋಗಿಸದೆ ಸ್ಕೂಟರ್ ನ ವೇಗ ಹೆಚ್ಚಿಸಬಹುದಾಗಿದೆ.

ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ

ಇಷ್ಟೆಲ್ಲಾ ವ್ಯಶೀಷ್ಟ್ಯತೆಗಳನ್ನು ಹೊಂದಿರುವ ಈ ಗಾಡಿಯು ಭಾರತದ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ.

ಈ ಕೆಳಗಿನ ಎಪ್ರಿಲಿಯಾ ರೇಸ್ ಎಸ್ಆರ್ 150 ಸ್ಕೂಟರ್ ಚಿತ್ರಗಳನ್ನು ವೀಕ್ಷಿಸಿ

English summary
Aprilia SR 150 race edition launched in India. The new SR 150 Race receives mechanical and cosmetic updates.
Story first published: Thursday, February 9, 2017, 18:31 [IST]
Please Wait while comments are loading...

Latest Photos