ಅಥೇರ್ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಸುನಿತಾ ಲಾಲ್ ನೇಮಕ

Written By:

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ ಅಪ್ ಕಂಪೆನಿಯಾದ ಅಥೇರ್ ಎನರ್ಜಿ ತನ್ನ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಸುನಿತಾ ಲಾಲ್ ಅವರನ್ನು ನೇಮಕ ಮಾಡಿದೆ.

To Follow DriveSpark On Facebook, Click The Like Button
ಅಥೇರ್ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಸುನಿತಾ ಲಾಲ್ ನೇಮಕ

ಅಥೇರ್ ಸಂಸ್ಥೆ ತನ್ನ ಮೊಟ್ಟ ಮೊದಲ ಉತ್ಪನ್ನವಾದ ಎಸ್340 ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲು ಸಿದ್ಧತೆ ನೆಡೆಸಿದ್ದು, ತನ್ನ ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸುನಿತಾ ಲಾಲ್ ಅವರನ್ನು ನೇಮಿಸಿದ್ದು, ಮುಂಬರುವ ದಿನಗಳಲ್ಲಿ ಸುನಿತಾ ಅವರು ಸಂಸ್ಥೆಯ ಮುಖ್ಯ ಭಾಗವಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಅಥೇರ್ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಸುನಿತಾ ಲಾಲ್ ನೇಮಕ

ಸುನಿತಾ ಅವರು ಅಧಿಕಾರ ವಹಿಸಿಕೊಂಡ ತಕ್ಷಣ ಎಲೆಕ್ಟ್ರಿಕ್ ಸಂಸ್ಥೆಯ ಸಂಸ್ಕೃತಿ ವಿವರಿಸುವ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದ್ದು, ಭಾರತದಲ್ಲಿ ಕಂಪನಿಯ ಮೂಲ ಉದ್ದೇಶದ ಬಗ್ಗೆ ಕಾರ್ಯತಂತ್ರ ರೂಪಿಸಲಿದ್ದಾರೆ.

ಅಥೇರ್ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಸುನಿತಾ ಲಾಲ್ ನೇಮಕ

ಕೆಲವು ದಿನಗಳ ಹಿಂದೆ ಅಥೇರ್ ಸಂಸ್ಥೆ ತನ್ನ ವಾಹನ ಅಭಿವೃದ್ಧಿ ವಿಭಾಗದ ಸಿಓಓ ಆಗಿ ವೆಂಕಿ ಪದ್ಮನಾಭನ್ ಅವರನ್ನು ಮತ್ತು ವಿಪಿ ಆಗಿ ತಿರುಪತಿ ಶ್ರೀನಿವಾಸನ್ ಅವರನ್ನು ನೇಮಕ ಮಾಡಿತ್ತು.

ಅಥೇರ್ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಸುನಿತಾ ಲಾಲ್ ನೇಮಕ

2007ರಲ್ಲಿ, ಸುನಿತಾ ಅವರು ಎಐಜಿ ಸಿಸ್ಟಮ್ಸ್ ಸಲ್ಯೂಷನ್ ಸಂಸ್ಥೆಯ ಉಪಾಧ್ಯಕ್ಷರಾಗಿ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಮತ್ತು 2009ರಲ್ಲಿ ಎಂಫಸಿಸ್ ಕಂಪನಿಯ ಗ್ಲೋಬಲ್ ಹೆಡ್ ಆಫ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಹಾಗು ಬಿಸಿನೆಸ್ ಎಚ್‌.ಆರ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಅಥೇರ್ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಸುನಿತಾ ಲಾಲ್ ನೇಮಕ

ಸುನಿತಾ ಅವರು ಮಾನವ ಸಂಪನ್ಮೂಲ ವಿಭಾಗದಲ್ಲಿ 20 ವರ್ಷಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ ಮತ್ತು ಸಾಂಸ್ಥಿಕ, ನಾಯಕತ್ವ ಅಭಿವೃದ್ಧಿ, ಸಾಧನೆ ಮತ್ತು ತರಬೇತಿ ವ್ಯವಸ್ಥೆಗಳು ಬಗ್ಗೆ ಗಮನಾರ್ಹ ಹಿನ್ನೆಲೆ ಪಡೆದುಕೊಂಡಿದ್ದಾರೆ.

ಅಥೇರ್ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಸುನಿತಾ ಲಾಲ್ ನೇಮಕ

ಸ್ಟಾರ್ಟ್ ಅಪ್ ಕಂಪನಿ ತನ್ನ ಮೊಟ್ಟ ಮೊದಲ ಉತ್ಪನ್ನವಾದ ಎಸ್340 ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲು ಸಿದ್ಧತೆ ನೆಡೆಸಿದ್ದು, ಕಳೆದ ಕೆಲವು ತಿಂಗಳುಗಳಲ್ಲಿ ಹಲವು ಹಿರಿಯ ಉದ್ಯಮ ಅನುಭವಿಗಳು ನೇಮಿಸಿಕೊಂಡಿದೆ ಹಾಗು ತನ್ನ ವ್ಯಾಪಾರವನ್ನು ವಿಸ್ತರಿಸುವ ಕಡೆಗೆ ಕಂಪನಿಯ ಹೆಚ್ಚು ಗಮನ ಹರಿಸುತ್ತಿದೆ ಎನ್ನಬಹುದು.

Read more on ಅಥೇರ್ ather
English summary
Electric two-wheeler start-up company Ather Energy has hired Sunitha Lal as the Head of Human Resources.
Story first published: Thursday, August 3, 2017, 19:14 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark