ಬಜಾಜ್ ಪಲ್ಸರ್ ಬ್ಲ್ಯಾಕ್ ಪ್ಯಾಕ್ ಆವೃತ್ತಿ ಭಾರತದಲ್ಲಿ ಪ್ರಾರಂಭ
ಬಜಾಜ್ ಆಟೋ ಸಂಸ್ಥೆಯ ಪ್ರಖ್ಯಾತ ಬ್ರ್ಯಾಂಡ್ ಎಂದು ಖ್ಯಾತಿ ಪಡೆದಿರುವ 'ಪಲ್ಸರ್', ಸದ್ಯ ಒಂದು ಕೋಟಿ ಪಲ್ಸರ್ ಬೈಕುಗಳ ಮಾರಾಟದ ಮೈಲಿಗಲ್ಲನ್ನು ತಪುಪಿದ್ದು, ಈ ವಿಶೇಷ ಸಂದರ್ಭದಲ್ಲಿ ಹೊಸ ಸುದ್ದಿಯೊಂದಿಗೆ ನಿಮ್ಮ ಮುಂದೆ ಬಂದಿದೆ.
ಬಜಾಜ್ ಆಟೋ ಸಂಸ್ಥೆಯ ಪ್ರಖ್ಯಾತ ಬ್ರ್ಯಾಂಡ್ ಎಂದು ಖ್ಯಾತಿ ಪಡೆದಿರುವ 'ಪಲ್ಸರ್', ಸದ್ಯ ಒಂದು ಕೋಟಿ ಪಲ್ಸರ್ ಬೈಕುಗಳ ಮಾರಾಟದ ಮೈಲಿಗಲ್ಲನ್ನು ತಪುಪಿದ್ದು, ಈ ವಿಶೇಷ ಸಂದರ್ಭದಲ್ಲಿ ಹೊಸ ಸುದ್ದಿಯೊಂದಿಗೆ ನಿಮ್ಮ ಮುಂದೆ ಬಂದಿದೆ.

ಹೌದು, ಬಜಾಜ್ ಸದ್ಯ ಭಾರತದ ಪ್ರಖ್ಯಾತ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಎಲ್ಲಾ ವರ್ಗದ ಗ್ರಾಹಕರಿಗೆ ಅತ್ಯಾಕರ್ಷಕ ಬೆಲೆಯಲ್ಲಿ, ಹಲವಾರು ಮಾದರಿಗಳನ್ನು ಈ ಬ್ರ್ಯಾಂಡ್ ಪಡೆದುಕೊಂಡಿದೆ. ಈಗ 2018ರ ಬಜಾಜ್ ಪಲ್ಸರ್ 150 ಮತ್ತು 180 ಎಫ್ ಸರಣಿಯ ಬ್ಲ್ಯಾಕ್ ಪ್ಯಾಕ್ ಆವೃತ್ತಿಯನ್ನು ಪ್ರಾರಂಭಿಸಿದೆ.

ಈ ವಿಶೇಷ ಆವೃತ್ತಿಯ ಪಲ್ಸರ್ ಬೈಕ್, ಹೊಸ ಬಣ್ಣದ ಯೋಜನೆ, ಗ್ರಾಫಿಕ್ಸ್ ಮತ್ತು ಬಿಳಿ ಮಿಶ್ರಲೋಹದ ಚಕ್ರಗಳು ಪಡೆಯುತ್ತದೆ. ಈ ಎಲ್ಲಾ ವಿಶೇಷತೆಗಳು ಪ್ರಸಿದ್ಧ ಬ್ರ್ಯಾಂಡ್‌ನ ಸ್ಟೈಲಿಂಗ್ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ.

ಈ ವಿಶೇಷ ಆವೃತ್ತಿಯ ಮೋಟರ್ ಸೈಕಲ್‌ಗಳಲ್ಲಿ ಸ್ಯಾಟಿನ್ ಕ್ರೋಮ್ ಎಕ್ಸ್‌ಸಾಸ್ಟ್ ಕವರ್ ನೀಡಲಾಗಿದೆ. ಈ ಹೊಸ ರೀತಿಯ ವಿನ್ಯಾಸವು ಮೂರು ದ್ವಿಚಕ್ರ ವಾಹನಗಳಲ್ಲಿ ಒಂದೇ ರೀತಿಯಲ್ಲಿ ಇರಲಿದೆ ಎಂಬುದನ್ನು ಗಮನಿಸಬಹುದು.

"ವಿಶ್ವದಾದ್ಯಂತ 1 ಕೋಟಿ ಪಲ್ಸರ್ ಗ್ರಾಹಕರ ಮೈಲಿಗಲ್ಲನ್ನು ಸಾಧಿಸಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ, ಈ ಸಾಧನೆಯ ಸ್ಮರಣಾರ್ಥವಾಗಿ, ನಾವು ಅನನ್ಯ ಬ್ಲಾಕ್ ಪ್ಯಾಕ್ ಆವೃತ್ತಿಯನ್ನು ಪ್ರಸ್ತುತಪಡಿಸಿದ್ದೇವೆ" ಎಂದು ಬಜಾಜ್ ಆಟೋ ಮೋಟಾರ್‌ಸೈಕಲ್ ವಿಭಾಗದ ಅಧ್ಯಕ್ಷರಾದ ಎರಿಕ್ ವಾಸ್ ತಿಳಿಸಿದ್ದಾರೆ.

ಬಜಾಜ್ ಆಟೋ ಸಂಸ್ಥೆಯು 16 ವರ್ಷಗಳ ಹಿಂದೆ 150 ಸಿಸಿ ಎಂಜಿನ್ ಆಯ್ಕೆಯೊಂದಿಗೆ ಪಲ್ಸರ್ ಬ್ರಾಂಡನ್ನು ಮೊದಲ ಬಾರಿಗೆ ಪ್ರಾರಂಭಿಸಿತ್ತು. ಕಾಲಾನಂತರದಲ್ಲಿ, ಬಜಾಜ್ ಹೆಚ್ಚಿನ ಶಕ್ತಿಯನ್ನು ಪಡೆದು ಮತ್ತು ಹೆಚ್ಚಿನ ಆಯ್ಕೆಯಲ್ಲಿ ಬಿಡುಗಡೆಗೊಂಡಿತು ಹಾಗು ಅಭಿಮಾನಿಗಳ ಮತ್ತು ಸ್ವಯಂ ಉತ್ಸಾಹಿಗಳಿಂದ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿತು.

ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ ಪಲ್ಸರ್ ಬ್ರ್ಯಾಂಡ್ ಉತ್ತಮ ಮಾರಾಟವಾದ ಮೋಟರ್ ಸೈಕಲ್‌ಗಳಲ್ಲಿ ಒಂದಾಗಿದೆ. ಬಜಾಜ್ ಸ್ಕೂಟರ್ ನಿರ್ಮಾಣದಲ್ಲಿ ಹಿಂದುಳಿದರೂ ಸಹ ಮೋಟಾರ್ ಸೈಕಲ್ ತಯಾರಿಕೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.


Click it and Unblock the Notifications








