ರೂ. 29 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಕೆ 1600 ಬಿ ಬೈಕ್ ಭಾರತದಲ್ಲಿ ಬಿಡುಗಡೆ

Written By:

ದೇಶಿಯ ಮಾರುಕಟ್ಟೆಯಲ್ಲಿ ಐಷಾರಾಮಿ ಬೈಕ್‌ಗಳ ಮಾರಾಟ ಪ್ರಕ್ರಿಯೆಯನ್ನು ಚುರುಕುಗೊಳಿಸಿರುವ ಬಿಎಂಡಬ್ಲ್ಯು ಸಂಸ್ಥೆಯು ತನ್ನ ಬಹುನೀರಿಕ್ಷಿತ ಕೆ 1600 ಬಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.29 ಲಕ್ಷಕ್ಕೆ ನಿಗದಿ ಮಾಡಿದೆ.

ರೂ. 29 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಕೆ 1600 ಬಿ ಬೈಕ್ ಭಾರತದಲ್ಲಿ ಬಿಡುಗಡೆ

ಕಳೆದ 2 ದಿನಗಳಿಂದ ನವದೆಹಲಿಯಲ್ಲಿ ನಡೆದಿರುವ ಐಬಿಡಬ್ಲ್ಯು 2017 ಕಾರ್ಯಕ್ರಮದಲ್ಲಿ ತನ್ನ ಹೊಸ ಉತ್ಪನ್ನ ಬಗ್ಗೆ ಮಹತ್ವದ ಚರ್ಚೆ ನಡೆಸಿರುವ ಬಿಎಂಡಬ್ಲ್ಯು ಸಂಸ್ಥೆಯು ಕೆ 1600 ಬಿ ಜೊತೆಗೆ ಆರ್ ನೈನ್ ಟಿ ರೇಸರ್ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡಿರುವ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ರೂ. 29 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಕೆ 1600 ಬಿ ಬೈಕ್ ಭಾರತದಲ್ಲಿ ಬಿಡುಗಡೆ

ಬಿಎಂಡಬ್ಲ್ಯು ಸಂಸ್ಥೆಯು ಕೆ 1600 ಬಿ ಮಾದರಿಯನ್ನು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಟೂರಿಂಗ್ ಜರ್ನಿ ಮಾಡುವ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇದೀಗ ಭಾರತೀಯ ಮಾರುಕಟ್ಟೆಗೂ ಪರಿಚಯಿಸಿದೆ.

Recommended Video - Watch Now!
Triumph Thruxton R Review: Specifications
ರೂ. 29 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಕೆ 1600 ಬಿ ಬೈಕ್ ಭಾರತದಲ್ಲಿ ಬಿಡುಗಡೆ

ಇನ್ನು ಕೆ 1600 ಬಿ ವಿಶೇಷತೆಗಳ ಬಗ್ಗೆ ಮಾತನಾಡುವುದಾರರೇ ಅತ್ಯಾಧುನಿಕ ಮಾದರಿಯ ಎಲ್ಲ ಸೌಲಭ್ಯ ಹೊಂದಿದ್ದು, ಟೂರಿಂಗ್ ಮಾಡುವ ಗ್ರಾಹಕರನ್ನು ಗಮದಲ್ಲಿಟ್ಟುಕೊಂಡು ಸೀಟುಗಳ ಹಾಗೂ ಎಕ್ಸಾಸ್ಟ್ ವಿನ್ಯಾಸವನ್ನು ರಚನೆ ಮಾಡಿದೆ.

ರೂ. 29 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಕೆ 1600 ಬಿ ಬೈಕ್ ಭಾರತದಲ್ಲಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

1,649 ಸಿಸಿ ಇನ್ ಲೈನ್ ಸಿಕ್ಸ್ ಸಿಲಿಂಡರ್ ಎಂಜಿನ್ ಹೊಂದಿರುವ ಕೆ 1600 ಬಿ ಬೈಕ್ ಆವೃತ್ತಿಯು 160-ಬಿಎಚ್‌ಪಿ ಮತ್ತು 175-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಅಲ್ಲದೇ 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ಕ್ರೂಸ್ ರೈಡ್ ಸೌಲಭ್ಯವನ್ನು ಹೊಂದಿದೆ.

ರೂ. 29 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಕೆ 1600 ಬಿ ಬೈಕ್ ಭಾರತದಲ್ಲಿ ಬಿಡುಗಡೆ

ಜೊತೆಗೆ 5.7 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟಲ್ ಕನ್‌ಸೊಲ್ ವಿಥ್ ಸ್ಯಾಟಲೈಟ್ ರೆಡಿಯೋ, ಬ್ಯೂಟುತ್ ಕನೆಟ್ವಿಟಿ, ಎಬಿಎಸ್ ಪ್ರೊ ಸಿಸ್ಟಂ, ಡೈನಾಮಿಕ್ ಬ್ರೈಕ್ ಲೈಟ್, ಎರಡು ಬದಿಯಲ್ಲು ಡಿಸ್ಕ್ ಬ್ರೈಕ್ ಸೌಲಭ್ಯ, ಜೈಲನ್ ಹೆಡ್‌ಲ್ಯಾಂಪ್, ಸೀಟ್ ಹಿಟಿಂಗ್ ಕಂಟ್ರೋಲರ್ ವ್ಯವಸ್ಥೆಯನ್ನು ನೀಡಲಾಗಿದೆ.

ರೂ. 29 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಕೆ 1600 ಬಿ ಬೈಕ್ ಭಾರತದಲ್ಲಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟೂರಿಂಗ್ ಬೈಕ್ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಕೈಗೊಂಡಿರುವ ಬಿಎಂಡಬ್ಲ್ಯು ಸಂಸ್ಥೆಯು ಹೊಸ ಹೊಸ ಬೈಕ್ ಉತ್ಪನ್ನಗಳನ್ನು ಪರಿಚಯಿಸುವ ತವಕದಲ್ಲಿದ್ದು, ಸದ್ಯ ಬಿಡುಗಡೆಯಾಗಿರುವ ಕೆ 1600 ಬಿ ಮುಂದಿನ ವಾರ ಖರೀದಿ ಲಭ್ಯವಿರುತ್ತವೆ.

ತಪ್ಪದೇ ಓದಿ-ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ- ಇಕ್ಕಟ್ಟಿಗೆ ಸಿಲುಕಿದ ನಟ ವರುಣ್ ಧವನ್

English summary
Read in Kannada about BMW K 1600 B Launched In India For Rs 29 Lakh At IBW 2017.
Story first published: Saturday, November 25, 2017, 14:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark