ಎನ್‌ಫೀಲ್ಡ್ ವಿ-ಟ್ವಿನ್ ಇಂಜಿನ್ ಪಡೆದ ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ಭಾರತದಲ್ಲಿ ಬಿಡುಗಡೆ

Written By:

ಕಾರ್ಬೆರ್ರಿ ಮೋಟಾರ್‌ಸೈಕಲ್ ಡಬಲ್ ಬ್ಯಾರೆಲ್ 1000 ಭಾರತದಲ್ಲಿ ಬಿಡುಗಡೆಯಾಗಿದೆ. ಈ ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ರೂ. 7.35 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ.

ಎನ್‌ಫೀಲ್ಡ್ ವಿ-ಟ್ವಿನ್ ಇಂಜಿನ್ ಪಡೆದ ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ಭಾರತದಲ್ಲಿ ಬಿಡುಗಡೆ

ಕಾರ್ಬೆರಿಯಿಂದ ಡಬಲ್ ಬ್ಯಾರೆಲ್ 1000 ಮೋಟಾರ್ ಸೈಕಲ್ ಕೇವಲ 29 ಘಟಕಗಳಿಗೆ ಸೀಮಿತವಾಗಲಿದ್ದು, ಕೇವಲ ಒಂದು ಲಕ್ಷ ರೂ ನೀಡಿ ತಮ್ಮ ಮೋಟಾರ್ ಸೈಕಲ್ ಬುಕ್ ಮಾಡಬಹುದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಬುಕ್ ಮಾಡಿದ ನಂತರ ಐದು ರಿಂದ ಹತ್ತು ತಿಂಗಳುಗಳ ಕಾಯುವ ಅವಧಿಯನ್ನು ಈ ಬೈಕ್ ಪಡೆದುಕೊಂಡಿದೆ.

ಎನ್‌ಫೀಲ್ಡ್ ವಿ-ಟ್ವಿನ್ ಇಂಜಿನ್ ಪಡೆದ ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ಭಾರತದಲ್ಲಿ ಬಿಡುಗಡೆ

ಕಾರ್ಬೆರಿ ಡಬಲ್ ಬ್ಯಾರೆಲ್ 1000 ಮೋಟಾರ್ ಸೈಕಲ್ ಎರಡು 500ಸಿಸಿ ರಾಯಲ್ ಎನ್‌ಫೀಲ್ಡ್ ಬೈಕುಗಳ ಸಂಯೋಜನೆಯೊಂದಿಗೆ ಉತ್ಪಾದನೆ ಮಾಡಿದ್ದು, ಏರ್ ಕೋಲ್ಡ್ 1000ಸಿಸಿ ಎಂಜಿನ್ ವಿ-ಟ್ವಿನ್ ಎಂಜಿನ್ ಆಯ್ಕೆ ಹೊಂದಿದೆ.

ಎನ್‌ಫೀಲ್ಡ್ ವಿ-ಟ್ವಿನ್ ಇಂಜಿನ್ ಪಡೆದ ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ಭಾರತದಲ್ಲಿ ಬಿಡುಗಡೆ

ವಿ-ಟ್ವಿನ್ ಎಂಜಿನ್ 82 ಎನ್‌ಎಂ ತಿರುಗುಬಲದಲ್ಲಿ 52.19 ಬಿಎಚ್‌ಪಿ ಗರಿಷ್ಠ ಟರ್ಕನ್ನು ಉತ್ಪಾದಿಸುತ್ತದೆ ಮತ್ತು ಈ ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ಮೋಟಾರ್‌ಸೈಕಲ್ ಐದು-ವೇಗದ ಗೇರ್‌ಬಾಕ್ಸ್ ಶಕ್ತಿಯನ್ನು ಹಿಂಬದಿ ಚಕ್ರಕ್ಕೆ ಕಳುಹಿಸುತ್ತದೆ.

ಎನ್‌ಫೀಲ್ಡ್ ವಿ-ಟ್ವಿನ್ ಇಂಜಿನ್ ಪಡೆದ ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ಭಾರತದಲ್ಲಿ ಬಿಡುಗಡೆ

ಕಾರ್ಬೆರ್ರಿ ಮೋಟಾರ್‌ಸೈಕಲ್ ಡಬಲ್ ಬ್ಯಾರೆಲ್ 1000, ಕಸ್ಟಮ್ ಚಾಸಿಸ್ ಮತ್ತು ಸ್ಪೋರ್ಟ್ಸ್ ಏಳು ಕ್ಲಚ್ ಪ್ಲೇಟ್ ಮತ್ತು ಹೆಚ್ಚಿನ ಸಾಮರ್ಥ್ಯದ ಪ್ರಾಥಮಿಕ ಚೈನ್ ಪಡೆದುಕೊಂಡಿದೆ. ಬೈಕು ಹೆವಿ ಡ್ಯೂಟಿ ಸ್ಟಾರ್ಟರನ್ನು ಸಹ ಹೊಂದಿದೆ ಹಾಗು ಲಿಫ್ಟ್‌ಗಳು ಮತ್ತು ಆಯಿಲ್ ಪಂಪ್ ಇಂಜಿನ್‌ಗಳು ತಮ್ಮದೇ ವಿಭಾಗದಲ್ಲಿ ಕಾರ್ಯನಿರ್ವಹಿಸುವುದರಿಂದ ವೆರ್ ಮತ್ತೆ ಟೆರ್ ತಡೆಗಟ್ಟುತ್ತವೆ.

ಎನ್‌ಫೀಲ್ಡ್ ವಿ-ಟ್ವಿನ್ ಇಂಜಿನ್ ಪಡೆದ ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ಭಾರತದಲ್ಲಿ ಬಿಡುಗಡೆ

ಹೊಸ ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ಮೋಟಾರ್ ಸೈಕಲ್ ಅನ್ನು ಭಿಲಾಯಿ, ದುರ್ಗ್, ಛತ್ತಿಸ್ಗಢ್‌ನಲ್ಲಿರುವ ತಯಾರಕರ ಘಟಕದಲ್ಲಿ ತಯಾರಿಸಲಾಗುತ್ತದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಎನ್‌ಫೀಲ್ಡ್ ವಿ-ಟ್ವಿನ್ ಇಂಜಿನ್ ಪಡೆದ ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ಭಾರತದಲ್ಲಿ ಬಿಡುಗಡೆ

ಕಾರ್ಬೆರ್ರಿ ಡಬಲ್ ಬ್ಯಾರೆಲ್ 1000 ರಾಯಲ್ ಎನ್‌ಫೀಲ್ಡ್ ವಿ-ಟ್ವಿನ್ ನೋಡುವವರಿಗೆ ಪರಿಪೂರ್ಣ ಬೈಕ್ ಎಂದು ತೋರುತ್ತದೆ. ಆದರೂ ಸಹ ಮಾರಾಟ ನಂತರದ ನೆಟ್ವರ್ಕ್ ಸೇವೆ ಮತ್ತು ಬೈಕಿನ ಬೆಲೆಯ ಬಗ್ಗೆ ಖರೀದಿದಾರರು ಕೊಂಚ ಮಟ್ಟಿಗೆ ಜಾಗರೂಕವಾಗಿರುವುದು ಒಳಿತು.

English summary
Carberry MotorcyclesDouble Barrel 1000 launched in India. The Carberry Double Barrel 1000 is priced at Rs 7.35 lakh ex-showroom.
Story first published: Monday, October 9, 2017, 19:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark